Posts

Showing posts from February, 2025

ವಿವೇಕ ಚೂಡಾಮಣಿ 1-20

ವಿವೇಕ ಚೂಡಾಮಣಿ - ಆದಿ ಶಂಕರಾಚಾರ್ಯರು ರಚಿಸಿದ  ಈ ಗ್ರಂಥವನ್ನು ಅದ್ವೈತ ಸಿದ್ಧಾಂತದ ಪ್ರಾರಂಭಿಕ ಗ್ರಂಥವೆಂದು ಹೇಳಬಹುದು.    ಪದ್ಯ ರೂಪದಲ್ಲಿರುವ ಈ ಕೃತಿಯು ಶಾರ್ದೂಲ ವಿಕ್ರೀಡಿತ ಛಂದದಲ್ಲಿ ರಚಿತವಾಗಿದೆ. ಈ ಗ್ರಂಥದ ಒಟ್ಟು ಶ್ಲೋಕಗಳ ಸಂಖ್ಯೆ  ೫೮೦.    ವಿವೇಕ ಎಂದರೆ ವಿವೇಚನೆ , ಚೂಡ ಎಂದರೆ ಶಿಖರ , ಮತ್ತು ಮಣಿ ಎಂದರೆ ರತ್ನ . ಆದ್ದರಿಂದ ಈ ಕೃತಿಯ ಶೀರ್ಷಿಕೆಯ ಅರ್ಥ ' ವಿವೇಕದ ಶಿಖರ-ರತ್ನ'. ಕಿರೀಟದ ಮೇಲಿರುವ ರತ್ನವು ಅತ್ಯಂತ ಎದ್ದುಕಾಣುವ ಆಭರಣವಾಗಿರುವಂತೆ, ಪ್ರಸ್ತುತ ಗ್ರಂಥವು ಅದ್ವೈತ ವೇದಾಂತದ ಕೃತಿಗಳಲ್ಲಿ ಮೇರುಕೃತಿಯಾಗಿದೆ. ವಿವೇಕ ಚೂಡಾಮಣಿಯು ವಿವೇಕ ಮತ್ತು ವಿವೇಚನೆಯ  ಬಗ್ಗೆ ಚರ್ಚಿಸುತ್ತದೆ. ವಾಸ್ತವ ಮತ್ತು ಮಾಯೆ ಇವುಗಳ ಅಂತರವನ್ನು ಅರಿಯಲು ಬೇಕಾದ ಜ್ಞಾನವನ್ನು ತಿಳಿಸಿಕೊಡುತ್ತದೆ.  ಪ್ರಕೃತಿ ಮತ್ತು ಆತ್ಮ ಹಾಗೂ ಆತ್ಮ ಮತ್ತು ಪರಮಾತ್ಮ ಇವುಗಳ ನಡುವಿನ ಸಂಬಂಧಗಳನ್ನು ವಿವರಿಸುತ್ತದೆ.  ಮುಕ್ತಿಯ ಸಾಧನೆಗೆ ಬೇಕಾದದ್ದು  ಆತ್ಮ ಜ್ಞಾನವೇ  ಎಂಬುದು ಈ ಗ್ರಂಥದ ಮೂಲಸಿದ್ಧಾಂತ.  ಬಹುಶಃ ಇದರ ರಚನೆ ಸುಮಾರು ಕ್ರಿಸ್ತಶಕ ಎಂಟನೆಯ ಶತಮಾನದಲ್ಲಿ ಆಗಿರಬಹುದು.   (ನಾನು ಶ್ಲೋಕಗಳನ್ನು ಅಂತರ್ಜಾಲದಿಂದ ಎರವಲು ಪಡೆದಿದ್ದೇನೆ. ಕನ್ನಡ ಅನುವಾದದ ಪ್ರಯಾಸ ನನ್ನದು. ಅನುವಾದದಲ್ಲಿ ಏನಾದರೂ ತಪ್ಪಿದ್ದಲ್ಲಿ ಕ್ಷಮೆ ಇರಲಿ.) ವಿವೇಕ ಚೂಡಾಮಣಿ...

ವಿವೇಕ ಚೂಡಾಮಣಿ - 21 - 40

ಸಾಧನ ಚತುಷ್ಟಯ ತದ್ವೈರಾಗ್ಯಂ ಜಿಹಾಸಾ ಯಾ ದರ್ಶನಶ್ರವಣಾದಿಭಿಃ . ದೇಹಾದಿಬ್ರಹ್ಮಪರ್ಯಂತೇ ಹ್ಯನಿತ್ಯೇ ಭೋಗವಸ್ತುನಿ .. 21.. ಜಿಹಾಸಾ - ಜಿಗುಪ್ಸೆ      ದೇಹಾದಿಬ್ರಹ್ಮಪರ್ಯಂತೇ - ದೇಹದಿಂದ ಬ್ರಹ್ಮದ ವರೆಗೆ ಎಲ್ಲ      ಹ್ಯನಿತ್ಯೇ - ಹಿ ಅನಿತ್ಯೇ - ಖಂಡಿತ ಅನಿತ್ಯ ವಸ್ತುಗಳಲ್ಲಿ  ದರ್ಶನ ಶ್ರವಣಾದಿಭಿಃ - ದರ್ಶನ ಶ್ರವಣ ಇತ್ಯಾದಿ  ವೈರಾಗ್ಯ ವೆಂದರೆ ಎಲ್ಲ ಆಸೆಗಳ ಪರಿತ್ಯಾಗ.  ದರ್ಶನ, ಶ್ರವಣ  ಇತ್ಯಾದಿಗಳ ಮೇಲೆ ಜಿಗುಪ್ಸೆ ಹಾಗೂ ದೇಹದಿಂದ ಬ್ರಹ್ಮನತನಕ ಸಕಲ ಅಶಾಶ್ವತ ಭೋಗವಸ್ತುಗಳಲ್ಲಿ ಜಿಗುಪ್ಸೆ. ವಿರಜ್ಯ ವಿಷಯವ್ರಾತಾದ್ದೋಷದೃಷ್ಟ್ಯಾ ಮುಹುರ್ಮುಹುಃ . ಸ್ವಲಕ್ಷ್ಯೇ ನಿಯತಾವಸ್ಥಾ ಮನಸಃ ಶಮ ಉಚ್ಯತೇ .. 22.. ಶಮೆ ಎಂದರೆ -   ಪುನಃ ಪುನಃ ವಿಷಯಸಮೂಹದ ದೋಷಗಳನ್ನು ನೋಡಿ ಅರಿತು, ಅವುಗಳನ್ನು ತ್ಯಜಿಸಿ, ಮನಸ್ಸನ್ನು ಗುರಿಯಲ್ಲಿ (ಆತ್ಮಜ್ಞಾನದ ಗುರಿಯಲ್ಲಿ) ಕೇಂದ್ರೀಕರಿಸುವದು.  ಶಮೆ ಎಂದರೆ ಮನೋನಿಗ್ರಹ, ಮಾನಸಿಕ ಸಮತೋಲನ ಎಂಬ ಅರ್ಥ. ವಿಷಯೇಭ್ಯಃ ಪರಾವರ್ತ್ಯ ಸ್ಥಾಪನಂ ಸ್ವಸ್ವಗೋಲಕೇ . ಉಭಯೇಷಾಮಿಂದ್ರಿಯಾಣಾಂ ಸ ದಮಃ ಪರಿಕೀರ್ತಿತಃ . ಬಾಹ್ಯಾನಾಲಂಬನಂ ವೃತ್ತೇರೇಷೋಪರತಿರುತ್ತಮಾ .. 23.. ದಮ ಎಂದರೆ - ಜ್ಞಾನದ ಮತ್ತು ಕ್ರಿಯೆಯ ಇಂದ್ರಿಯಗಳನ್ನು ಬಾಹ್ಯಸುಖದಿಂದ ದೂರ ತಿರುಗಿಸಿ, ಅವನ್ನು ಸ್ವಕೇಂದ್ರಗಳಲ್ಲಿ ಸ್ಥಾಪಿಸುವದು.  ಮನಸ್ಸ...

ವಿವೇಕ ಚೂಡಾಮಣಿ - 41-60

ತಥಾ ವದಂತಂ ಶರಣಾಗತಂ ಸ್ವಂ      ಸಂಸಾರದಾವಾನಲತಾಪತಪ್ತಂ . ನಿರೀಕ್ಷ್ಯ ಕಾರುಣ್ಯರಸಾರ್ದ್ರದೃಷ್ಟ್ಯಾ      ದದ್ಯಾದಭೀತಿಂ ಸಹಸಾ ಮಹಾತ್ಮಾ .. 41.. ಸಂಸಾರ ಸಾಗರದಲ್ಲಿ ಬೆಂದು, ಶರಣಾಗತನಾಗಿ ಹೀಗೆ ಹೇಳಿದವನನ್ನು ನೋಡಿ ಮಹಾತ್ಮನು ಕರುಣೆಯಿಂದ ನೋಡಿ ಅವನ ಭಯವನ್ನು ದೂರ ಮಾಡುತ್ತಾನೆ. ವಿದ್ವಾನ್ ಸ ತಸ್ಮಾ ಉಪಸತ್ತಿಮೀಯುಷೇ ಮುಮುಕ್ಷವೇ ಸಾಧು ಯಥೋಕ್ತಕಾರಿಣೇ . ಪ್ರಶಾಂತಚಿತ್ತಾಯ ಶಮಾನ್ವಿತಾಯ ತತ್ತ್ವೋಪದೇಶಂ ಕೃಪಯೈವ ಕುರ್ಯಾತ್ .. 42..  ಅವನ ರಕ್ಷಣೆಯನ್ನು ಅರಸಿ ಬಂದು, ಮುಕ್ತಿಗಾಗಿ ಪರಿತಪಿಸುತ್ತ, ವೇದ ವಾಕ್ಯಗಳನ್ನು ಚಾಚೂ ತಪ್ಪದೆ ಪಾಲಿಸುತ್ತ ಬಂದ, ಸಮಾಧಾನ, ಶಾಂತಿಯಿಂದ ತುಂಬಿದ ಮನುಷ್ಯನಿಗೆ, ಗುರುವು ಕೃಪೆ ಮಾಡಿ ತತ್ವೋಪದೇಶವನ್ನು ಮಾಡುತ್ತಾನೆ.  ಮಾ ಭೈಷ್ಟ ವಿದ್ವಂಸ್ತವ ನಾಸ್ತ್ಯಪಾಯಃ ಸಂಸಾರಸಿಂಧೋಸ್ತರಣೇಽಸ್ತ್ಯುಪಾಯಃ . ಯೇನೈವ ಯಾತಾ ಯತಯೋಽಸ್ಯ ಪಾರಂ ತಮೇವ ಮಾರ್ಗಂ ತವ ನಿರ್ದಿಶಾಮಿ .. 43..    "ವಿದ್ವಾನನೇ, ಭಯ ಪಡಬೇಡ. ನಿನಗೆ ಅಪಾಯವಿಲ್ಲ. ಸಂಸಾರ ಸಾಗರವನ್ನು ದಾಟಲು ಉಪಾಯವಿದೆ. ಯತಿಗಳು ಅದನ್ನು (ಸಂಸಾರ ಸಾಗರವನ್ನು) ದಾಟಿದ ಮಾರ್ಗವನ್ನೇ ನಾನು ನಿನಗೆ ಹೇಳಿಕೊಡುತ್ತೇನೆ." ಅಸ್ತ್ಯುಪಾಯೋ ಮಹಾನ್ಕಶ್ಚಿತ್ಸಂಸಾರಭಯನಾಶನಃ .  ತೇನ ತೀರ್ತ್ವಾ ಭವಾಂಭೋಧಿಂ ಪರಮಾನಂದಮಾಪ್ಸ್ಯಸಿ .. 44..  "ಸಂಸಾರ ಭಯವನ್ನು ನ...

ವಿವೇಕ ಚೂಡಾಮಣಿ - 61-80

ಅಜ್ಞಾನಸರ್ಪದಷ್ಟಸ್ಯ ಬ್ರಹ್ಮಜ್ಞಾನೌಷಧಂ ವಿನಾ . ಕಿಮು ವೇದೈಶ್ಚ ಶಾಸ್ತ್ರೈಶ್ಚ ಕಿಮು ಮಂತ್ರೈಃ ಕಿಮೌಷಧೈಃ .. 61.. ಯಾರನ್ನು ಅಜ್ಞಾನವೆಂಬ ಸರ್ಪವು ಕಚ್ಚಿರುತ್ತದೆಯೋ ಅವರನ್ನು ಕಾಪಾಡಲು ಬ್ರಹ್ಮಜ್ಞಾನವನ್ನು ಬಿಟ್ಟರೆ ಬೇರೆ ಪರಿಹಾರವಿಲ್ಲ. ಅಂತವರಿಗೆ ವೇದ, ಶಾಸ್ತ್ರಗಳಿಂದ, ಮಂತ್ರಗಳಿಂದ ಅಥವಾ ಔಷಧಿಗಳಿಂದ ಯಾವ ಪ್ರಯೋಜನವೂ ಆಗುವದಿಲ್ಲ. ಅಪರೋಕ್ಷಾನುಭೂತಿಯ ಅವಶ್ಯಕತೆ   ನ ಗಚ್ಛತಿ ವಿನಾ ಪಾನಂ ವ್ಯಾಧಿರೌಷಧಶಬ್ದತಃ . ವಿನಾಽಪರೋಕ್ಷಾನುಭವಂ ಬ್ರಹ್ಮಶಬ್ದೈರ್ನ ಮುಚ್ಯತೇ .. 62..   ಸುಮ್ಮನೆ ಔಷಧಿಯ ಹೆಸರು ಹೇಳಿ, ಔಷಧಿ ಕುಡಿಯದಿದ್ದರೆ ರೋಗವು ಗುಣವಾಗುವದಿಲ್ಲ. ಅದೇ ರೀತಿ ಬ್ರಹ್ಮ ಅನುಭವ ಮಾಡಿಕೊಳ್ಳದೆ ಸುಮ್ಮನೆ 'ಬ್ರಹ್ಮ' ಎಂಬ ಶಬ್ದ ಜಪ ಮಾಡಿದರೆ ಮುಕ್ತಿ ದೊರಕುವದಿಲ್ಲ.   ಅಕೃತ್ವಾ ದೃಶ್ಯವಿಲಯಮಜ್ಞಾತ್ವಾ ತತ್ತ್ವಮಾತ್ಮನಃ . ಬ್ರಹ್ಮಶಬ್ದೈಃ ಕುತೋ ಮುಕ್ತಿರುಕ್ತಿಮಾತ್ರಫಲೈರ್ನೃಣಾಂ .. 63.. ದ್ರಶ್ಯವಾಗುವ ವಸ್ತುಗಳನ್ನು ನಾಶ ಮಾಡದೆ, ಆತ್ಮತತ್ತ್ವವನ್ನು ಅರಿಯದೆ, ಸುಮ್ಮನೆ ಬ್ರಹ್ಮತ್ವ ಎಂಬ ಶಬ್ದವನ್ನು ಹೇಳುತ್ತಿದ್ದಾರೆ ನರರಿಗೆ ಎಲ್ಲಿಂದ ತಾನೇ ಮುಕ್ತಿ ಸಿಗುತ್ತದೆ?   (ಬಾಹ್ಯ ಜಗತ್ತಿನ ಬಂಧನವನ್ನು ಕಳಚಿಕೊಳ್ಳದೇ, ಬರಿದೇ ಜಪ-ತಪ ಮಾಡಿದರೆ ಮುಕ್ತಿ ದೊರಕುವದಿಲ್ಲ.) ಅಕೃತ್ವಾ ಶತ್ರುಸಂಹಾರಮಗತ್ವಾಖಿಲಭೂಶ್ರಿಯಂ . ರಾಜಾಹಮಿತಿ ಶಬ್ದಾನ್ನೋ ರಾಜಾ ಭವಿತುಮರ್ಹತಿ .. 64..   (ಉದಾಹ...