Posts

Showing posts from January, 2025

ವಿವೇಕ ಚೂಡಾಮಣಿ - 81-100

ವಿಷಮವಿಷಯಮಾರ್ಗೈರ್ಗಚ್ಛತೋಽನಚ್ಛಬುದ್ಧೇಃ        ಪ್ರತಿಪದಮಭಿಯಾತೋ ಮೃತ್ಯುರಪ್ಯೇಷ ವಿದ್ಧಿ .     ಹಿತಸುಜನಗುರೂಕ್ತ್ಯಾ ಗಚ್ಛತಃ ಸ್ವಸ್ಯ ಯುಕ್ತ್ಯಾ     ಪ್ರಭವತಿ ಫಲಸಿದ್ಧಿಃ ಸತ್ಯಮಿತ್ಯೇವ ವಿದ್ಧಿ .. 81..   ತಪ್ಪು ದಾರಿಯಲ್ಲಿ ಹೋಗುತ್ತಿರುವ ಮಲಿನ ಬುದ್ಧಿಯವನನ್ನು ಮೃತ್ಯುವು ಸದಾ ಹಿಂಬಾಲಿಸುತ್ತಿರುತ್ತದೆ - ಇದನ್ನು ತಿಳಿದುಕೋ. ಒಳ್ಳೇ ಜನರ ಮತ್ತು ಗುರುವಿನ ಹಿತನುಡಿಯಂತೆ ಮತ್ತು ಸ್ವಂತ ಯುಕ್ತಿಯಂತೆ ನಡೆಯುವನಿಗೆ ಫಲ ಪ್ರಾಪ್ತಿಯಾಗುತ್ತದೆ- ಇದನ್ನೂ ತಿಳಿದುಕೋ.   ಮೋಕ್ಷಸ್ಯ ಕಾಂಕ್ಷಾ ಯದಿ ವೈ ತವಾಸ್ತಿ     ತ್ಯಜಾತಿದೂರಾದ್ವಿಷಯಾನ್ವಿಷಂ ಯಥಾ . ಪೀಯೂಷವತ್ತೋಷದಯಾಕ್ಷಮಾರ್ಜವ-     ಪ್ರಶಾಂತಿದಾಂತೀರ್ಭಜ ನಿತ್ಯಮಾದರಾತ್ .. 82.. ನಿನಗೆ ಮೋಕ್ಷದ ಆಸೆಯಿದ್ದರೆ,  ಇಂದ್ರಿಯ ಸುಖ ವನ್ನು, ವಿಷದಂತೆ ದೂರವಿಡು. ಯಾವಾಗಲೂ ಅಮೃತದಂತಹ- ಸಂತೋಷ, ದಯೆ, ಕ್ಷಮೆ, ಸರಳತೆ, ದಮ, ಶಮ ಈ ಗುಣಗಳನ್ನು ನಿತ್ಯವೂ ಜತನದಿಂದ ಬೆಳೆಸಿಕೋ.   ಅನುಕ್ಷಣಂ ಯತ್ಪರಿಹೃತ್ಯ ಕೃತ್ಯಂ     ಅನಾದ್ಯವಿದ್ಯಾಕೃತಬಂಧಮೋಕ್ಷಣಂ . ದೇಹಃ ಪರಾರ್ಥೋಽಯಮಮುಷ್ಯ ಪೋಷಣೇ     ಯಃ ಸಜ್ಜತೇ ಸ ಸ್ವಮನೇನ ಹಂತಿ .. 83.. ಯಾರು, ಪ್ರತಿ ಕ್ಷಣವೂ ಮಾಡಬೇಕಾದ, ಮೌಢ್ಯದ ಬಂಧನದಿಂದ ವಿಮೋಚನೆ...

ವಿವೇಕ ಚೂಡಾಮಣಿ - 101-125

ಅಂಧತ್ವಮಂದತ್ವಪಟುತ್ವಧರ್ಮಾಃ    ಸೌಗುಣ್ಯವೈಗುಣ್ಯವಶಾದ್ಧಿ ಚಕ್ಷುಷಃ . ಬಾಧಿರ್ಯಮೂಕತ್ವಮುಖಾಸ್ತಥೈವ       ಶ್ರೋತ್ರಾದಿಧರ್ಮಾ ನ ತು ವೇತ್ತುರಾತ್ಮನಃ .. 101.. ಕುರುಡುತನ, ನಿರ್ಬಲತೆ, ತೀಕ್ಷ್ಣ ದೃಷ್ಟಿ ಇವೆಲ್ಲ ಕಣ್ಣೆರಡರ ಶಕ್ತಿ ಅಥವಾ ದುರ್ಬಲತೆಯ ಪರಿಣಾಮಗಳು. ಹಾಗೆಯೇ ಕಿವುಡುತನ, ಮೂಕತನ ಇವೆಲ್ಲ ಕಿವಿಯ ಸಬಲತೆ ಅಥವಾ ದುರ್ಬಲತೆಯ ಪರಿಣಾಮ. ಹೊರತು ಇವೆಲ್ಲ ಆತ್ಮದ ದೋಷಗಳಲ್ಲ. ಉಚ್ಛ್ವಾಸನಿಃಶ್ವಾಸವಿಜೃಂಭಣಕ್ಷು-     ತ್ಪ್ರಸ್ಯಂದನಾದ್ಯುತ್ಕ್ರಮಣಾದಿಕಾಃ ಕ್ರಿಯಾಃ .   ಪ್ರಾಣಾದಿಕರ್ಮಾಣಿ ವದಂತಿ ತಜ್ಞಾಃ        ಪ್ರಾಣಸ್ಯ ಧರ್ಮಾವಶನಾಪಿಪಾಸೇ .. 102.. ಉಚ್ಛ್ವಾಸ, ನಿಃಶ್ವಾಸ, ಆಕಳಿಕೆ, ಸೀನು, ಸ್ರಾವ, ಶರೀರವನ್ನು ತ್ಯಜಿಸುವದು ಇವೆಲ್ಲ ಪ್ರಾಣದ ಧರ್ಮಗಳೆಂದು ಹೇಳುತ್ತಾರೆ. ಹಸಿವು ಬಾಯಾರಿಕೆಗಳೂ ಪ್ರಾಣದ ಧರ್ಮಗಳು. ಅಂತಃಕರಣಮೇತೇಷು ಚಕ್ಷುರಾದಿಷು ವರ್ಷ್ಮಣಿ . ಅಹಮಿತ್ಯಭಿಮಾನೇನ ತಿಷ್ಠತ್ಯಾಭಾಸತೇಜಸಾ .. 103.. ಅಂತಃಕರಣವು ಈ ಕಣ್ಣು, ಶರೀರ ಇತ್ಯಾದಿ ಅಂಗಗಳಲ್ಲಿ ನಾನು ಎಂಬ ಅಭಿಮಾನದಿಂದ ಮತ್ತು ಆತ್ಮದ ಪ್ರತಿಬಂಬವಾಗಿ ಕುಳಿತಿರುತ್ತದೆ. ಅಹಂಕಾರಃ ಸ ವಿಜ್ಞೇಯಃ ಕರ್ತಾ ಭೋಕ್ತಾಭಿಮಾನ್ಯಯಂ . ಸತ್ತ್ವಾದಿಗುಣಯೋಗೇನ ಚಾವಸ್ಥಾತ್ರಯಮಶ್ನುತೇ .. 104..  ಸತ್ವಾದಿ ಗುಣಗಳ ಕಾರಣದಿಂದ, ಕರ್ತೃ ಮತ್ತು ಭೋಗಿಸುವವನು ಆ...

ವಿವೇಕ ಚೂಡಾಮಣಿ - 126-150

ಯೋ ವಿಜಾನಾತಿ ಸಕಲಂ ಜಾಗ್ರತ್ಸ್ವಪ್ನಸುಷುಪ್ತಿಷು . ಬುದ್ಧಿತದ್ವೃತ್ತಿಸದ್ಭಾವಮಭಾವಮಹಮಿತ್ಯಯಂ .. 126..   ಯಾವುದು ಜಾಗ್ರತ, ಸ್ವಪ್ನ ಮತ್ತು ಸುಷುಪ್ತಿ ಅವಸ್ಥೆಗಳಲ್ಲಿ, ಬುದ್ಧಿ ಹಾಗೂ ಅದರ ವೃತ್ತಿ, ಸದ್ಭಾವ, ಅಭಾವ,ಅಹಂ ಇವೆಲ್ಲವನ್ನೂ ತಿಳಿದಿರುವದೋ, ಅದೇ ಆತ್ಮ. ಯಃ ಪಶ್ಯತಿ ಸ್ವಯಂ ಸರ್ವಂ ಯಂ ನ ಪಶ್ಯತಿ ಕಶ್ಚನ . ಕಿಂಚನ ಯಶ್ಚೇತಯತಿ ಬುದ್ಧ್ಯಾದಿ ನ ತದ್ಯಂ ಚೇತಯತ್ಯಯಂ .. 127.. ಯಾವುದು ಸ್ವತಃ ಎಲ್ಲವನ್ನೂ ನೋಡುವದೋ, ಆದರೆ ಅದನ್ನು ಮಾತ್ರ ಯಾರೂ ನೋಡಲಾರರೋ, ಯಾವುದು ಬುದ್ಧಿ ಇತ್ಯಾದಿಗಳನ್ನು ಎಲ್ಲವನ್ನೂ ಪ್ರಕಾಶಿಸುತ್ತದೆಯೋ, ಆದರೆ ಅದನ್ನು ಯಾರೂ ಪ್ರಕಾಶಿಸಲಾರರೋ, ಅದೇ ಆತ್ಮ. ಯೇನ ವಿಶ್ವಮಿದಂ ವ್ಯಾಪ್ತಂ ಯಂ ನ ವ್ಯಾಪ್ನೋತಿ ಕಿಂಚನ. ಆಭಾರೂಪಮಿದಂ ಸರ್ವಂ ಯಂ ಭಾಂತಮನುಭಾತ್ಯಯಂ .. 128.. ಯಾವುದರಿಂದ ಈ ವಿಶ್ವವೆಲ್ಲ ವ್ಯಾಪಸಿಕೊಂಡಿದೆಯೋ, ಆದರೆ ಅದನ್ನು ಯಾವುದೂ ವ್ಯಾಪಿಸಲಾರದೋ, ಪ್ರಕಾಶರೂಪವಾದ ಯಾವುದು ಬೆಳಗಿದಾಗ ವಿಶ್ವವೆಲ್ಲ ಅದರ ಪ್ರತಿಫಲನದಿಂದ ಬೆಳಗುವದೋ, ಅದೇ ಆತ್ಮ. ಯಸ್ಯ ಸನ್ನಿಧಿಮಾತ್ರೇಣ ದೇಹೇಂದ್ರಿಯಮನೋಧಿಯಃ . ವಿಷಯೇಷು ಸ್ವಕೀಯೇಷು ವರ್ತಂತೇ ಪ್ರೇರಿತಾ ಇವ .. 129.. ಯಾವುದರ ಸಾನ್ನಿಧ್ಯ ಮಾತ್ರದಿಂದ ದೇಹ, ಇಂದ್ರಿಯ, ಮನಸ್ಸು, ಬುದ್ಧಿಗಳು ತಮ್ಮ ತಮ್ಮ ಸ್ವಕೀಯ ಕಾರ್ಯಗಳಲ್ಲಿ ತೊಡಗುವವೋ (ಅದೇ ಆತ್ಮ).. ಅಹಂಕಾರಾದಿದೇಹಾಂತಾ ವಿಷಯಾಶ್ಚ ಸುಖಾದಯಃ . ವೇದ್ಯಂತೇ ಘಟವದ್ಯೇನ ನಿತ್ಯಬೋಧಸ್...

ವಿವೇಕ ಚೂಡಾಮಣಿ - 151 - 175

ಪಂಚಾನಾಮಪಿ ಕೋಶಾನಾಮಪವಾದೇ ವಿಭಾತ್ಯಯಂ ಶುಧ್ಧ: ನಿತ್ಯಾನಂದೈಕರಸ: ಪ್ರತ್ಯಗ್ರೂಪ: ಪರ: ಸ್ವಯಂಜ್ಯೋತಿ: . . ೧೫೧ . . . ಪಂಚಕೋಶಗಳನ್ನು ತೆಗೆದುಹಾಕಿದಾಗ, ಶುದ್ಧನಾದ, ನಿತ್ಯಾನಂದನಾದ, ಏಕರಸನಾದ, ಸರ್ವಂತರ್ಯಾಮಿಯಾದ, ಪರನಾದ, ಸ್ವಯಂಪ್ರಕಾಶನಾದ ಈ ಆತ್ಮನು ಕಾಣಿಸಿಕೊಳ್ಳುತ್ತಾನೆ. ಅಪವಾದೇ - ತೆಗೆದಾಗ ಪಂಚಾನಾಮಪಿ ಕೋಶಾನಾಮ್ - ಅನ್ನಮಯ ಇತ್ಯಾದಿ ಪಂಚಕೋಶಗಳು ವಿಭಾತಿ - ಕಾಣಿಸಿಕೊಳ್ಳುತ್ತಾನೆ      ಪ್ರತ್ಯಕ್+ರೂಪ: = ಪ್ರತ್ಯಗ್ರೂಪ:  ಆತ್ಮಾನಾತ್ಮ ವಿವೇಕಃ ಕರ್ತವ್ಯೋ ಬಂಧಮುಕ್ತಯೇ ವಿದುಷಾ. ತೇನೈವಾನಂದೀ ಭವತಿ ಸ್ವಂ ವಿಜ್ಞಾಯ ಸಚ್ಚಿದಾನಂದಂ ..೧೫೨.. ವಿದುಷನು - ಜ್ಞಾನಿಯು ಬಂಧಮುಕ್ತನಾಗಲು ಆತ್ಮ  ಅನಾತ್ಮ ವಿವೇಚನೆಯನ್ನು ಮಾಡತಕ್ಕದ್ದು. ಅದರಿಂದಲೇ ಅವನು ತಾನು ಸತ್ ಚಿತ್ ಆನಂದ ಸ್ವರೂಪನು ಎನ್ನುವ ಸತ್ಯವನ್ನು ಅರಿತು, ಆನಂದ ಹೊಂದುವನು. ಆತ್ಮಾನಾತ್ಮಾ ವಿವೇಕಂ - ಆತ್ಮ  ಅನಾತ್ಮ ವಿವೇಚನೆಯನ್ನು ಕರ್ತವ್ಯೊ - ಮಾಡತಕ್ಕದ್ದು ವಿದುಷಾ - ಪಂಡಿತರಿಂದ ಬಂಧಮುಕ್ತಯೇ - ಬಂಧನದಿಂದ ಬಿಡುಗಡೆಯಾಗಿ ತೇನೈವಾನಂದೀ  - ತೇನ ಏವ ಆನಂದೀ - ಅದರಿಂದಲೇ ಆನಂದ ಹೊಂದಿದವನು ಸ್ವಂ - ತನ್ನನ್ನು ವಿಜ್ಞಾಯ - ಅರಿತು  ಮುಂಜಾದಿಷೀಕಾಮಿವ ದ್ರಶ್ಯವರ್ಗಾತ್.      ಪ್ರತ್ಯಂಚಮಾತ್ಮಾನಾಮಸಂಗಮಕ್ರಿಯಂ. ವಿವಿಚ್ಯ ತತ್ರ ಪ್ರವಿಲಾಪ್ಯ ಸರ್ವಂ.   ...

ವಿವೇಕ ಚೂಡಾಮಣಿ - 176-201

ಮನೋ ನಾಮ ಮಹಾವ್ಯಾಘ್ರೋ ವಿಷಯಾರಣ್ಯಭೂಮಿಷು . ಚರತ್ಯತ್ರ ನ ಗಚ್ಛಂತು ಸಾಧವೋ ಯೇ ಮುಮುಕ್ಷವಃ .. 176..   ಮನೋ ನಾಮ ಮಹಾವ್ಯಾಘ್ರ : - ಮನಸ್ಸು ಎಂಬ ದೊಡ್ಡ ಹುಲಿ   ಚರತಿ - ಓಡಾಡುತ್ತದೆ     ವಿಷಯಾರಣ್ಯ ಭೂಮಿಷು - ವಿಷಯಾರಣ್ಯ ಎಂಬ ಭೂಮಿಯಲ್ಲಿ     ನ ಗಚ್ಚಂತು - ಹೋಗದೆ ಇರಲಿ ಸಾಧುವೋ ಯೇ ಮುಮುಕ್ಷವಃ - ಮುಮುಕ್ಷರಾದ ಸಾಧುಗಳು ವಿಷಯವೆಂಬ ಅರಣ್ಯದಲ್ಲಿ, ಮನವೆಂಬ ಮಹಾವ್ಯಾಘ್ರ ಸುತ್ತುತ್ತಿರುತ್ತದೆ. ಮುಮುಕ್ಷುವಾದ ಸಾಧು-ಜನರು ಅಲ್ಲಿಗೆ ಹೋಗಲೇ ಬಾರದು. ಮನಃ ಪ್ರಸೂತೇ ವಿಷಯಾನಶೇಷಾನ್     ಸ್ಥೂಲಾತ್ಮನಾ ಸೂಕ್ಷ್ಮತಯಾ ಚ ಭೋಕ್ತುಃ . ಶರೀರವರ್ಣಾಶ್ರಮಜಾತಿಭೇದಾನ್     ಗುಣಕ್ರಿಯಾಹೇತುಫಲಾನಿ ನಿತ್ಯಂ .. 177.. ಮನ: ಪ್ರಸೂತೆ - ಮನವು ಉಂಟುಮಾಡುತ್ತದೆ    ವಿಷಯಾನ್ ಅಶೇಷಾನ್  - ಎಲ್ಲಾ ವಿಷಯಗಳನ್ನು  ಭೋಕ್ತು: - ಸಂಸಾರಿಗೆ    ಸ್ಥೂಲಾತ್ಮನಾ ಸೂಕ್ಷ್ಮತಯಾ ಚ - ದೊಡ್ಡದು ಮತ್ತು ಸಣ್ಣದು   ಮನಸ್ಸು ನಿರಂತರವಾಗಿ ಈ ವಸ್ತುಗಳನ್ನು ಉಂಟುಮಾಡುತ್ತದೆ - ಸೂಕ್ಷ್ಮ-ಸ್ಥೂಲವಾದ ಎಲ್ಲ  ಎಲ್ಲಾ ಇಂದ್ರಿಯ ತೃಪ್ತಿಯ ವಸ್ತುಗಳನ್ನು, ಶರೀರ ವರ್ಣಾಶ್ರಮಜಾತಿಭೇದಗಳನ್ನು, ಗುಣಗಳು, ಕ್ರಿಯೆಗಳು, ಅವುಗಳ ಫಲಗಳು ಹಾಗೂ ಹೇತುಗಳ ನ್ನು. ಅಸಂಗಚಿದ್ರೂಪಮಮುಂ ವಿಮೋಹ್ಯ   ...