ವಿವೇಕ ಚೂಡಾಮಣಿ - 176-201


ಮನೋ ನಾಮ ಮಹಾವ್ಯಾಘ್ರೋ ವಿಷಯಾರಣ್ಯಭೂಮಿಷು .
ಚರತ್ಯತ್ರ ನ ಗಚ್ಛಂತು ಸಾಧವೋ ಯೇ ಮುಮುಕ್ಷವಃ .. 176.. 

ಮನೋ ನಾಮ ಮಹಾವ್ಯಾಘ್ರ : - ಮನಸ್ಸು ಎಂಬ ದೊಡ್ಡ ಹುಲಿ   ಚರತಿ - ಓಡಾಡುತ್ತದೆ    
ವಿಷಯಾರಣ್ಯ ಭೂಮಿಷು - ವಿಷಯಾರಣ್ಯ ಎಂಬ ಭೂಮಿಯಲ್ಲಿ     ನ ಗಚ್ಚಂತು - ಹೋಗದೆ ಇರಲಿ
ಸಾಧುವೋ ಯೇ ಮುಮುಕ್ಷವಃ - ಮುಮುಕ್ಷರಾದ ಸಾಧುಗಳು

ವಿಷಯವೆಂಬ ಅರಣ್ಯದಲ್ಲಿ, ಮನವೆಂಬ ಮಹಾವ್ಯಾಘ್ರ ಸುತ್ತುತ್ತಿರುತ್ತದೆ. ಮುಮುಕ್ಷುವಾದ ಸಾಧು-ಜನರು ಅಲ್ಲಿಗೆ ಹೋಗಲೇ ಬಾರದು.

ಮನಃ ಪ್ರಸೂತೇ ವಿಷಯಾನಶೇಷಾನ್
    ಸ್ಥೂಲಾತ್ಮನಾ ಸೂಕ್ಷ್ಮತಯಾ ಚ ಭೋಕ್ತುಃ .
ಶರೀರವರ್ಣಾಶ್ರಮಜಾತಿಭೇದಾನ್
    ಗುಣಕ್ರಿಯಾಹೇತುಫಲಾನಿ ನಿತ್ಯಂ .. 177..

ಮನ: ಪ್ರಸೂತೆ - ಮನವು ಉಂಟುಮಾಡುತ್ತದೆ    ವಿಷಯಾನ್ ಅಶೇಷಾನ್  - ಎಲ್ಲಾ ವಿಷಯಗಳನ್ನು 
ಭೋಕ್ತು: - ಸಂಸಾರಿಗೆ    ಸ್ಥೂಲಾತ್ಮನಾ ಸೂಕ್ಷ್ಮತಯಾ ಚ - ದೊಡ್ಡದು ಮತ್ತು ಸಣ್ಣದು  

ಮನಸ್ಸು ನಿರಂತರವಾಗಿ ಈ ವಸ್ತುಗಳನ್ನು ಉಂಟುಮಾಡುತ್ತದೆ - ಸೂಕ್ಷ್ಮ-ಸ್ಥೂಲವಾದ ಎಲ್ಲ ಎಲ್ಲಾ ಇಂದ್ರಿಯ ತೃಪ್ತಿಯ ವಸ್ತುಗಳನ್ನು, ಶರೀರ ವರ್ಣಾಶ್ರಮಜಾತಿಭೇದಗಳನ್ನು, ಗುಣಗಳು, ಕ್ರಿಯೆಗಳು, ಅವುಗಳ ಫಲಗಳು ಹಾಗೂ ಹೇತುಗಳನ್ನು.

ಅಸಂಗಚಿದ್ರೂಪಮಮುಂ ವಿಮೋಹ್ಯ
    ದೇಹೇಂದ್ರಿಯಪ್ರಾಣಗುಣೈರ್ನಿಬದ್ಧ್ಯ .
ಅಹಮ್ಮಮೇತಿ ಭ್ರಮಯತ್ಯಜಸ್ರಂ
    ಮನಃ ಸ್ವಕೃತ್ಯೇಷು ಫಲೋಪಭುಕ್ತಿಷು .. 178..

ಅಸಂಗ ಚಿದ್ರೂಪಂ ಅಮುಂ - ಅಸಂಗ ಚಿದ್ರೂಪನಾದ ಅವನನ್ನು     ವಿಮೋಹ್ಯ - ಮೋಹಗೊಳಿಸಿ    ನಿಬಧ್ಧ್ಯ - ಕಟ್ಟಿ ಹಾಕಿ 
ಅಹಂ ಮಮ ಇತಿ  - ನಾನು ನನ್ನದು ಎಂದು       ಭ್ರಮಯತಿ - ಸುತ್ತಿಸುತ್ತದೆ    ಫಲೊಪಭುಕ್ತಿಷು - ಫಲಾನುಭವಗಳಲ್ಲಿ
 
ಮನಸ್ಸು ಅಸಂಗ ಚಿದ್ರೂಪನಾದ ಜೀವನನ್ನು ವಿಮೋಹಗೊಳಿಸಿ ದೇಹೇಂದ್ರಿಯ ಪ್ರಾಣ ಈ ಪಾಶಗಳಿಂದ ಬಂಧಿಸಿ, ನಾನು-ನನ್ನದು ಎಂಬ ಭ್ರಮೆಯಿಂದ, ತನ್ನ ಕೃತ್ಯಗಳ ಫಲಗಳಲ್ಲಿ ಅಲೆಯಿಸುತ್ತದೆ.

ಅಧ್ಯಾಸದೋಷಾತ್ಪುರುಷಸ್ಯ ಸಂಸೃತಿಃ  
    ಅಧ್ಯಾಸಬಂಧಸ್ತ್ವಮುನೈವ ಕಲ್ಪಿತಃ .
ರಜಸ್ತಮೋದೋಷವತೋಽವಿವೇಕಿನೋ
    ಜನ್ಮಾದಿದುಃಖಸ್ಯ ನಿದಾನಮೇತತ್ .. 179..

ಅಧ್ಯಾಸದೋಷವೇ ಮನುಷ್ಯನ ಸಂಸಾರಚಕ್ರಕ್ಕೆ ಕಾರಣ. ಈ ಅಧ್ಯಾಸ ಬಂಧನವು ಮನದಿಂದ ಕಲ್ಪಿತವಾಗಿದೆ. ಇದು ಅವಿವೇಕಿಗೇ ರಜಸ್-ತಮಸ್ ಈ ದೋಷಗಳಿಂದ ಜನ್ಮ ಇತ್ಯಾದಿ ದುಃಖಕ್ಕೆ ಕಾರಣವಾಗುತ್ತದೆ.

ಅತಃ ಪ್ರಾಹುರ್ಮನೋಽವಿದ್ಯಾಂ ಪಂಡಿತಾಸ್ತತ್ತ್ವದರ್ಶಿನಃ .
ಯೇನೈವ ಭ್ರಾಮ್ಯತೇ ವಿಶ್ವಂ ವಾಯುನೇವಾಭ್ರಮಂಡಲಂ .. 180..

ಅತಃ - ಹಾಗಾಗಿ  ಪ್ರಾಹುಃ - ಹೇಳಿದ್ದಾರೆ     ಪಂಡಿತಾ: ತತ್ವದರ್ಶಿನ: - ತತ್ವದರ್ಶಿಗಳಾದ ಪಂಡಿತರು  ಯೇನ ಏವ - ಇದರಿಂದಲೇ  ಭ್ರಾಮ್ಯತೆ - ತಿರುಗುತ್ತದೆ    ವಾಯುನಾ - ವಾಯುವಿನಿಂದ ಅಭ್ರಮಂಡಲಂ - ಮೋಡಗಳ ಸಮೂಹ   

ಅದಕ್ಕಾಗಿ ತತ್ವದರ್ಶಿಗಳಾದ ಪಂಡಿತರು ಹೇಳಿದ್ದಾರೆ- ಮನಸ್ಸೇ ಅವಿದ್ಯೆ. ಇದರಿಂದಲೇ(ಮನಸ್ಸಿನಿಂದಲೇ), ಗಾಳಿಯಿಂದ ಮೋಡದ ಸಾಲು ಸುತ್ತುವಂತೆ, ವಿಶ್ವ ಸುತ್ತುತ್ತದೆ. 

ತನ್ಮನಃಶೋಧನಂ ಕಾರ್ಯಂ ಪ್ರಯತ್ನೇನ ಮುಮುಕ್ಷುಣಾ .
ವಿಶುದ್ಧೇ ಸತಿ ಚೈತಸ್ಮಿನ್ಮುಕ್ತಿಃ ಕರಫಲಾಯತೇ .. 181..

ತತ್ - ಆದುದರಿಂದ ಮನಃಶೋಧನಂ - ಮನಸ್ಸಿನ ಶೋಧನೆಯನ್ನು   ಕಾರ್ಯಂ - ಮಾಡತಕ್ಕದ್ದು    ಮುಮುಕ್ಷುಣಾ - ಮುಮುಕ್ಷುಗಳಿಂದ     ವಿಶುದ್ಧೇ ಸತಿ ಏತಸ್ಮಿನ್ - ಇದು ಶುದ್ದವಾದಾಗ  ಕರಫಲಾಯತೇ - ಅಂಗೈನಲ್ಲಿರುವ ಹಣ್ಣಿನಂತೆ ಸುಲಭ

ಅದಕ್ಕಾಗಿ ಮುಮುಕ್ಷುಗಳು ಪ್ರಯತ್ನಿಸಿ ಮನಸ್ಸಿನ ಶುದ್ಧೀಕರಣವನ್ನು ಮಾಡಬೇಕು. ಮನಸ್ಸು ಶುದ್ಧವಾದ ಮೇಲೆ ಮುಕ್ತಿ ಎನ್ನುವದು ಅಂಗೈಯಲ್ಲಿನ ಹಣ್ಣಿನಷ್ಟು ಸುಲಭವಾಗಿ ಲಭ್ಯವಾಗುತ್ತದೆ.

ಮೋಕ್ಷೈಕಸಕ್ತ್ಯಾ  ವಿಷಯೇಷು ರಾಗಂ
    ನಿರ್ಮೂಲ್ಯ ಸಂನ್ನಸ್ಯ ಚ ಸರ್ವಕರ್ಮ .
ಸಚ್ಛ್ರದ್ಧಯಾ ಯಃ ಶ್ರವಣಾದಿನಿಷ್ಠೋ
    ರಜಃಸ್ವಭಾವಂ ಸ ಧುನೋತಿ ಬುದ್ಧೇಃ .. 182..

ಮೋಕ್ಷೈಕಸಕ್ತ್ಯಾಂ - ಮೋಕ್ಷ ಒಂದರಲ್ಲೇ ಆಸಕ್ತಿ ಇರುವ   ವಿಷಯೇಷು - ವಿಷಯಗಳಲ್ಲಿ 
ರಾಗಂ -ಅಭಿಲಾಷೆಯನ್ನು  ನಿರ್ಮೂಲ್ಯ - ತ್ಯಜಿಸಿ     ಸಂನ್ನಸ್ಯ ಚ ಸರ್ವಕರ್ಮ - ಎಲ್ಲ ಕರ್ಮ ಬಿಟ್ಟು   ಸತ್ ಶ್ರದ್ದಯಾ - ಒಳ್ಳೇ ಶ್ರದ್ದೆಯಿಂದ   ಯಃ - ಯಾರು  ಸ - ಅವನು  ಧುನೋತಿ - ಹೋಗಲಾಡಿಸಿಕೊಳ್ಳುತ್ತಾನೆ 

ಮೋಕ್ಷದಲ್ಲಿ ಏಕಾಗ್ರಚಿತ್ತನಾಗಿರುವವನು ವಿಷಯಾಸಕ್ತಿಯನ್ನು ನಿರ್ಮೂಲನೆ ಮಾಡಿ, ಸರ್ವಕರ್ಮವನ್ನು ತ್ಯಜಿಸಿ, ಒಳ್ಳೇ ಶ್ರದ್ಧೆಯಿಂದ, ಶ್ರವಣ ಇತ್ಯಾದಿ (ಗುರುಮುಖೇನ ಆತ್ಮ ಸ್ವರೂಪದ ಶ್ರವಣ, ಮನನ, ನಿಧಿ ದ್ಯಾಸನ -ಮನಸ್ಸು ಚಿತ್ತಗೊಳನ್ನು ಲೀನಗೊಳಿಸುವದು ಇತ್ಯಾದಿ) ನಿಷ್ಠೆಗಳನ್ನು ಮಾಡುತ್ತಾನೋ, ಅವನು ರಜೋ ಸ್ವಭಾವವನ್ನು ಹೋಗಲಾಡಿಸಿಕೊಳ್ಳುತ್ತಾನೆ.

ಮನೋಮಯೋ ನಾಪಿ ಭವೇತ್ಪರಾತ್ಮಾ
    ಹ್ಯಾದ್ಯಂತವತ್ತ್ವಾತ್ಪರಿಣಾಮಿಭಾವಾತ್ .
ದುಃಖಾತ್ಮಕತ್ವಾದ್ವಿಷಯತ್ವಹೇತೋಃ
    ದ್ರಷ್ಟಾ ಹಿ ದೃಶ್ಯಾತ್ಮತಯಾ ನ ದೃಷ್ಟಃ .. 183..

ಮನೋಮಯಕೋಶವೂ ಕೂಡ ಪರ ಆತ್ಮವಲ್ಲ. ಯಾಕೆಂದರೆ ಅದು ಆದಿ ಅಂತ್ಯಗಳನ್ನು ಹೊಂದಿದೆ. ಪರಿವರ್ತನೆ ಹೊಂದುತ್ತದೆ, ದುಃಖಾತ್ಮಕವಾಗಿದೆ ಮತ್ತು ವಿಷಯತ್ವಕ್ಕೆ ಕಾರಣವಾಗಿದೆ. ದ್ರಷ್ಟವಾಗಿದೆ. ಆದರೆ ಆತ್ಮವೂ ಎಂದೂ ದ್ರಷ್ಟವಲ್ಲ. (ಎಲ್ಲವನ್ನೂ ನೋಡುವ ಆತ್ಮವು ಎಂದೂ ಕಾಣುವ ವಸ್ತುವಾಗುವದಿಲ್ಲ.)

ವಿಜ್ಞಾನಮಯ ಕೋಶ

ಬುದ್ಧಿರ್ಬುದ್ಧೀಂದ್ರಿಯೈಃ ಸಾರ್ಧಂ ಸವೃತ್ತಿಃ ಕರ್ತೃಲಕ್ಷಣಃ .
ವಿಜ್ಞಾನಮಯಕೋಶಃ ಸ್ಯಾತ್ಪುಂಸಃ ಸಂಸಾರಕಾರಣಂ .. 184..

ಬುದ್ದಿ, ಜ್ಞಾನೇಂದ್ರಿಯಗಳನ್ನು ಹೊಂದಿದ, ಬುದ್ಧಿಯ ಅನೇಕ ರೂಪಗಳನ್ನು ಹೊಂದಿದ, ಕರ್ತೃ ಲಕ್ಷಣವಿರುವ ಕೋಶವೇ ವಿಜ್ಞಾನಮಯಕೋಶ. ಇದೇ ಮನುಷ್ಯನ ಸಂಸಾರಕ್ಕೆ ಕಾರಣವು.

ಅನುವ್ರಜಚ್ಚಿತ್ಪ್ರತಿಬಿಂಬಶಕ್ತಿಃ
    ವಿಜ್ಞಾನಸಂಜ್ಞಃ ಪ್ರಕೃತೇರ್ವಿಕಾರಃ .
ಜ್ಞಾನಕ್ರಿಯಾವಾನಹಮಿತ್ಯಜಸ್ರಂ
    ದೇಹೇಂದ್ರಿಯಾದಿಷ್ವಭಿಮನ್ಯತೇ ಭೃಶಂ .. 185..

 ವಿಜ್ಞಾನಮಯ ಕೋಶವು ಚಿತ್ ಶಕ್ತಿಯ ಪ್ರತಿಬಿಂಬವನ್ನು ಅನುಸರಿಸುತ್ತದೆ. ಅದು ಪ್ರಕೃತಿಯ ಮಾರ್ಪಟ್ಟ ರೂಪವಾಗಿದೆ. ನಿರಂತರವಾಗಿ ಜ್ಞಾನ ಕ್ರಿಯಗಳ ಕರ್ತೃ ತಾನು ಎಂದುಕೊಂಡು, ದೇಹ ಇಂದ್ರಿಯಗಳಲ್ಲಿ ಪೂರ್ತಿಯಾಗಿ ತನ್ನನ್ನು ಗುರುತಿಸಿಕೊಳ್ಳುತ್ತದೆ.

185. This knowledge sheath, which seems to be followed by a reflection of the power of the Chit, is a modification of the Prakriti, is endowed with the function of knowledge, and always wholly identifies itself with the body, organs, etc.

ಅನಾದಿಕಾಲೋಽಯಮಹಂಸ್ವಭಾವೋ
    ಜೀವಃ ಸಮಸ್ತವ್ಯವಹಾರವೋಢಾ .
ಕರೋತಿ ಕರ್ಮಾಣ್ಯಪಿ ಪೂರ್ವವಾಸನಃ 
    ಪುಣ್ಯಾನ್ಯಪುಣ್ಯಾನಿ ಚ ತತ್ಫಲಾನಿ .. 186..

ಭುಂಕ್ತೇ ವಿಚಿತ್ರಾಸ್ವಪಿ ಯೋನಿಷು ವ್ರಜ-
    ನ್ನಾಯಾತಿ ನಿರ್ಯಾತ್ಯಧ ಊರ್ಧ್ವಮೇಷಃ .
ಅಸ್ಯೈವ ವಿಜ್ಞಾನಮಯಸ್ಯ ಜಾಗ್ರತ್-
    ಸ್ವಪ್ನಾದ್ಯವಸ್ಥಾಃ ಸುಖದುಃಖಭೋಗಃ .. 187..

 ಇದು ಅನಾದಿ. ಅಹಂ ಸ್ವಭಾವವನ್ನು ಹೊಂದಿ, ಜೀವ ಎಂದು ಕರೆಯಿಸಿಕೊಳ್ಳುವ ಇದು (ವಿಜ್ಞಾನಮಯ ಕೋಶ), (ಮಾನವನ) ಎಲ್ಲ ವ್ಯವಹಾರಗಳನ್ನು ನಡೆಯಿಸುತ್ತದೆ. ಪೂರ್ವ (ಜನ್ಮದ) ವಾಸನೆಯಿಂದ ಪುಣ್ಯಕರ್ಮ ಮತ್ತು ಪಾಪ ಕರ್ಮಗಳನ್ನು ಮಾಡುತ್ತದೆ. ಮತ್ತು ಅವುಗಳ ಫಲವನ್ನು ಅನುಭವಿಸುತ್ತದೆ. ವಿಚಿತ್ರ ಜನ್ಮಗಳಲ್ಲಿ ಜನಿಸುತ್ತ ಇದು ಮೇಲಕ್ಕ ಹೋಗುತ್ತ, ಕೆಳಕ್ಕೆ ಬರುತ್ತ ಇರುತ್ತದೆ. ಜಾಗ್ರತ ಅವಸ್ಥ, ಸ್ವಪ್ನ ಅವಸ್ಥೆ ಹೊಂದಿದೆ ಮತ್ತು ಸುಖ ದುಃಖಗಳನ್ನು ಅನುಭವಿಸುತ್ತದೆ.

186-187. It is without beginning, characterized by egoism, is called the Jiva, and carries on all the activities on the relative plane. Through previous desires it performs good and evil actions and experiences their results. Being born in various bodies, it comes and goes, up and down. It is this knowledge sheath that has the waking, dream and other states, and experiences joy and grief.

ದೇಹಾದಿನಿಷ್ಠಾಶ್ರಮಧರ್ಮಕರ್ಮ-
    ಗುಣಾಭಿಮಾನಃ ಸತತಂ ಮಮೇತಿ .
ವಿಜ್ಞಾನಕೋಶೋಽಯಮತಿಪ್ರಕಾಶಃ
    ಪ್ರಕೃಷ್ಟಸಾನ್ನಿಧ್ಯವಶಾತ್ಪರಾತ್ಮನಃ .
ಅತೋ ಭವತ್ಯೇಷ ಉಪಾಧಿರಸ್ಯ
    ಯದಾತ್ಮಧೀಃ ಸಂಸರತಿ ಭ್ರಮೇಣ .. 188..

ಈ ಕೋಶವು  ಧೇಹ, ನಿಷ್ಠೆ, ಧರ್ಮ, ಕರ್ಮ, ಗುಣ, ಅಭಿಮಾನಗಳನ್ನೆಲ್ಲ ತನ್ನದು ಎಂದುಕೊಳ್ಳುತ್ತದೆ. ಆತ್ಮನಿಗೆ ಸಮೀಪ ಇರುವದರಿಂದ ಬಹು ಪ್ರಕಾಶಮಾನವಾಗಿದೆ. ಅದರಿಂದ ಈ ಪದವಿ ಪಡೆದಿದೆ. ಇದೆ ಆತ್ಮ ಎಂಬ ಭ್ರಮೆಯಿಂದ ಸಂಸರಿಸುತ್ತದೆ.

188. It always mistakes the duties, functions and attributes of the orders of life which belong to the body, as its own. The knowledge sheath is exceedingly effulgent, owing to its close proximity to the Supreme Self, which identifying Itself with it suffers transmigration through delusion. It is therefore a superimposition on the Self.

ಆತ್ಮ

ಯೋಽಯಂ ವಿಜ್ಞಾನಮಯಃ ಪ್ರಾಣೇಷು ಹೃದಿ ಸ್ಫುರತ್ಯಯಂ ಜ್ಯೋತಿಃ . 
ಕೂಟಸ್ಥಃ ಸನ್ನಾತ್ಮಾ ಕರ್ತಾ ಭೋಕ್ತಾ ಭವತ್ಯುಪಾಧಿಸ್ಥಃ .. 189..

 ಯಾವ ವಿಜ್ಞಾನಮಯ ಜ್ಯೋತಿಯಾದ ಆತ್ಮನು ಪ್ರಾಣದ ಮಧ್ಯದಲ್ಲಿ ಪ್ರಕಾಶಿಸುತ್ತಾನೋ, ಅವನು  ನಿರ್ವಿಕಾರನಾಗಿದ್ದರೂ, ಉಪಾಧಿ ಹೊಂದಿದ್ದರಿಂದ, ಕರ್ತೃವೂ, ಭೋಕ್ತೃವೂ  ಆದಂತೆ ತೋರುತ್ತಾನೆ.

189. The self-effulgent Ātman, which is Pure Knowledge, shines in the midst of the Prāṇas, within the heart. Though immutable, It becomes the agent and experiencer owing to Its superimposition, the knowledge sheath. 

ಸ್ವಯಂ ಪರಿಚ್ಛೇದಮುಪೇತ್ಯ ಬುದ್ಧೇಃ
    ತಾದಾತ್ಮ್ಯದೋಷೇಣ ಪರಂ ಮೃಷಾತ್ಮನಃ .
ಸರ್ವಾತ್ಮಕಃ ಸನ್ನಪಿ ವೀಕ್ಷತೇ ಸ್ವಯಂ
    ಸ್ವತಃ ಪೃಥಕ್ತ್ವೇನ ಮೃದೋ ಘಟಾನಿವ .. 190..

ಮಣ್ಣಿಂದ ಮಾಡಿದ ಮಡಿಕೆಯು, ತಾನು ಮಣ್ಣಲ್ಲ ಎಂದುಕೊಂಡಂತೆ, ಈ ಆತ್ಮನು ಸರ್ವಾತ್ಮಗಳಲ್ಲಿ ಇರುವವನಾದರೂ, ಬುದ್ಧಿಯ ದೋಷಗಳನ್ನು ತನಗೆ ಸೇರಿಸಿ, ತಪ್ಪಾಗಿ ತನ್ನನ್ನು ಮಿಥ್ಯಾಸ್ವರೂಪದಲ್ಲಿ ಗುರುತಿಸಿಕೊಂಡು, ತನ್ನನ್ನು ತಾನೇ ಬೇರೆಯವರನ್ನಾಗಿ ನೋಡುತ್ತಾನೆ.

190. Though the Self of everything that exists, this Ātman, Itself assuming the limitations of the Buddhi and wrongly identifying Itself with this totally unreal entity, looks upon Itself as something different – like earthen jars from the clay of which they are made.

ಉಪಾಧಿಸಂಬಂಧವಶಾತ್ಪರಾತ್ಮಾ
    ಹ್ಯುಪಾಧಿಧರ್ಮಾನನುಭಾತಿ ತದ್ಗುಣಃ . 
ಅಯೋವಿಕಾರಾನವಿಕಾರಿವಹ್ನಿವತ್
    ಸದೈಕರೂಪೋಽಪಿ ಪರಃ ಸ್ವಭಾವಾತ್ .. 191..

ನಿರ್ವಿಕಾರಿಯಾದ ಬೆಂಕಿ ಕಬ್ಬಿಣದ ವಿಕಾರವನ್ನು ಅನುಸರಿಸುವಂತೆ ಪರಮಾತ್ಮನು ಸ್ವಭಾವತಃ ಪರಿಪೂರ್ಣನೂ, ನಿರ್ವಿಕಾರ ರೂಪನೂ ಆದರೂ ಉಪಾಧಿದೋಷದಿಂದ ಉಪಾಧಿಯ ಗುಣವನ್ನು ಹೊಂದಿದಂತೆ ತೋರುತ್ತಾನೆ.

191. Owing to Its connection with the super-impositions, the Supreme Self, even thou naturally perfect (transcending Nature) and eternally unchanging, assumes the qualities of the superimpositions and appears to act just as they do – like the changeless fire assuming the modifications of the iron which it turns red-hot.

ಮುಕ್ತಿಯೆಂದರೇನು?

          ಶಿಷ್ಯ ಉವಾಚ .
ಭ್ರಮೇಣಾಪ್ಯನ್ಯಥಾ ವಾಽಸ್ತು ಜೀವಭಾವಃ ಪರಾತ್ಮನಃ .
ತದುಪಾಧೇರನಾದಿತ್ವಾನ್ನಾನಾದೇರ್ನಾಶ ಇಷ್ಯತೇ .. 192..

ಶಿಷ್ಯನು ಹೇಳುತ್ತಾನೆ -  ಅದು ಭ್ರಮೆಯೇ ಆಗಲಿ ಅಥವಾ ಪರಾತ್ಮನು ತನ್ನನ್ನು ಜೀವಾತ್ಮ ಎಂದುಕೊಂಡಿರಬಹುದೇ ಆಗಲಿ, ಉಪಾಧಿಗೆ ಆದಿಯಿಲ್ಲ. ಆದಿಯಿಲ್ಲದಿರುವದಕ್ಕೆ ನಾಶವೂ ಇರುವದಿಲ್ಲ.

192. The disciple questioned: Be it through delusion or otherwise that the Supreme Self has come to consider Itself as the Jīva, this superimposition is without beginning, and that which has no beginning cannot be supposed to have an end either.


        ಅತೋಽಸ್ಯ ಜೀವಭಾವೋಽಪಿ ನಿತ್ಯಾ ಭವತಿ ಸಂಸೃತಿಃ .
        ನ ನಿವರ್ತೇತ ತನ್ಮೋಕ್ಷಃ ಕಥಂ ಮೇ ಶ್ರೀಗುರೋ ವದ .. 193..

ಅದಕ್ಕಾಗಿ, ಈ ಆತ್ಮದ ಜೀವಭಾವ ನಿರಂತರವಾಗುವದು ಮತ್ತು ಕೊನೆಗೊಳ್ಳವುದೇ ಇಲ್ಲ. ಹಾಗಿದ್ದಾಗ ಮೋಕ್ಷ ಎಲ್ಲಿಂದ ಸಿಗುವದು, ಹೇಳಿ ಶ್ರೀ ಗುರುವೇ.
193. Therefore the Jīvahood of the soul also must have no end, and its transmigration must continue for ever. How then can there be Liberation for the soul? Kindly enlighten me on this point, O revered Master.

ಆತ್ಮ ಜ್ಞಾನದಿಂದ ಮುಕ್ತಿ

          ಶ್ರೀಗುರುರುವಾಚ .
ಸಮ್ಯಕ್ಪೃಷ್ಟಂ ತ್ವಯಾ ವಿದ್ವನ್ಸಾವಧಾನೇನ ತಚ್ಛೃಣು .
ಪ್ರಾಮಾಣಿಕೀ ನ ಭವತಿ ಭ್ರಾಂತ್ಯಾ ಮೋಹಿತಕಲ್ಪನಾ .. 194..

ಗುರುವು ಹೇಳಿದನು - ನೀನು ಸರಿಯಾಗಿ ಪ್ರಶ್ನಿಸಿದೆ. ಭ್ರಮೆಯಿಂದ ಕಲ್ಪನೆ ಮಾಡಿದ್ದು ಎಂದೂ ವಾಸ್ತವವಾಗುವದಿಲ್ಲ. 


194. The Teacher said: Thou hast rightly questioned, O learned man! Listen therefore attentively: The imagination which has been conjured up by delusion can never be accepted as a fact.

ಭ್ರಾಂತಿಂ ವಿನಾ ತ್ವಸಂಗಸ್ಯ ನಿಷ್ಕ್ರಿಯಸ್ಯ ನಿರಾಕೃತೇಃ .
ನ ಘಟೇತಾರ್ಥಸಂಬಂಧೋ ನಭಸೋ ನೀಲತಾದಿವತ್ .. 195..

ಆದರೆ ಭ್ರಮೆಯಿಲ್ಲದೇ ಹೋದರೆ, ನಿಸ್ಸಂಗ, ನಿರಾಕಾರ, ನಿಷ್ಕ್ರಿಯ ಆತ್ಮನ ಸಂಬಂಧ ಆಗುವದೇ ಇಲ್ಲ -  ಆಗಸಕ್ಕೆ ನೀಲಿ ಬಣ್ಣದಂತೆ.

195. But for delusion there can be no connection of the Self – which is unattached, beyond activity and formless – with the objective world, as in the case of blueness etc., with reference to the sky.

ಸ್ವಸ್ಯ ದ್ರಷ್ಟುರ್ನಿರ್ಗುಣಸ್ಯಾಕ್ರಿಯಸ್ಯ
    ಪ್ರತ್ಯಗ್ಬೋಧಾನಂದರೂಪಸ್ಯ ಬುದ್ಧೇಃ .
ಭ್ರಾಂತ್ಯಾ ಪ್ರಾಪ್ತೋ ಜೀವಭಾವೋ ನ ಸತ್ಯೋ
    ಮೋಹಾಪಾಯೇ ನಾಸ್ತ್ಯವಸ್ತುಸ್ವಭಾವಾತ್ .. 196..

ನಿರ್ಗುಣ, ಅಕ್ರಿಯ, ಚಿದಾನಂದ ಸ್ವರೂಪನಾದ ಆತ್ಮದ ಜೀವಭಾವ ಭ್ರಮೆಯಿಂದ ಉಂಟಾಗುತ್ತದೆಯೇ ಹೊರತು ಇದು ಸತ್ಯವಲ್ಲ. ಮೋಹ, ಭ್ರಮೆ ನಾಶವಾದ ಮೇಲೆ ಈ ಜೀವಭಾವವೂ ನಾಶವಾಗುತ್ತದೆ.
196. The Jīvahood of the Ātman, the Witness, which is beyond qualities and beyond activity, and which is realised within as Knowledge and Bliss Absolute – has been superimposed by the delusion of the Buddhi, and is not real. And because it is by nature an unreality, it ceases to exist when the delusion is gone.

ಯಾವದ್ಭ್ರಾಂತಿಸ್ತಾವದೇವಾಸ್ಯ ಸತ್ತಾ
    ಮಿಥ್ಯಾಜ್ಞಾನೋಜ್ಜೃಂಭಿತಸ್ಯ ಪ್ರಮಾದಾತ್ .
ರಜ್ಜ್ವಾಂ ಸರ್ಪೋ ಭ್ರಾಂತಿಕಾಲೀನ ಏವ
    ಭ್ರಾಂತೇರ್ನಾಶೇ ನೈವ ಸರ್ಪೋಽಪಿ ತದ್ವತ್ .. 197..

ಭ್ರಮೆಯಿಂದ ಹಗ್ಗವು ಸರ್ಪವಾಗಿ ಕಂಡು, ಭ್ರಮೆ ದೂರವಾದಾಗ ಸರ್ಪವು ಮಾಯವಾದಂತೆ, ಅದು (ಜೀವಭಾವ) ಪ್ರಮಾದದಿಂದ, ಮಿಥ್ಯಾಜ್ಞಾನದಿಂದ ಭ್ರಮೆ ಇರುವತನಕ ಇರುತ್ತದೆ.

197. It exists only so long as the delusion lasts, being caused by indiscrimination due to an illusion. The rope is supposed to be the snake only so long as the mistake lasts, and there is no more snake when the illusion has vanished. Similar is the case here.

ಅನಾದಿತ್ವಮವಿದ್ಯಾಯಾಃ ಕಾರ್ಯಸ್ಯಾಪಿ ತಥೇಷ್ಯತೇ .
ಉತ್ಪನ್ನಾಯಾಂ ತು ವಿದ್ಯಾಯಾಮಾವಿದ್ಯಕಮನಾದ್ಯಪಿ .. 198..

ಪ್ರಬೋಧೇ ಸ್ವಪ್ನವತ್ಸರ್ವಂ ಸಹಮೂಲಂ ವಿನಶ್ಯತಿ .
ಅನಾದ್ಯಪೀದಂ ನೋ ನಿತ್ಯಂ ಪ್ರಾಗಭಾವ ಇವ ಸ್ಫುಟಂ .. 199..

ಅವಿದ್ಯೆ ಮತ್ತು ಅದರ ಪ್ರಭಾವಗಳು ಆದಿರಹಿತವೆಂದು ಹೇಳಲಾಗುತ್ತದೆ. ಆದರೆ ವಿದ್ಯೆ ಅಥವಾ ಆತ್ಮಜ್ಞಾನವಾದಾಗ ಅವಿದ್ಯೆಯ ಪ್ರಭಾವಗಳು ಅನಾದಿಯಾದರೂ, ನಿದ್ದೆಯಿಂದ ಎಚ್ಚರವಾದಾಗ ಸ್ವಪ್ನ ಮಾಯವಾದಂತೆ, ಮೂಲಸಹಿತ ನಾಶವಾಗುತ್ತವೆ. ಅವಿದ್ಯೆಯು ಅನಾದಿಯಾದರೂ ನಿತ್ಯವಲ್ಲ ಎಂಬ ಮಾತು ಸ್ಫುಟವಾಗಿದೆ.

 
198-199. Avidya or Nescience and its effects are likewise considered as beginningless. But with the rise of Vidyā or realisation, the entire effects of Avidya, even though beginningless, are destroyed together with their root – like dreams on waking up from sleep. It is clear that the phenomenal universe, even though without beginning, is not eternal – like previous non-existence.

ಅನಾದೇರಪಿ ವಿಧ್ವಂಸಃ ಪ್ರಾಗಭಾವಸ್ಯ ವೀಕ್ಷಿತಃ .
ಯದ್ಬುದ್ಧ್ಯುಪಾಧಿಸಂಬಂಧಾತ್ಪರಿಕಲ್ಪಿತಮಾತ್ಮನಿ .. 200..

 ಜೀವತ್ವಂ ನ ತತೋಽನ್ಯಸ್ತು ಸ್ವರೂಪೇಣ ವಿಲಕ್ಷಣಃ . ತತೋಽನ್ಯತ್ತು
ಸಂಬಂಧಸ್ತ್ವಾತ್ಮನೋ ಬುದ್ಧ್ಯಾ ಮಿಥ್ಯಾಜ್ಞಾನಪುರಃಸರಃ .. 201..

ಪ್ರಾಗಭಾವವು (ಯಾವುದು ಇನ್ನೂ ಸೃಷ್ಟಿಯಾಗಿಲ್ಲವೋ ಅದು)  ಅನಾದಿಯಾಗಿದ್ದರೂ ಅದಕ್ಕೆ ಅಂತ್ಯವಿರುವದು ಕಂಡುಬರುತ್ತದೆ. (ಸೃಷ್ಟಿಯಾದ ಕೂಡಲೆ ಪ್ರಾಗಭಾವ ನಾಶವಾಗುತ್ತದೆ) ಬುದ್ಧಿಯೆಂಬ ಉಪಾಧಿಯ ಸಂಬಂಧದಿಂದ ಆತ್ಮನಲ್ಲಿ ಯಾವ ಜೀವತ್ವವು ಪರಿಕಲ್ಪಿತವಾಗಿದೆಯೊ ಅದು ನಿಜವಲ್ಲ; ಆದರೆ ಉಪಾಧಿಗಿಂತ ಬೇರೆಯಾದ ಆತ್ಮನು, ಸ್ವರೂಪದಿಂದ ವಿಲಕ್ಷಣನು. ಬುದ್ಧಿಯೊಡನೆ ಆತ್ಮನ ಸಂಬಂಧವು ಮಿಥ್ಯಾ ಜ್ಞಾನಪೂರ್ವಕವಾದದ್ದು.

200-201. Previous non-existence, even though beginningless, is observed to have an end. So the Jīvahood which is imagined to be in the Ātman through its relation with superimposed attributes such as the Buddhi, is not real; whereas the other (the Ātman) is essentially different from it. The relation between the Ātman and the Buddhi is due to a false knowledge.

Comments

Popular posts from this blog

ವಿವೇಕ ಚೂಡಾಮಣಿ - 21 - 40

ವಿವೇಕ ಚೂಡಾಮಣಿ 1-20

ವಿವೇಕ ಚೂಡಾಮಣಿ - 41-60