ವಿವೇಕ ಚೂಡಾಮಣಿ - 41-60
ತಥಾ ವದಂತಂ ಶರಣಾಗತಂ ಸ್ವಂ
ಸಂಸಾರದಾವಾನಲತಾಪತಪ್ತಂ .
ನಿರೀಕ್ಷ್ಯ ಕಾರುಣ್ಯರಸಾರ್ದ್ರದೃಷ್ಟ್ಯಾ
ದದ್ಯಾದಭೀತಿಂ ಸಹಸಾ ಮಹಾತ್ಮಾ .. 41..
ಸಂಸಾರ ಸಾಗರದಲ್ಲಿ ಬೆಂದು, ಶರಣಾಗತನಾಗಿ ಹೀಗೆ ಹೇಳಿದವನನ್ನು ನೋಡಿ ಮಹಾತ್ಮನು ಕರುಣೆಯಿಂದ ನೋಡಿ ಅವನ ಭಯವನ್ನು ದೂರ ಮಾಡುತ್ತಾನೆ.
ವಿದ್ವಾನ್ ಸ ತಸ್ಮಾ ಉಪಸತ್ತಿಮೀಯುಷೇ
ಮುಮುಕ್ಷವೇ ಸಾಧು ಯಥೋಕ್ತಕಾರಿಣೇ .
ಪ್ರಶಾಂತಚಿತ್ತಾಯ ಶಮಾನ್ವಿತಾಯ
ತತ್ತ್ವೋಪದೇಶಂ ಕೃಪಯೈವ ಕುರ್ಯಾತ್ .. 42..
ಅವನ ರಕ್ಷಣೆಯನ್ನು ಅರಸಿ ಬಂದು, ಮುಕ್ತಿಗಾಗಿ ಪರಿತಪಿಸುತ್ತ, ವೇದ ವಾಕ್ಯಗಳನ್ನು ಚಾಚೂ ತಪ್ಪದೆ ಪಾಲಿಸುತ್ತ ಬಂದ, ಸಮಾಧಾನ, ಶಾಂತಿಯಿಂದ ತುಂಬಿದ ಮನುಷ್ಯನಿಗೆ, ಗುರುವು ಕೃಪೆ ಮಾಡಿ ತತ್ವೋಪದೇಶವನ್ನು ಮಾಡುತ್ತಾನೆ.
ಮಾ ಭೈಷ್ಟ ವಿದ್ವಂಸ್ತವ ನಾಸ್ತ್ಯಪಾಯಃ
ಸಂಸಾರಸಿಂಧೋಸ್ತರಣೇಽಸ್ತ್ಯುಪಾಯಃ .
ಯೇನೈವ ಯಾತಾ ಯತಯೋಽಸ್ಯ ಪಾರಂ
ತಮೇವ ಮಾರ್ಗಂ ತವ ನಿರ್ದಿಶಾಮಿ .. 43..
"ವಿದ್ವಾನನೇ, ಭಯ ಪಡಬೇಡ. ನಿನಗೆ ಅಪಾಯವಿಲ್ಲ. ಸಂಸಾರ ಸಾಗರವನ್ನು ದಾಟಲು ಉಪಾಯವಿದೆ. ಯತಿಗಳು ಅದನ್ನು (ಸಂಸಾರ ಸಾಗರವನ್ನು) ದಾಟಿದ ಮಾರ್ಗವನ್ನೇ ನಾನು ನಿನಗೆ ಹೇಳಿಕೊಡುತ್ತೇನೆ."
"ಸಂಸಾರ ಭಯವನ್ನು ನಾಶ ಮಾಡಲು ಮಹತ್ತರವಾದ ಉಪಾಯವಿದೆ. ಆ ಉಪಾಯದಿಂದ ನೀನು ಈ ಸಾಗರವನ್ನು ದಾಟಿ ಪರಮಾನಂದವನ್ನು ಹೊಂದುವೆ."
ತೇನಾತ್ಯಂತಿಕಸಂಸಾರದುಃಖನಾಶೋ ಭವತ್ಯನು .. 45..
ವೇದಾಂತ ತತ್ವಗಳ ಬಗ್ಗೆ ಯೋಚಿಸುವದರಿಂದ ಉತ್ತಮ ಜ್ಞಾನ (ಬ್ರಹ್ಮ ಜ್ಞಾನ)ವುಂಟಾಗುತ್ತದೆ. ಇದರಿಂದ ಸಂಸಾರ ದುಃಖ ಪೂರ್ತಿ ನಾಶವಾಗುತ್ತದೆ.
ಮುಕ್ತೇರ್ಹೇತೂನ್ವಕ್ತಿ ಸಾಕ್ಷಾಚ್ಛ್ರುತೇರ್ಗೀಃ .
ಯೋ ವಾ ಏತೇಷ್ವೇವ ತಿಷ್ಠತ್ಯಮುಷ್ಯ
ಮೋಕ್ಷೋಽವಿದ್ಯಾಕಲ್ಪಿತಾದ್ದೇಹಬಂಧಾತ್ .. 46..
ಅಜ್ಞಾನಯೋಗಾತ್ಪರಮಾತ್ಮನಸ್ತವ
ಹ್ಯನಾತ್ಮಬಂಧಸ್ತತ ಏವ ಸಂಸೃತಿಃ .
ತಯೋರ್ವಿವೇಕೋದಿತಬೋಧವಹ್ನಿಃ
ಅಜ್ಞಾನಕಾರ್ಯಂ ಪ್ರದಹೇತ್ಸಮೂಲಂ .. 47..
ಶಿಷ್ಯನ ಪ್ರಶ್ನೆ
ಶಿಷ್ಯ ಉವಾಚ .
ಕೃಪಯಾ ಶ್ರೂಯತಾಂ ಸ್ವಾಮಿನ್ಪ್ರಶ್ನೋಽಯಂ ಕ್ರಿಯತೇ ಮಯಾ .
ಯದುತ್ತರಮಹಂ ಶ್ರುತ್ವಾ ಕೃತಾರ್ಥಃ ಸ್ಯಾಂ ಭವನ್ಮುಖಾತ್ .. 48..
ಶಿಷ್ಯ ಹೇಳುತ್ತಾನೆ - "ಸ್ವಾಮಿ, ದಯವಿಟ್ಟು ಕೇಳಿ. ನನ್ನ ಪ್ರಶ್ನೆಯನ್ನು ಕೇಳಿ. ತಮ್ಮ ಮುಖದಿಂದ ಅದರ ಉತ್ತರವನ್ನು ಕೇಳಿ ನಾನು ಕೃತಾರ್ಥನಾಗುತ್ತೇನೆ. "
ಕೋ ನಾಮ ಬಂಧಃ ಕಥಮೇಷ ಆಗತಃ
ಕಥಂ ಪ್ರತಿಷ್ಠಾಸ್ಯ ಕಥಂ ವಿಮೋಕ್ಷಃ .
ಕೋಽಸಾವನಾತ್ಮಾ ಪರಮಃ ಕ ಆತ್ಮಾ
ತಯೋರ್ವಿವೇಕಃ ಕಥಮೇತದುಚ್ಯತಾಂ .. 49..
ಬಂಧನವೆಂದರೇನು? ಅದು ಹೇಗೆ ನಮ್ಮಲ್ಲಿ ಉಂಟಾಗುತ್ತದೆ? ಅದು ಹೇಗೆ ನಮ್ಮಲ್ಲಿ ಸ್ಥಾಪಿತವಾಗಿರುತ್ತದೆ? ಅದರಿಂದ ಬಿಡುಗಡೆಯಾಗುವದು ಹೇಗೆ? ಅನಾತ್ಮ ಯಾರು? ಪರಮಾತ್ಮ ಯಾರು? ಅವರಿಬ್ಬರ ನಡುವಿನ ವಿವೇಚನೆಯನ್ನು ಮಾಡುವದು ಹೇಗೆ? (ಅದು) ಹೇಳಲ್ಪಡಲಿ.
ಶ್ರೀಗುರುವಾಚ .
ಯದವಿದ್ಯಾಬಂಧಮುಕ್ತ್ಯಾ ಬ್ರಹ್ಮೀಭವಿತುಮಿಚ್ಛಸಿ .. 50..
ಗುರುವು ಉತ್ತರಿಸಿದನು."(ಸಂಸಾರ) ಅವಿದ್ಯೆಯ ಬಂಧನದಿಂದ ಮುಕ್ತನಾಗಿ, ಬ್ರಹ್ಮತ್ವವನ್ನು ಹೊಂದಲು ನೀನು ಇಚ್ಛೆ ಪಟ್ಟಿರುವದರಿಂದ ನೀನು ಧನ್ಯನಾದೆ. ಕೃತಾರ್ಥನಾದೆ. ನಿನ್ನ ಕುಲ ನಿನ್ನಿಂದ ಪಾವನವಾಯಿತು. "
ಸ್ವಪ್ರಯತ್ನದ ಮಹತ್ವ
ಋಣಮೋಚನಕರ್ತಾರಃ ಪಿತುಃ ಸಂತಿ ಸುತಾದಯಃ .
ಬಂಧಮೋಚನಕರ್ತಾ ತು ಸ್ವಸ್ಮಾದನ್ಯೋ ನ ಕಶ್ಚನ .. 51..
ತಂದೆಯ ಸಾಲವನ್ನು ತೀರಿಸಲು ಮಗ ಮುಂತಾದವರಿದ್ದಾರೆ. ಆದರೆ ಒಬ್ಬನ ಭವಬಂಧನದಿಂದ ಬಿಡಿಸಲು ಸ್ವತಃ ಅವನ ಹೊರತು ಇನ್ಯಾರೂ ಇಲ್ಲ.
ಮಸ್ತಕನ್ಯಸ್ತಭಾರಾದೇರ್ದುಃಖಮನ್ಯೈರ್ನಿವಾರ್ಯತೇ .
ಕ್ಷುಧಾದಿಕೃತದುಃಖಂ ತು ವಿನಾ ಸ್ವೇನ ನ ಕೇನಚಿತ್ .. 52..
ತಲೆಯ
ಮೇಲಿನ ಭಾರದಿಂದಾದ ದುಃಖವನ್ನು ಇತರರು ನಿವಾರಿಸಬಹುದು. ಆದರೆ ಹಸಿವು ಇಂತವುಗಳಿಂದ ಆದ
ದುಃಖವನ್ನು ಸ್ವತಃ ತನ್ನ ಹೊರತು ಅನ್ಯರು ನಿವಾರಿಸಲು ಸಾಧ್ಯವಿಲ್ಲ.
ಪಥ್ಯಮೌಷಧಸೇವಾ ಚ ಕ್ರಿಯತೇ ಯೇನ ರೋಗಿಣಾ .
ಆರೋಗ್ಯಸಿದ್ಧಿರ್ದೃಷ್ಟಾಽಸ್ಯ ನಾನ್ಯಾನುಷ್ಠಿತಕರ್ಮಣಾ .. 53..
ರೋಗಿಯು ತಾನೇ ಸ್ವತಃ ಔಷಧಿ, ಪಥ್ಯ ಇತ್ಯಾದಿ ಮಾಡಿದಾಗ ಮಾತ್ರ ಅವನ ಆರೋಗ್ಯ ಪುನಃ ಬರುವದೇ ಹೊರತು, ಬೇರೆಯವರು ಮಾಡಿದ ಕರ್ಮಗಳಿಂದ ಅಲ್ಲ.
ವಸ್ತುಸ್ವರೂಪಂ ಸ್ಫುಟಬೋಧಚಕ್ಷುಷಾ
ಸ್ವೇನೈವ ವೇದ್ಯಂ ನ ತು ಪಂಡಿತೇನ .
ಚಂದ್ರಸ್ವರೂಪಂ ನಿಜಚಕ್ಷುಷೈವ
ಜ್ಞಾತವ್ಯಮನ್ಯೈರವಗಮ್ಯತೇ ಕಿಂ .. 54..
ವಸ್ತುಗಳ
ನಿಜವಾದ ಸ್ವರೂಪವನ್ನು ನಮ್ಮ ಶುದ್ಧ ಜ್ಞಾನದ ಕಣ್ಣಗಳಿಂದ ನೋಡಬೇಕೇ ಹೊರತು, ಪಂಡಿತರ
ಮಾತಿನಿಂದ ಅಲ್ಲ. ಉದಾಹರಣೆಗೆ - ಚಂದ್ರನ ಸ್ವರೂಪವನ್ನು ನಮ್ಮ ಕಣ್ಣಿಂದ ನೋಡಿ ತಿಳಿಯಬೇಕೇ ಹೊರತು,
ಅನ್ಯರಿಂದ ತಿಳಿಯಲಾಗುವದೇ?
ಅವಿದ್ಯಾಕಾಮಕರ್ಮಾದಿಪಾಶಬಂಧಂ ವಿಮೋಚಿತುಂ .
ಕಃ ಶಕ್ನುಯಾದ್ವಿನಾಽಽತ್ಮಾನಂ ಕಲ್ಪಕೋಟಿಶತೈರಪಿ .. 55..
ಅಜ್ಞಾನದಿಂದಾದ
ಬಂಧನದಿಂದ ಬಿಡುಗಡೆಯಾಗಲು ಸ್ವಯಂ ಪ್ರಯತ್ನ ಮಾಡಬೇಕೆ ಹೊರತು, ಇತರರು ನೂರು ಕೋಟಿ ಕಲ್ಪಗಳ ಕಾಲ ಪ್ರಯತ್ನ ಮಾಡಿದರೂ ಸಾಧ್ಯವೇ?
ಆತ್ಮಜ್ಞಾನದಿಂದ ಮೋಕ್ಷ
ಯೋಗದಿಂದ ಅಥವಾ ಸಾಂಖ್ಯದಿಂದ, ಕರ್ಮದಿಂದ ಅಥವಾ ವಿದ್ಯೆಯಿಂದ ಇವು ಯಾವುದರಿಂದಲೂ ಮುಕ್ತಿ ದೊರೆಯಲಾರದು. ಕೇವಲ ಆತ್ಮನೇ ಪರಬ್ರಹ್ಮ ಎಂಬ ಜ್ಞಾನದಿಂದ ಮಾತ್ರ ಮೋಕ್ಷವು ಸಿದ್ದಿಸುವದು. ಬೇರೆ ಯಾವುದರಿಂದಲೂ ಅಲ್ಲ.
ವೀಣಾಯಾ ರೂಪಸೌಂದರ್ಯಂ ತಂತ್ರೀವಾದನಸೌಷ್ಠವಂ .
ಪ್ರಜಾರಂಜನಮಾತ್ರಂ ತನ್ನ ಸಾಮ್ರಾಜ್ಯಾಯ ಕಲ್ಪತೇ .. 57..
(ಉದಾಹರಣೆಗೆ) ವೀಣೆಯ ಸೌಂದರ್ಯ ಮತ್ತು ಅದರ ವಾದನದ ಇಂಪಿನಿಂದ ಜನರಿಗೆ ಸಂತೋಷವಾಗುತ್ತದೆಯೇ ಹೊರತು, ಅದರಿಂದ ಸಾಮ್ರಾಜ್ಯ ದೊರೆಯುವದಿಲ್ಲ.
ವಾಗ್ವೈಖರೀ ಶಬ್ದಝರೀ ಶಾಸ್ತ್ರವ್ಯಾಖ್ಯಾನಕೌಶಲಂ .
ವೈದುಷ್ಯಂ ವಿದುಷಾಂ ತದ್ವದ್ಭುಕ್ತಯೇ ನ ತು ಮುಕ್ತಯೇ .. 58..
ಹಾಗೆಯೇ ವಾಗ್ವೈಖರಿಯಿಂದ, ಶಬ್ದಗಳ ಪ್ರವಾಹದಿಂದ, ಶಾಸ್ತ್ರಗಳನ್ನು ವ್ಯಾಖ್ಯಾನಿಸುವ ಕೌಶಲ್ಯದಿಂದ, ವಿದ್ವತ್ತಿನಿಂದ, ಸ್ವಲ್ಪ ಕಾಲ ಸಂತೋಷ ಸಿಗುವದೇ ಹೊರತು ಮುಕ್ತಿ ದೊದಕುವದಿಲ್ಲ.
ಅವಿಜ್ಞಾತೇ ಪರೇ ತತ್ತ್ವೇ ಶಾಸ್ತ್ರಾಧೀತಿಸ್ತು ನಿಷ್ಫಲಾ .
ವಿಜ್ಞಾತೇಽಪಿ ಪರೇ ತತ್ತ್ವೇ ಶಾಸ್ತ್ರಾಧೀತಿಸ್ತು ನಿಷ್ಫಲಾ .. 59..
ಪರತತ್ವ ತಿಳಿಯದೇ ಇದ್ದಾಗ ಶಾಸ್ತ್ರಗಳ (ವೇದ ಇತ್ಯಾದಿ ಗ್ರಂಥಗಳ) ಜ್ಞಾನ ನಿರರ್ಥಕ. ಪರತತ್ತ್ವ ತಿಳಿದಾಗಲೂ, ಶಾಸ್ತ್ರಗಳ ಜ್ಞಾನ ನಿರರ್ಥಕ. (ಆತ್ಮಜ್ಞಾನವಾದ ಮೇಲೆ, ಮನುಜನ ಪರಮೋಚ್ಛ ಧ್ಯೇಯ ಪೂರ್ಣಗೊಂಡಾಗ, ವೇದಶಾಸ್ತ್ರಗಳ ಜ್ಞಾನ ಅವನಿಗೆ ಯಾಕೆ ತಾನೇ ಬೇಕು?)
ಶಬ್ದಜಾಲಂ ಮಹಾರಣ್ಯಂ ಚಿತ್ತಭ್ರಮಣಕಾರಣಂ .
ಅತಃ ಪ್ರಯತ್ನಾತ್ ಜ್ಞಾತವ್ಯಂ ತತ್ವಜ್ಞೈತತ್ವಮಾತ್ಮನಃ. 60.
ವೇದ ಶಾಸ್ತ್ರಗಳು ಶಬ್ದಗಳ ಅರಣ್ಯದಂತೆ ಅರ್ಥವಾಗದಿದ್ದರೆ, ಮನಸ್ಸಿನ ಭ್ರಮೆ ಉಂಟು ಮಾಡುತ್ತವೆ. ಅದಕ್ಕಾಗಿ, ಬುದ್ದಿವಂತರು ಆತ್ಮಜ್ಞಾನವನ್ನು ತಿಳಿಯುವ ಪ್ರಯತ್ನ ಮಾಡಬೇಕು. (ಸುಮ್ಮನೆ ಶಾಸ್ತ್ರಗಳನ್ನು ಓದಿದರೆ ಪ್ರಯೋಜನವಿಲ್ಲ. ಅದರ ಬದಲು ಆತ್ಮಜ್ಞಾನದ ಬಗ್ಗೆ ಗಮನ ಹರಿಸಬೇಕು)
Comments