ವಿವೇಕ ಚೂಡಾಮಣಿ - 126-150
ಬುದ್ಧಿತದ್ವೃತ್ತಿಸದ್ಭಾವಮಭಾವಮಹಮಿತ್ಯಯಂ .. 126..
ಯಃ ಪಶ್ಯತಿ ಸ್ವಯಂ ಸರ್ವಂ ಯಂ ನ ಪಶ್ಯತಿ ಕಶ್ಚನ . ಕಿಂಚನ
ಯಶ್ಚೇತಯತಿ ಬುದ್ಧ್ಯಾದಿ ನ ತದ್ಯಂ ಚೇತಯತ್ಯಯಂ .. 127..
ಯಾವುದು ಸ್ವತಃ ಎಲ್ಲವನ್ನೂ ನೋಡುವದೋ, ಆದರೆ ಅದನ್ನು ಮಾತ್ರ ಯಾರೂ ನೋಡಲಾರರೋ, ಯಾವುದು ಬುದ್ಧಿ ಇತ್ಯಾದಿಗಳನ್ನು ಎಲ್ಲವನ್ನೂ ಪ್ರಕಾಶಿಸುತ್ತದೆಯೋ, ಆದರೆ ಅದನ್ನು ಯಾರೂ ಪ್ರಕಾಶಿಸಲಾರರೋ, ಅದೇ ಆತ್ಮ.
ಯೇನ ವಿಶ್ವಮಿದಂ ವ್ಯಾಪ್ತಂ ಯಂ ನ ವ್ಯಾಪ್ನೋತಿ ಕಿಂಚನ.
ಆಭಾರೂಪಮಿದಂ ಸರ್ವಂ ಯಂ ಭಾಂತಮನುಭಾತ್ಯಯಂ .. 128..
ಯಾವುದರಿಂದ ಈ ವಿಶ್ವವೆಲ್ಲ ವ್ಯಾಪಸಿಕೊಂಡಿದೆಯೋ, ಆದರೆ ಅದನ್ನು ಯಾವುದೂ ವ್ಯಾಪಿಸಲಾರದೋ, ಪ್ರಕಾಶರೂಪವಾದ ಯಾವುದು ಬೆಳಗಿದಾಗ ವಿಶ್ವವೆಲ್ಲ ಅದರ ಪ್ರತಿಫಲನದಿಂದ ಬೆಳಗುವದೋ, ಅದೇ ಆತ್ಮ.
ಯಸ್ಯ ಸನ್ನಿಧಿಮಾತ್ರೇಣ ದೇಹೇಂದ್ರಿಯಮನೋಧಿಯಃ .
ವಿಷಯೇಷು ಸ್ವಕೀಯೇಷು ವರ್ತಂತೇ ಪ್ರೇರಿತಾ ಇವ .. 129..
ಯಾವುದರ ಸಾನ್ನಿಧ್ಯ ಮಾತ್ರದಿಂದ ದೇಹ, ಇಂದ್ರಿಯ, ಮನಸ್ಸು, ಬುದ್ಧಿಗಳು ತಮ್ಮ ತಮ್ಮ ಸ್ವಕೀಯ ಕಾರ್ಯಗಳಲ್ಲಿ ತೊಡಗುವವೋ (ಅದೇ ಆತ್ಮ)..
ಅಹಂಕಾರಾದಿದೇಹಾಂತಾ ವಿಷಯಾಶ್ಚ ಸುಖಾದಯಃ .
ವೇದ್ಯಂತೇ ಘಟವದ್ಯೇನ ನಿತ್ಯಬೋಧಸ್ವರೂಪಿಣಾ .. 130..
ನಿತ್ಯಬೋಧ ಸ್ವರೂಪವಾದ ಯಾವುದರ ಕಾರಣದಿಂದ, ಅಹಂಕಾರದಿಂದ ದೇಹದವರೆಗೆ, ವಿಷಯ, ಸುಖ ಇತ್ಯಾದಿಗಳೆಲ್ಲವು ಮಡಿಕೆಯಂತೆ ಸ್ಪಷ್ಟವಾಗಿ ತಿಳಿಯಲ್ಪಡುತ್ತವೆಯೋ..(ಅದೇ ಆತ್ಮ)
ಏಷೋಽನ್ತರಾತ್ಮಾ ಪುರುಷಃ ಪುರಾಣೋ
ನಿರಂತರಾಖಂಡಸುಖಾನುಭೂತಿಃ .
ಸದೈಕರೂಪಃ ಪ್ರತಿಬೋಧಮಾತ್ರೋ
ಯೇನೇಷಿತಾ ವಾಗಸವಶ್ಚರಂತಿ .. 131..
ಇವನೇ (ಆತ್ಮ) ಪುರಾಣ ಪುರುಷನಾದ, ನಿರಂತರ ಅಖಂಡ ಸುಖದ ಅನುಭವಿಸುವ, ಸರ್ವದಾ ಏಕರೂಪನಾದ, ಜ್ಞಾನಮಾತ್ರ ರೂಪನು. ಇವನಿಂದ ಪ್ರೇರಿತವಾಗಿ ವಾಕ್ ಇತ್ಯಾದಿ ಇಂದ್ರಿಯಗಳು, ಪ್ರಾಣ ಇತ್ಯಾದಿಗಳು ಚಲಿಸುತ್ತವೆ.
ಅತ್ರೈವ ಸತ್ತ್ವಾತ್ಮನಿ ಧೀಗುಹಾಯಾಂ
ಅವ್ಯಾಕೃತಾಕಾಶ ಉಶತ್ಪ್ರಕಾಶಃ .
ಆಕಾಶ ಉಚ್ಚೈ ರವಿವತ್ಪ್ರಕಾಶತೇ
ಸ್ವತೇಜಸಾ ವಿಶ್ವಮಿದಂ ಪ್ರಕಾಶಯನ್ .. 132..
ಈ ಶರೀರದಲ್ಲಿ ಸತ್ವಾತ್ಮನಾದ ಮನಸ್ಸಿನದೆ. ಅದರಲ್ಲಿ ಬುದ್ಧಿಶಕ್ತಿಯ ಗುಹೆಯಿದೆ. ಅದರಲ್ಲಿರುವ ಅವ್ಯಕ್ತ ಆಕಾಶದಲ್ಲಿ, ಸುಂದರವಾದ ಪ್ರಕಾಶದ ಆತ್ಮವು ಆಕಾಶದಲ್ಲಿಯ ರವಿಯಂತೆ ಪ್ರಕಾಶಿಸಯತ್ತ, ತನ್ನ ಸ್ವಂತ ತೇಜಸ್ಸಿನಿಂದ ಈ ವಿಶ್ವವನ್ನು ಪ್ರಕಾಶಿಸುತ್ತಾನೆ.
ಜ್ಞಾತಾ ಮನೋಽಹಂಕೃತಿ-ವಿಕ್ರಿಯಾಣಾಂ
ದೇಹೇಂದ್ರಿಯಪ್ರಾಣಕೃತಕ್ರಿಯಾಣಾಂ .
ಅಯೋಽಗ್ನಿವತ್ತಾನನುವರ್ತಮಾನೋ
ನ ಚೇಷ್ಟತೇ ನೋ ವಿಕರೋತಿ ಕಿಂಚನ .. 133..
ಈ ಆತ್ಮವು ಮನ ಅಹಂಕಾರಗಳ ಬದಲಾವಣೆಗಳನ್ನು ತಿಳಿದಿರುವ, ದೇಹ, ಇಂದ್ರಿಯ, ಪ್ರಾಣಗಳಿಂದ ಆದ ಕ್ರಿಯೆಗಳನ್ನು ತಿಳಿದಿರುವ, ಅವುಗಳ ರೂಪ ತಳೆದರೂ, ಕಬ್ಬಿಣದ ಗೋಲದಲ್ಲಿರುವ ಬೆಂಕಿಯಂತೆ, ಯಾವ ಪರಿವರ್ತನೆ ಹೊಂದದೇ, ಯಾವ ಕ್ರಿಯೆಯನ್ನೂ ಮಾಡದೇ ಇರುತ್ತದೆ.
ನ ಕ್ಷೀಯತೇ ನೋ ವಿಕರೋತಿ ನಿತ್ಯಃ .
ವಿಲೀಯಮಾನೇಽಪಿ ವಪುಷ್ಯಮುಷ್ಮಿ-
ನ್ನ ಲೀಯತೇ ಕುಂಭ ಇವಾಂಬರಂ ಸ್ವಯಂ .. 134..
ಪ್ರಕೃತಿವಿಕೃತಿಭಿನ್ನಃ ಶುದ್ಧಬೋಧಸ್ವಭಾವಃ
ಸದಸದಿದಮಶೇಷಂ ಭಾಸಯನ್ನಿರ್ವಿಶೇಷಃ .
ವಿಲಸತಿ ಪರಮಾತ್ಮಾ ಜಾಗ್ರದಾದಿಷ್ವವಸ್ಥಾ-
ಸ್ವಹಮಹಮಿತಿ ಸಾಕ್ಷಾತ್ಸಾಕ್ಷಿರೂಪೇಣ ಬುದ್ಧೇಃ .. 135..
ಪರಮಾತ್ಮನು ಪ್ರಕೃತಿ ಹಾಗೂ ಅದರ ವಿಕೃತಿಗಳಿಂದ ಭಿನ್ನವಾದ, ಶುದ್ಧ ಚಿತ್ಸ್ವರೂಪವಾದ ಸ್ಥೂಲ ಹಾಗೂ ಸೂಕ್ಷ್ಮ ಜಗತ್ತುಗಳನ್ನು ಬೆಳಗುತ್ತ, ಜಾಗೃತ ಇತ್ಯಾದಿ ಅವಸ್ಥೆಗಳಲ್ಲಿ 'ನಾನು' ಎನ್ನುವ ಬುದ್ಧಿಗೆ ಸಾಕ್ಷಾತ್ ಸಾಕ್ಷಿಯಾಗಿ ಇರುತ್ತಾನೆ.
ನಿಯಮಿತಮನಸಾಮುಂ ತ್ವಂ ಸ್ವಮಾತ್ಮಾನಮಾತ್ಮ-
ನ್ಯಯಮಹಮಿತಿ ಸಾಕ್ಷಾದ್ವಿದ್ಧಿ ಬುದ್ಧಿಪ್ರಸಾದಾತ್ .
ಜನಿಮರಣತರಂಗಾಪಾರಸಂಸಾರಸಿಂಧುಂ
ಪ್ರತರ ಭವ ಕೃತಾರ್ಥೋ ಬ್ರಹ್ಮರೂಪೇಣ ಸಂಸ್ಥಃ .. 136..
ನಿಯಮಿತ ಮನಸ್ಸಿನಿಂದ, ಹಾಗೂ ಶುದ್ಧ ಬುದ್ಧಿಯಿಂದ ನಿನ್ನನ್ನು ಆತ್ಮ ಎಂದು ಮನನ ಮಾಡಿಕೊಂಡು, ಈ ಶರೀರದಲ್ಲೇ ಆತ್ಮನನ್ನು ಗುರುತಿಸಿಕೊಂಡು, ಯಾವುದರ ಅಲೆಗಳು ಜನನ-ಮರಣಗಳೋ ಆ ಸಂಸಾರ ಸಾಗರವನ್ನು ದಾಟಿ, ಬ್ರಹ್ಮರೂಪದಲ್ಲಿ ಸ್ಥಿತನಾಗಿ ಕೃತಾರ್ಥನಾಗು.
ಅತ್ರಾನಾತ್ಮನ್ಯಹಮಿತಿ ಮತಿರ್ಬಂಧ ಏಷೋಽಸ್ಯ ಪುಂಸಃ
ಪ್ರಾಪ್ತೋಽಜ್ಞಾನಾಜ್ಜನನಮರಣಕ್ಲೇಶಸಂಪಾತಹೇತುಃ .
ಯೇನೈವಾಯಂ ವಪುರಿದಮಸತ್ಸತ್ಯಮಿತ್ಯಾತ್ಮಬುದ್ಧ್ಯಾ
ಪುಷ್ಯತ್ಯುಕ್ಷತ್ಯವತಿ ವಿಷಯೈಸ್ತಂತುಭಿಃ ಕೋಶಕೃದ್ವತ್ .. 137..
ಈ ಅನಾತ್ಮನೇ (ಶರೀರ ಇತ್ಯಾದಿ ಅನಾತ್ಮನಲ್ಲಿ) ನಾನು ಎಂಬ ಬುದ್ಧಿಯು(ಅಜ್ಞಾನವು) ಜನನ-ಮರಣಗಳೆಂಬ ಕ್ಲೇಶಕ್ಕೆ ಕಾರಣ. ಇದು ಮನುಜನ ಅಜ್ಞಾನದಿಂದ ಪ್ರಾಪ್ತವಾಗಿದೆ. ತಂತುಗಳಿಂದ ಗೂಡು ಕಟ್ಟಿಕೊಳ್ಳುವ ರೇಶ್ಮೆ ಹುಳುವಿನಂತೆ, ಈ ಅಭಿಮಾನದಿಂದಲೇ (ತಾನು ಈ ಶರೀರ ಎಂಬ ಅಭಿಮಾನದಿಂದ), ಮನುಜನು ಅಸತ್ಯವಾದ ಶರೀರವನ್ನು ಸತ್ಯವೆಂದು ಭಾವಿಸಿ, ಅದನ್ನು ಪೋಷಿಸುತ್ತಾನೆ, ಸ್ನಾನ ಮಾಡಿಸುತ್ತಾನೆ, ಕಾಪಾಡುತ್ತಾನೆ.
ಅತಸ್ಮಿಂಸ್ತದ್ಬುದ್ಧಿಃ ಪ್ರಭವತಿ ವಿಮೂಢಸ್ಯ ತಮಸಾ
ವಿವೇಕಾಭಾವಾದ್ವೈ ಸ್ಫುರತಿ ಭುಜಗೇ ರಜ್ಜುಧಿಷಣಾ .
ತತೋಽನರ್ಥವ್ರಾತೋ ನಿಪತತಿ ಸಮಾದಾತುರಧಿಕಃ
ತತೋ ಯೋಽಸದ್ಗ್ರಾಹಃ ಸ ಹಿ ಭವತಿ ಬಂಧಃ ಶೃಣು ಸಖೇ .. 138..
ತಮಸ್ಸಿನಿಂದ ವಿಮೂಢನಾದವನು ವಸ್ತುವನ್ನು ಬೇರೆಯದೆಂದು ತಿಳಿಯುತ್ತಾನೆ. ವಿವೇಕದ ಅಭಾವವೇ ಹಾವನ್ಮು ಹಗ್ಗವೆಂದು ತಿಳಿಯಲು ಕಾರಣ. ಆ ತಪ್ಪು ಕಲ್ಪನೆಯಿಂದ ಅವನು ಹಾವನ್ನು ಹಿಡಿದಾಗ ಅಧಿಕ ಅನರ್ಥ ಅವನನ್ನು ಕಾಡುವದು. ಅದಕ್ಕಾಗಿ ಓ ಸಖನೇ, ಅಸತ್ತನ್ನು ನಿಜವೆಂದು ಗ್ರಹಿಸುವದರಿಂದಲೇ ಬಂಧನವುಂಟಾಗುತ್ತದೆ.
ಅಖಂಡನಿತ್ಯಾದ್ವಯಬೋಧಶಕ್ತ್ಯಾ
ಸ್ಫುರಂತಮಾತ್ಮಾನಮನಂತವೈಭವಂ .
ಸಮಾವೃಣೋತ್ಯಾವೃತಿಶಕ್ತಿರೇಷಾ
ತಮೋಮಯೀ ರಾಹುರಿವಾರ್ಕಬಿಂಬಂ .. 139..
ಈ ಅಜ್ಞಾನದಿಂದ ಕೂಡಿದ ಆವರಿಸುವ ಶಕ್ತಿಯು, ಅನಂತ ವೈಭವದ, ಅದ್ವಿತೀಯವಾದ, ಅಖಂಡವಾದ ಬೋಧಶಕ್ತಿ ಸ್ವರೂಪನಾದ ಆತ್ಮನನ್ನು, ರಾಹುವು ಗೃಹಣ ಕಾಲದಲ್ಲಿ ಸೂರ್ಯನನ್ನು ಮುಚ್ಚುವಂತೆ ಮುಚ್ಚಿಬಿಡುತ್ತದೆ.
ತಿರೋಭೂತೇ ಸ್ವಾತ್ಮನ್ಯಮಲತರತೇಜೋವತಿ ಪುಮಾನ್
ಅನಾತ್ಮಾನಂ ಮೋಹಾದಹಮಿತಿ ಶರೀರಂ ಕಲಯತಿ .
ತತಃ ಕಾಮಕ್ರೋಧಪ್ರಭೃತಿಭಿರಮುಂ ಬಂಧನಗುಣೈಃ
ಪರಂ ವಿಕ್ಷೇಪಾಖ್ಯಾ ರಜಸ ಉರುಶಕ್ತಿರ್ವ್ಯಥಯತಿ .. 140..
ಯಾವಾಗ ಪರಿಶುದ್ಧ ತೇಜೋಮಯವಾದ ತನ್ನ ಸ್ವಂತ ಆತ್ಮ ಅಡಗಿಕುಳಿತಿರುವದೋ, ಆಗ ಅವನು ಮೋಹದಿಂದ ಶರೀರವನ್ನು ತಾನೆಂದು ಭಾವಿಸುತ್ತಾನೆ. ಆಗ ವಿಕ್ಷೇಪಗೊಳಿಸುವ ಪ್ರಬಲ ರಜಸ ಶಕ್ತಿಯು ಕಾಮ-ಕ್ರೋಧ ಇತ್ಯಾದಿಗಳ ಬಂಧನಗುಣಗಳಿಂದ ಇವನನ್ನು ವ್ಯಥೆಗೊಳಿಸುತ್ತದೆ.
ಮಹಾಮೋಹಗ್ರಾಹಗ್ರಸನಗಲಿತಾತ್ಮಾವಗಮನೋ
ಧಿಯೋ ನಾನಾವಸ್ಥಾಂ ಸ್ವಯಮಭಿನಯಂಸ್ತದ್ಗುಣತಯಾ .
ಅಪಾರೇ ಸಂಸಾರೇ ವಿಷಯವಿಷಪೂರೇ ಜಲನಿಧೌ
ನಿಮಜ್ಯೋನ್ಮಜ್ಯಾಯಂ ಭ್ರಮತಿ ಕುಮತಿಃ ಕುತ್ಸಿತಗತಿಃ .. 141..
ಕುಮತಿಯಾದ, ದುರಾದೃಷ್ಟ ಹೊಂದಿದವನಾದ ಮನುಷ್ಯನು, ಅವನ ಆತ್ಮ ಜ್ಞಾನವು ಮೋಹವೆಂಬ ಮೊಸಳೆ ನುಂಗಿಹಾಕಿದಾಗ, ಬುದ್ಧಿಯ ವಿವಿಧ ಅವಸ್ಥೆಗಳನ್ನು , ಆಯಾ ಗುಣದ ಅಭಿಮಾನದಿಂದ ಸ್ವಯಂ ಅಭಿನಯಿಸಿ, ವಿಷಯ ವಿಷದಿಂದ ತುಂಬಿದ ಸಂಸಾರ ಸಾಗರದಲ್ಲಿ ಮುಳುಗುತ್ತ, ಏಳುತ್ತ ಅಲೆಯುತ್ತಾನೆ.
ಭಾನುಪ್ರಭಾಸಂಜನಿತಾಭ್ರಪಂಕ್ತಿಃ
ಭಾನುಂ ತಿರೋಧಾಯ ವಿಜೃಂಭತೇ ಯಥಾ .
ಆತ್ಮೋದಿತಾಹಂಕೃತಿರಾತ್ಮತತ್ತ್ವಂ
ತಥಾ ತಿರೋಧಾಯ ವಿಜೃಂಭತೇ ಸ್ವಯಂ .. 142..
ಭಾನುವಿನ ಕಿರಣದಿಂದ ಉದ್ಭವವಾದ ಮೋಡದ ಸಾಲುಗಳು ಭಾನುವನ್ನೇ ಮುಚ್ಚಿ , ಅವಷ್ಟೇ ಕಾಣುವಂತೆ, ಆತ್ಮದಿಂದಲೇ ಉದ್ಭವಾವದ ಅಹಂಕಾರವು ಆತ್ಮ ತತ್ವವನ್ನು ಮುಚ್ಚಿ ಸ್ವಯಂ ವಿಜೃಂಬಿಸುತ್ತದೆ.
ಕವಲಿತದಿನನಾಥೇ ದುರ್ದಿನೇ ಸಾಂದ್ರಮೇಘೈಃ
ವ್ಯಥಯತಿ ಹಿಮಝಂಝಾವಾಯುರುಗ್ರೋ ಯಥೈತಾನ್ .
ಅವಿರತತಮಸಾಽಽತ್ಮನ್ಯಾವೃತೇ ಮೂಢಬುದ್ಧಿಂ
ಕ್ಷಪಯತಿ ಬಹುದುಃಖೈಸ್ತೀವ್ರವಿಕ್ಷೇಪಶಕ್ತಿಃ .. 143..
ಮೋಡ ಆವರಿಸಿದ ದಿನ ಸೂರ್ಯನು ಮೋಡಗಳಿಂದ ಆವರಿಸಲ್ಪಟ್ಟಾಗ, ತೀವ್ರ ಶೀತಲ ಬಿರುಗಾಳಿ ಜನರನ್ನು ಪೀಡಿಸುವಂತೆ, ಆತ್ಮನು ಅವಿರತ ತಾಮಸ ಬುದ್ಧಿಯಿಂದ ಆವೃತನಾದಾಗ, ತೀವ್ರ ವಿಕ್ಷೇಪಶಕ್ತಿಯು ಮೂಢಬುದ್ಧಿಯಾದ ಮನುಜನನ್ನು ಅನೇಕ ರೀತಿಯಲ್ಲಿ ವ್ಯಥೆಗೊಳಿಸುತ್ತದೆ.
ಏತಾಭ್ಯಾಮೇವ ಶಕ್ತಿಭ್ಯಾಂ ಬಂಧಃ ಪುಂಸಃ ಸಮಾಗತಃ .
ಯಾಭ್ಯಾಂ ವಿಮೋಹಿತೋ ದೇಹಂ ಮತ್ವಾಽಽತ್ಮಾನಂ ಭ್ರಮತ್ಯಯಂ .. 144..
ಆವರಣ ಶಕ್ತಿ ಮತ್ತು ವಿಕ್ಷೇಪ ಶಕ್ತಿ - ಈ ಎರಡು ಶಕ್ತಿಗಳಿಂದ ಮಾನವನ ಬಂಧನವುಂಟಾಗುವದು. ಇವುಗಳಿಂದ ಭ್ರಮಿತನಾದ ಮಾನವನು ದೇಹವೇ ತಾನೆಂದು ತಿಳಿದು ಅಲೆಯುತ್ತಾನೆ (ದೇಹದಿಂದ ದೇಹಕ್ಕೆ).
ಬೀಜಂ ಸಂಸೃತಿಭೂಮಿಜಸ್ಯ ತು ತಮೋ ದೇಹಾತ್ಮಧೀರಂಕುರೋ
ರಾಗಃ ಪಲ್ಲವಮಂಬು ಕರ್ಮ ತು ವಪುಃ ಸ್ಕಂಧೋಽಸವಃ ಶಾಖಿಕಾಃ .
ಅಗ್ರಾಣೀಂದ್ರಿಯಸಂಹತಿಶ್ಚ ವಿಷಯಾಃ ಪುಷ್ಪಾಣಿ ದುಃಖಂ ಫಲಂ
ನಾನಾಕರ್ಮಸಮುದ್ಭವಂ ಬಹುವಿಧಂ ಭೋಕ್ತಾತ್ರ ಜೀವಃ ಖಗಃ .. 145..
ಈ ಸಂಸಾರವೃಕ್ಷದ ಬೀಜ ಅಜ್ಞಾನದ ಅಂಧಕಾರ, ಶರೀರದ ಜೊತೆ ಗುರುತಿಸುವಿಕೆ ಅದರ ಮೊಳಕೆ, ರಾಗ ಅದರ ಚಿಗುರೆಲೆಗಳು, ಕರ್ಮ ಅದರ ನೀರು, ಶರೀರ ಅದರ ಕಾಂಡ, ಪ್ರಾಣಗಳು ಅದರ ಟೊಂಗೆಗಳು, ಇಂದ್ರಿಯಗಳು ರೆಂಬೆಗಳು, ವಿಷಯಗಳು ಪುಷ್ಪಗಳು, ನಾನಾ ಕರ್ಮದಿಂದ ಉದ್ಭವವಾದ ಬಹುವಿಧದ ದುಃಖಗಳು ಫಲಗಳು, ಈ ಫಲವನ್ನು ಅನುಭವಿಸುವ ಜೀವವೇ ಪಕ್ಷಿಯು.
ಅಜ್ಞಾನಮೂಲೋಽಯಮನಾತ್ಮಬಂಧೋ
ನೈಸರ್ಗಿಕೋಽನಾದಿರನಂತ ಈರಿತಃ .
ಜನ್ಮಾಪ್ಯಯವ್ಯಾಧಿಜರಾದಿದುಃಖ-
ಪ್ರವಾಹಪಾತಂ ಜನಯತ್ಯಮುಷ್ಯ .. 146..
ಅನಾತ್ಮದ ಈ ಬಂಧನದ ಮೂಲ ಅಜ್ಞಾನ ಹಾಗೂ ಇದು ತಾನಾಗಿಯೇ ಹುಟ್ಟಿದೆ ಹಾಗೂ ಇದು ಅನಾದಿ-ಅನಂತವಾಗಿದೆ. ಇದರಿಂದ ಮನುಷ್ಯನು ಜನ್ಮ, ಮೃತ್ಯು, ವ್ಯಾಧಿ, ಮುಪ್ಪು ಇತ್ಯಾದಿಗಳ ಪ್ರವಾಹವನ್ನೇ ಉಂಟುಮಾಡುತ್ತದೆ.
ನಾಸ್ತ್ರೈರ್ನ ಶಸ್ತ್ರೈರನಿಲೇನ ವಹ್ನಿನಾ
ಛೇತ್ತುಂ ನ ಶಕ್ಯೋ ನ ಚ ಕರ್ಮಕೋಟಿಭಿಃ .
ವಿವೇಕವಿಜ್ಞಾನಮಹಾಸಿನಾ ವಿನಾ
ಧಾತುಃ ಪ್ರಸಾದೇನ ಶಿತೇನ ಮಂಜುನಾ .. 147..
ಅಸ್ತ್ರ-ಶಸ್ತ್ರಗಳಿಂದ ಅಥವಾ ಬಿರುಗಾಳಿಯಿಂದ, ಅಥವಾ ಬೆಂಕಿಯಿಂದ, ಅಥವಾ ಕೋಟಿಕರ್ಮಗಳಿಂದ ಈ ಬಂಧನವನ್ನು ಭೇಧಿಸಲು ಸಾಧ್ಯವಿಲ್ಲ. ದೈವೀ ಕೃಪೆಯಿಂದ ಹರಿತಗೊಳಿಸಲ್ಪಟ್ಟ ವಿವೇಚನೆಯೊಂದಿರುವ ಜ್ಞಾನದ ಮಹಾ ಅಸ್ತ್ರದ ವಿನಾ ಇನ್ಯಾವುದರಿಂದಲೂ ಇದನ್ನು ಭೇಧಿಸಲು ಶಕ್ಯವಾಗುವದಿಲ್ಲ.
ಶ್ರುತಿಪ್ರಮಾಣೈಕಮತೇಃ ಸ್ವಧರ್ಮ
ನಿಷ್ಠಾ ತಯೈವಾತ್ಮವಿಶುದ್ಧಿರಸ್ಯ .
ವಿಶುದ್ಧಬುದ್ಧೇಃ ಪರಮಾತ್ಮವೇದನಂ
ತೇನೈವ ಸಂಸಾರಸಮೂಲನಾಶಃ .. 148..
ಯಾರು ಶೃತಿಪ್ರಮಾಣದಲ್ಲಿ ಏಕಮತನಾಗಿರುತ್ತಾನೋ ಹಾಗೂ ಸ್ವಧರ್ಮವನ್ನು ನಿಷ್ಠೆಯಿಂದ ಪಾಲಿಸುತ್ತಾನೋ, ಅವನಿಗೇ ಆತ್ಮಶುದ್ಧಿಯಾಗುತ್ತದೆ. ಆತ್ಮಶುದ್ಧಿಯಿರುವ ಮನುಷ್ಯನಿಗೆ ಪರಮಾತ್ಮನ ಸಾಕ್ಷಾತ್ಕಾರವಾಗುತ್ತದೆ ಹಾಗೂ ಅದರಿಂದಲೇ ಸಂಸಾರಬಂಧನ ಮೂಲಸಹಿತ ನಾಶವಾಗುತ್ತದೆ.
ಕೋಶೈರನ್ನಮಯಾದ್ಯೈಃ ಪಂಚಭಿರಾತ್ಮಾ ನ ಸಂವೃತೋ ಭಾತಿ .
ನಿಜಶಕ್ತಿಸಮುತ್ಪನ್ನೈಃ ಶೈವಾಲಪಟಲೈರಿವಾಂಬು ವಾಪೀಸ್ಥಂ .. 149..
ಪಾಚಿಯ ಪದರಗಳಿಂದ ಮುಚ್ಚಿದ ನೀರು ಕಾಣದಾದಂತೆ, ಅನ್ನಮಯ ಇತ್ಯಾದಿ ಐದು ಕೋಶಗಳಿಂದ ಆವೃತವಾದ ಆತ್ಮ ಕಾಣಿಸಿಕೊಳ್ಳುವದಿಲ್ಲ.
ತಚ್ಛೈವಾಲಾಪನಯೇ ಸಮ್ಯಕ್ ಸಲಿಲಂ ಪ್ರತೀಯತೇ ಶುದ್ಧಂ .
ತೃಷ್ಣಾಸಂತಾಪಹರಂ ಸದ್ಯಃ ಸೌಖ್ಯಪ್ರದಂ ಪರಂ ಪುಂಸಃ .. 150..
ಆ ಪಾಚಿಯನ್ನು ತೆಗೆದುಹಾಕಿದಾಗ ತೃಷೆಯನ್ನು ಇಂಗಿಸುವ, ಕೂಡಲೇ ಅತ್ಯಂತ ಸುಖಪ್ರದ ನೀರು ಮತ್ತೆ ಕಾಣಬರುವದು.
Comments