ವಿವೇಕ ಚೂಡಾಮಣಿ - 61-80
ಕಿಮು ವೇದೈಶ್ಚ ಶಾಸ್ತ್ರೈಶ್ಚ ಕಿಮು ಮಂತ್ರೈಃ ಕಿಮೌಷಧೈಃ .. 61..
ಯಾರನ್ನು
ಅಜ್ಞಾನವೆಂಬ ಸರ್ಪವು ಕಚ್ಚಿರುತ್ತದೆಯೋ ಅವರನ್ನು ಕಾಪಾಡಲು ಬ್ರಹ್ಮಜ್ಞಾನವನ್ನು ಬಿಟ್ಟರೆ ಬೇರೆ
ಪರಿಹಾರವಿಲ್ಲ. ಅಂತವರಿಗೆ ವೇದ, ಶಾಸ್ತ್ರಗಳಿಂದ, ಮಂತ್ರಗಳಿಂದ ಅಥವಾ ಔಷಧಿಗಳಿಂದ ಯಾವ
ಪ್ರಯೋಜನವೂ ಆಗುವದಿಲ್ಲ.
ಅಪರೋಕ್ಷಾನುಭೂತಿಯ ಅವಶ್ಯಕತೆ
ನ ಗಚ್ಛತಿ ವಿನಾ ಪಾನಂ ವ್ಯಾಧಿರೌಷಧಶಬ್ದತಃ .
ವಿನಾಽಪರೋಕ್ಷಾನುಭವಂ ಬ್ರಹ್ಮಶಬ್ದೈರ್ನ ಮುಚ್ಯತೇ .. 62..
ಸುಮ್ಮನೆ ಔಷಧಿಯ ಹೆಸರು ಹೇಳಿ, ಔಷಧಿ ಕುಡಿಯದಿದ್ದರೆ ರೋಗವು ಗುಣವಾಗುವದಿಲ್ಲ. ಅದೇ ರೀತಿ ಬ್ರಹ್ಮ ಅನುಭವ ಮಾಡಿಕೊಳ್ಳದೆ ಸುಮ್ಮನೆ 'ಬ್ರಹ್ಮ' ಎಂಬ ಶಬ್ದ ಜಪ ಮಾಡಿದರೆ ಮುಕ್ತಿ ದೊರಕುವದಿಲ್ಲ.
ಅಕೃತ್ವಾ ದೃಶ್ಯವಿಲಯಮಜ್ಞಾತ್ವಾ ತತ್ತ್ವಮಾತ್ಮನಃ .
ಬ್ರಹ್ಮಶಬ್ದೈಃ ಕುತೋ ಮುಕ್ತಿರುಕ್ತಿಮಾತ್ರಫಲೈರ್ನೃಣಾಂ .. 63..
ದ್ರಶ್ಯವಾಗುವ ವಸ್ತುಗಳನ್ನು ನಾಶ ಮಾಡದೆ, ಆತ್ಮತತ್ತ್ವವನ್ನು ಅರಿಯದೆ, ಸುಮ್ಮನೆ ಬ್ರಹ್ಮತ್ವ ಎಂಬ ಶಬ್ದವನ್ನು ಹೇಳುತ್ತಿದ್ದಾರೆ ನರರಿಗೆ ಎಲ್ಲಿಂದ ತಾನೇ ಮುಕ್ತಿ ಸಿಗುತ್ತದೆ? (ಬಾಹ್ಯ ಜಗತ್ತಿನ ಬಂಧನವನ್ನು ಕಳಚಿಕೊಳ್ಳದೇ, ಬರಿದೇ ಜಪ-ತಪ ಮಾಡಿದರೆ ಮುಕ್ತಿ ದೊರಕುವದಿಲ್ಲ.)
ಅಕೃತ್ವಾ ಶತ್ರುಸಂಹಾರಮಗತ್ವಾಖಿಲಭೂಶ್ರಿಯಂ .
ರಾಜಾಹಮಿತಿ ಶಬ್ದಾನ್ನೋ ರಾಜಾ ಭವಿತುಮರ್ಹತಿ .. 64..
(ಉದಾಹರಣೆಗೆ ) ಸಕಲ ಭೂ ಲೋಕವನ್ನು ಜಯಿಸದೇ, ಶತ್ರು ಸಂಹಾರವನ್ನು ಮಾಡದೇ, ಸುಮ್ಮನೇ ಬಾಯಲ್ಲಿ ನಾನೇ ರಾಜ ಎನ್ನುತ್ತಾ ಇದ್ದರೆ ರಾಜನಾಗಲು ಸಾಧ್ಯವೇ?
ಆಪ್ತೋಕ್ತಿಂ ಖನನಂ ತಥೋಪರಿಶಿಲಾದ್ಯುತ್ಕರ್ಷಣಂ ಸ್ವೀಕೃತಿಂ
ನಿಕ್ಷೇಪಃ ಸಮಪೇಕ್ಷತೇ ನ ಹಿ ಬಹಿಃಶಬ್ದೈಸ್ತು ನಿರ್ಗಚ್ಛತಿ .
ತದ್ವದ್ಬ್ರಹ್ಮವಿದೋಪದೇಶಮನನಧ್ಯಾನಾದಿಭಿರ್ಲಭ್ಯತೇ
ಮಾಯಾಕಾರ್ಯತಿರೋಹಿತಂ ಸ್ವಮಮಲಂ ತತ್ತ್ವಂ ನ ದುರ್ಯುಕ್ತಿಭಿಃ .. 65..
ಭೂಮಿಯ
ಆಳದಲ್ಲಿರುವ ನಿಕ್ಷೇಪವನ್ನು ಹೊರ ತೆಗೆಯಲು, ಆಪ್ತರ ಸಲಹೆ ಪಡೆದು, ನಂತರ ಭೂಮಿಯನ್ನು ಅಗೆದು, ನಂತರ ಕಲ್ಲು ಮಣ್ಣುಗಳನ್ನು
ಹೊರತೆಗೆದು, ಆ ನಿಕ್ಷೇಪವನ್ನು ಕೈಯಲ್ಲಿ ತೆಗೆಯಬೇಕೇ ಹೊರತು, ಬರಿ ಅದನ್ನು "ನಿಕ್ಷೇಪವೇ ಬಾ"
ಎಂದು ಕರೆದು ಹೊರತೆಗೆಯಲು ಸಾಧ್ಯವಾಗುವದಿಲ್ಲ. ಅದೇ ರೀತಿ, ಬ್ರಹ್ಮತತ್ವವು ಬ್ರಹ್ಮಜ್ಞರ
ಉಪದೇಶ, ನಂತರ ಮನನ, ಧ್ಯಾನ ಇವುಗಳಿಂದ ದೊರೆಯುವದೇ ಹೊರತು ಕುತರ್ಕದಿಂದ ಅಲ್ಲ.
ತಸ್ಮಾತ್ಸರ್ವಪ್ರಯತ್ನೇನ ಭವಬಂಧವಿಮುಕ್ತಯೇ .
ಸ್ವೈರೇವ ಯತ್ನಃ ಕರ್ತವ್ಯೋ ರೋಗಾದಾವಿವ ಪಂಡಿತೈಃ .. 66..
ಆದ್ದರಿಂದ ಪಂಡಿತನು ಭವಬಂಧನದಿಂದ ಮುಕ್ತಿ ಪಡೆಯಲು, ರೋಗದಿಂದ ಗುಣವಾಗಲು ಪ್ರಯತ್ನಿಸುವಂತೆ, ಸರ್ವ ಪ್ರಯತ್ನವನ್ನು ಸ್ವಯಂ ತಾನೇ ಮಾಡಬೇಕು.
ಯಸ್ತ್ವಯಾದ್ಯ ಕೃತಃ ಪ್ರಶ್ನೋ ವರೀಯಾಂಛಾಸ್ತ್ರವಿನ್ಮತಃ .
ಸೂತ್ರಪ್ರಾಯೋ ನಿಗೂಢಾರ್ಥೋ ಜ್ಞಾತವ್ಯಶ್ಚ ಮುಮುಕ್ಷುಭಿಃ .. 67..
ಇವತ್ತು ನೀನು ಕೇಳಿದ ಪ್ರಶ್ನೆ ಮಹತ್ತರವಾದುದು, ಶಾಸ್ತ್ರಸಮ್ಮತವಾದುದು, ಅರ್ಥಗರ್ಭಿತವಾದದ್ದು, ಸೂತ್ರ ಸದೃಶವಾದದ್ದು ಮತ್ತು ಮುಮುಕ್ಷುಗಳಿಂದ ತಿಳಿಯಲ್ಪಡತಕ್ಕದ್ದು ಆಗಿದೆ.
ತದೇತಚ್ಛ್ರವಣಾತ್ಸದ್ಯೋ ಭವಬಂಧಾದ್ವಿಮೋಕ್ಷ್ಯಸೇ .. 68..
ವಿದ್ವಾನನೇ, ಸಮಾಧಾನಚಿತ್ತನಾಗಿ ನಾನು ಹೇಳುವದನ್ನು ಕೇಳು. ಈ ಮಾತುಗಳನ್ನು ಕೇಳುವದರಿಂದ ನೀನು ಈಗಲೇ ಬಂಧಮುಕ್ತನಾಗುವೆ .
ಮೋಕ್ಷಸ್ಯ ಹೇತುಃ ಪ್ರಥಮೋ ನಿಗದ್ಯತೇ
ವೈರಾಗ್ಯಮತ್ಯಂತಮನಿತ್ಯವಸ್ತುಷು .
ತತಃ ಶಮಶ್ಚಾಪಿ ದಮಸ್ತಿತಿಕ್ಷಾ
ನ್ಯಾಸಃ ಪ್ರಸಕ್ತಾಖಿಲಕರ್ಮಣಾಂ ಭೃಶಂ .. 69..
ಮೋಕ್ಷ ಪಡೆಯಲು ಸಾಧನಗಳು - ಮೊದಲನೆಯದಾಗಿ ಅನಿತ್ಯ-ಅಶಾಶ್ವತ ವಸ್ತುಗಳಲ್ಲಿ ವೈರಾಗ್ಯ, ನಂತರ ಸಮಾಧಾನಚಿತ್ತ, ನಂತರ ಇಂದ್ರಿಯನಿಗ್ರಹ, ನಂತರ ಸಹನಶೀಲತೆ ಮತ್ತು ಸರ್ವ ಕರ್ಮಗಳನ್ನು ಸಂಪೂರ್ಣವಾಗಿ ತ್ಯಜಿಸುವದು.
ತತಃ ಶ್ರುತಿಸ್ತನ್ಮನನಂ ಸತತ್ತ್ವ-
ಧ್ಯಾನಂ ಚಿರಂ ನಿತ್ಯನಿರಂತರಂ ಮುನೇಃ .
ತತೋಽವಿಕಲ್ಪಂ ಪರಮೇತ್ಯ ವಿದ್ವಾನ್
ಇಹೈವ ನಿರ್ವಾಣಸುಖಂ ಸಮೃಚ್ಛತಿ .. 70..
ನಂತರ
ವೇದಾಂತಗಳ ಶ್ರವಣ , ಅವುಗಳನ್ನು ಮನನ ಮಾಡುವದು, ನಿತ್ಯ ನಿರಂತರವಾದ ತತ್ವದ ಕುರಿತು
ಧ್ಯಾನ ಮಾಡುವದು. ಈ ಎಲ್ಲ ಸಾಧನಗಳಿಂದ ವಿದ್ವಾನನು ನಿರ್ವಿಕಲ್ಪ ಸಮಾಧಿಯನ್ನು ಹೊಂದಿ, ಇಲ್ಲೇ- ಈ ಲೋಕದಲ್ಲೇ ನಿರ್ವಾಣ ಸುಖವನ್ನು ಪಡೆಯುತ್ತಾನೆ.
ಯದ್ಬೋದ್ಧವ್ಯಂ ತವೇದಾನೀಮಾತ್ಮಾನಾತ್ಮವಿವೇಚನಂ .
ತದುಚ್ಯತೇ ಮಯಾ ಸಮ್ಯಕ್ ಶ್ರುತ್ವಾತ್ಮನ್ಯವಧಾರಯ .. 71..
ಈಗ ನಾನು ನಿನಗೆ ತಿಳಿಯಲೇಬೇಕಾದ ಆತ್ಮ ಅನಾತ್ಮಗಳ ವಿವೇಚನೆಯನ್ನು ಹೇಳುತ್ತೇನೆ. ನಾನು ಹೇಳುವ ಈ ಮಾತನ್ನು ಸರಯಾಗಿ ಕೇಳಿದ ನಂತರ ಮನಸ್ಸಿನಲ್ಲಿ ನಿರ್ಧರಿಸು.
ಪಾದೋರುವಕ್ಷೋಭುಜಪೃಷ್ಠಮಸ್ತಕೈಃ
ಅಂಗೈರುಪಾಂಗೈರುಪಯುಕ್ತಮೇತತ್ ..72..
(ಮಾನವ
ಶರೀರವು) ಮಜ್ಜೆ, ಎಲುಬು, ಕೊಬ್ಬು, ಮಾಂಸ, ರಕ್ತ, ಚರ್ಮ, ಹೊರಚರ್ಮಗಳಿಂದ ಕೂಡಿದೆ ಹಾಗೂ,
ಕಾಲು, ತೊಡೆ, ಎದೆ, ಭುಜ, ಬೆನ್ನು ಮತ್ತು ತಲೆ ಈ ಅಂಗಗಳಿಂದ ಕೂಡಿದೆ
ಅಹಮ್ಮಮೇತಿ ಪ್ರಥಿತಂ ಶರೀರಂ
ಮೋಹಾಸ್ಪದಂ ಸ್ಥೂಲಮಿತೀರ್ಯತೇ ಬುಧೈಃ .
ನಭೋನಭಸ್ವದ್ದಹನಾಂಬುಭೂಮಯಃ
ಸೂಕ್ಷ್ಮಾಣಿ ಭೂತಾನಿ ಭವಂತಿ ತಾನಿ .. 73..
ನಾನು, ನನ್ನದು ಎಂದು ಪ್ರಸಿದ್ದವಾದ, ಮೋಹಕ್ಕೆ ಆಸ್ಪದವಾದ ಶರೀರವು, ಸ್ಥೂಲಶರೀರವೆಂದು ಪಂಡಿತರಿಂದ ಕರೆಯಲ್ಪಟ್ಟ ಈ ಶರೀರ, ಆಕಾಶ, ವಾಯು, ಅಗ್ನಿ, ನೀರು, ಭೂಮಿಗಳು ಸೂಕ್ಷ್ಕ್ಮ ಭೂತಗಳಿಂದ ಮಾಡಲ್ಪಟ್ಟಿದೆ. (ಶರೀರ ಈ ಪಂಚಭೂತಗಳಿಂದ ಮಾಡಲ್ಪಟ್ಟಿದೆ)
ಪರಸ್ಪರಾಂಶೈರ್ಮಿಲಿತಾನಿ ಭೂತ್ವಾ
ಸ್ಥೂಲಾನಿ ಚ ಸ್ಥೂಲಶರೀರಹೇತವಃ .
ಮಾತ್ರಾಸ್ತದೀಯಾ ವಿಷಯಾ ಭವಂತಿ
ಶಬ್ದಾದಯಃ ಪಂಚ ಸುಖಾಯ ಭೋಕ್ತುಃ .. 74..
ಈ
ಕಣಗಳು ಪರಸ್ಪರ ಸೇರಿಕೊಂಡು ಸ್ತೂಲವಾಗಿ ಸ್ಥೂಲ ಶರೀರವಾಗುತ್ತವೆ. ಅವುಗಳ
ಸೂಕ್ಶ್ಮಅಂಶಗಳು ಶಬ್ದ ಇತ್ಯಾದಿ ಪಂಚೇಂದ್ರಿಯಗಳಾಗಿ ಮನುಷ್ಯನ ಸುಖಕ್ಕೆ
ಕಾರಣವಾಗುತ್ತವೆ.
ಯ ಏಷು ಮೂಢಾ ವಿಷಯೇಷು ಬದ್ಧಾ
ರಾಗೋರುಪಾಶೇನ ಸುದುರ್ದಮೇನ .
ಆಯಾಂತಿ ನಿರ್ಯಾಂತ್ಯಧ ಊರ್ಧ್ವಮುಚ್ಚೈಃ
ಸ್ವಕರ್ಮದೂತೇನ ಜವೇನ ನೀತಾಃ .. 75..
ಈ ಮೂಢರು ಈ ವಿಷಯೇಂದ್ರಿಯಗಳಿಗೆ, ರಾಗ ಇವುಗಳ ಪ್ರಬಲವಾದ ಕತ್ತರಿಸಲು ಬಹಳ ಕಠಿಣವಾದ ಪಾಶಗಳಿಂದ ಬಂಧಿತರಾಗುತ್ತಾರೆ, ಅವರು
ತಮ್ಮ ಪೂರ್ವ ಕರ್ಮದಿಂದ ಮೇಲಕ್ಕೆ ಕೆಳಕ್ಕೆ, (ಜನ್ಮ-ಮೃತ್ಯುಗಳ ಚಕ್ರದಲ್ಲಿ) ವೇಗದಿಂದ
ಹೋಗುತ್ತಾ ಬರುತ್ತಾ ಇರುತ್ತಾರೆ.
ಶಬ್ದಾದಿಭಿಃ ಪಂಚಭಿರೇವ ಪಂಚ
ಪಂಚತ್ವಮಾಪುಃ ಸ್ವಗುಣೇನ ಬದ್ಧಾಃ .
ಕುರಂಗಮಾತಂಗಪತಂಗಮೀನ-
ಭೃಂಗಾ ನರಃ ಪಂಚಭಿರಂಚಿತಃ ಕಿಂ .. 76..
ಜಿಂಕೆ,
ಆನೆ, ಮಿಡತೆ, ಮೀನು, ದೊಂಬಿ ಇವೆಲ್ಲ ಒಂದೆಲ್ಲಾ ಒಂದು ಶಬ್ದ ಇತ್ಯಾದಿ ಪಂಚೇಂದ್ರಿಯಗಳಿಂದ ತಮ್ಮ ಸ್ವಗುಣಗಳಿಂದ ಬಂಧಿತವಾಗಿವೆ. (ಹಾಗಾದಾಗ) ಈ ಐದೂ ಪಂಚೇಂದ್ರಿಯಗಳಿಗೆ ಅಂಟಿಕೊಂಡಿರುವ ಮನುಷ್ಯನ ಕತೆ ಏನು?
ದೋಷೇಣ ತೀವ್ರೋ ವಿಷಯಃ ಕೃಷ್ಣಸರ್ಪವಿಷಾದಪಿ .
ವಿಷಂ ನಿಹಂತಿ ಭೋಕ್ತಾರಂ ದ್ರಷ್ಟಾರಂ ಚಕ್ಷುಷಾಪ್ಯಯಂ .. 77..
ಇಂದ್ರಿಯ
ವಿಷಯಗಳು ಕೃಷ್ಣಸರ್ಪದ ವಿಷಕ್ಕಿಂತ ಹೆಚ್ಚು ತೀವ್ರ ವಿಷಕಾರಿ. ವಿಷವಾದರೋ ಅದನ್ನು ತಿಂದವನನ್ನು ಮಾತ್ರ
ಕೊಲ್ಲುತ್ತದೆ . ಆದರೆ ಇಂದ್ರಿಯ ವಿಷಯಗಳು ಅವನ್ನು ಕಣ್ಣಿಂದ ನೋಡಿದವರನ್ನು ಕೂಡ ಕೊಲ್ಲುತ್ತವೆ.
ವಿಷಯಾಶಾಮಹಾಪಾಶಾದ್ಯೋ ವಿಮುಕ್ತಃ ಸುದುಸ್ತ್ಯಜಾತ್ .
ಸ ಏವ ಕಲ್ಪತೇ ಮುಕ್ತ್ಯೈ ನಾನ್ಯಃ ಷಟ್ಶಾಸ್ತ್ರವೇದ್ಯಪಿ .. 78..
ಬಿಡಿಸಿಕೊಳ್ಳಲು ಬಹು ಕಷ್ಟವಾದ, ಇಂದ್ರಿಯ ಅಭಿಲಾಷೆಯ ಮಹಾಪಾಶದಿಂದ ಮುಕ್ತನಾದವನು ಮಾತ್ರ ಮುಕ್ತಿಯನ್ನು
ಪಡೆಯುತ್ತಾನೆಯೇ ಹೊರತು ಆರು ಶಾಸ್ತ್ರಗಳನ್ನು ತಿಳಿದವನಲ್ಲ.
ಆಪಾತವೈರಾಗ್ಯವತೋ ಮುಮುಕ್ಷೂನ್
ಭವಾಬ್ಧಿಪಾರಂ ಪ್ರತಿಯಾತುಮುದ್ಯತಾನ್ .
ಆಶಾಗ್ರಹೋ ಮಜ್ಜಯತೇಽನ್ತರಾಲೇ
ನಿಗೃಹ್ಯ ಕಂಠೇ ವಿನಿವರ್ತ್ಯ ವೇಗಾತ್ .. 79..
ಸ್ವಲ್ಪ ವೈರಾಗ್ಯವನ್ನು ಹೊಂದಿದ ಮುಮುಕ್ಷುವನ್ನು ಸಂಸಾರ ಸಾಗರವನ್ನು ಪಾರು ಮಾಡಲು ಪ್ರಯತ್ನ ಮಾಡುತ್ತಿರುವಾಗ, ಆಸೆಯೆಂಬ ಮೊಸಳೆ ಅವನ ಕುತ್ತಿಗೆಯನ್ನು ಹಿಡಿದು, ರಭಸದಿಂದ (ಸಾಗರ) ಮಧ್ಯದಲ್ಲೇ ಮುಳುಗಿಸುತ್ತದೆ.
ವಿಷಯಾಖ್ಯಗ್ರಹೋ ಯೇನ ಸುವಿರಕ್ತ್ಯಸಿನಾ ಹತಃ .
ಸ ಗಚ್ಛತಿ ಭವಾಂಭೋಧೇಃ ಪಾರಂ ಪ್ರತ್ಯೂಹವರ್ಜಿತಃ .. 80..
ವಿಷಯೇಂದ್ರಿಯಗಳನ್ನು ವಿರಕ್ತಿಯೆಂಬ ಖಡ್ಗದಿಂದ ಯಾರು ಕೊಲ್ಲುತ್ತಾನೋ , ಅವನು ವಿಘ್ನಗಳಿಲ್ಲದೆ ಸಂಸಾರ ಸಾಗರವನ್ನು ದಾಟುತ್ತಾನೆ .
Comments