ವಿವೇಕ ಚೂಡಾಮಣಿ - 546-555

 ಸ್ಥೂಲಾದಿಸಂಬಂಧವತೋಽಭಿಮಾನಿನಃ
    ಸುಖಂ ಚ ದುಃಖಂ ಚ ಶುಭಾಶುಭೇ ಚ .
ವಿಧ್ವಸ್ತಬಂಧಸ್ಯ ಸದಾತ್ಮನೋ ಮುನೇಃ
    ಕುತಃ ಶುಭಂ ವಾಽಪ್ಯಶುಭಂ ಫಲಂ ವಾ .. 546..

ಸ್ಥೂಲ ಶರೀರದ ಸಂಬಂಧ ಇದ್ದವನಿಗೆ ಸುಖ, ದುಃಖ, ಶುಭ ಅಶುಭಗಳು ಕಾಡುತ್ತವೆ. ಆ ಬಂಧನಗಳನ್ನು ವಿದ್ವಂಸ ಮಾಡಿಕೊಂಡ ಆತ್ಮಜ್ಞಾನಿಯಾದ ಮುನಿಗೆ, ಎಲ್ಲಿಯ ಶುಭ, ಎಲ್ಲಿಯ ಅಶುಭ ಫಲ ಇರುತ್ತದೆ?
 
ತಮಸಾ ಗ್ರಸ್ತವದ್ಭಾನಾದಗ್ರಸ್ತೋಽಪಿ ರವಿರ್ಜನೈಃ .
ಗ್ರಸ್ತ ಇತ್ಯುಚ್ಯತೇ ಭ್ರಾಂತ್ಯಾಂ ಹ್ಯಜ್ಞಾತ್ವಾ ವಸ್ತುಲಕ್ಷಣಂ .. 547.. 
 
ರವಿಯು ರಾಹುವಿನಿಂದ ಗ್ರಸ್ತನಾಗದಿದ್ದರೂ, ಹಾಗೆ ಕಾಣುವದರಿಂದ, ವಸ್ತು ಸ್ಥಿತಿಯನ್ನು ಅರಿಯದ ಜನರು  ಭ್ರಾಂತಿಯಿಂದ, ಸೂರ್ಯನು ಗ್ರಸ್ತನಾಗಿರುವನು ಎಂದೇ ಹೇಳುತ್ತಾರೆ. 
 
ತದ್ವದ್ದೇಹಾದಿಬಂಧೇಭ್ಯೋ ವಿಮುಕ್ತಂ ಬ್ರಹ್ಮವಿತ್ತಮಂ .
ಪಶ್ಯಂತಿ ದೇಹಿವನ್ಮೂಢಾಃ ಶರೀರಾಭಾಸದರ್ಶನಾತ್ .. 548..
 
ಹಾಗೆಯೇ ದೇಹಾದಿ ಬಂಧನಗಳಿಂದ ಮುಕ್ತನಾದ ಬ್ರಹ್ಮಜ್ಞಾನಿಗೆ, ಶರೀರವಿದ್ದಂತೆ ಕಾಣಿಸುವದರಿಂದ, ಮೂಢರು ಅವನಿಗೆ ಶರೀರವಿದೆಯೆಂದೇ ತಿಳಿಯುತ್ತಾರೆ. 
 
ಅಹಿರ್ನಿರ್ಲ್ವಯನೀಂ ವಾಯಂ ಮುಕ್ತ್ವಾ ದೇಹಂ ತು ತಿಷ್ಠತಿ .
ಇತಸ್ತತಶ್ಚಾಲ್ಯಮಾನೋ ಯತ್ಕಿಂಚಿತ್ಪ್ರಾಣವಾಯುನಾ .. 549..

ಈ ಬ್ರಹ್ಮಜ್ಞಾನಿಯಾದ ಮುಕ್ತನ ದೇಹವು ಕಳಚಿದ ಹಾವಿನ ಪೊರೆಯಂತೆ ಇರುತ್ತದೆ., ಹೇಗೋ ಪ್ರಾಣವಾಯುವಿನಿಂದ ಅಲ್ಲಿ ಇಲ್ಲಿ ಚಲಿಸುತ್ತಲಿರುತ್ತದೆ. 

ಸ್ರೋತಸಾ ನೀಯತೇ ದಾರು ಯಥಾ ನಿಮ್ನೋನ್ನತಸ್ಥಲಂ .
ದೈವೇನ ನೀಯತೇ ದೇಹೋ ಯಥಾಕಾಲೋಪಭುಕ್ತಿಷು .. 550..

ಹೇಗೆ ಹರಿಯುವ ನೀರು ಮರದ ತುಂಡನ್ನು ತಗ್ಗು, ದಿಣ್ಣೆಗಳಿಗೆ ಒಯ್ಯುತ್ತದೆಯೋ, ಹಾಗೇ (ಮುಕ್ತನ) ದೇಹವು ದೈವದಿಂದ  ಸುಖದುಃಖದ ಕಡೆಗೆ ಕಾಲೋಚಿತವಾಗಿ ಒಯ್ಯಲ್ಪಡುತ್ತದೆ. 
 
ಪ್ರಾರಬ್ಧಕರ್ಮಪರಿಕಲ್ಪಿತವಾಸನಾಭಿಃ
    ಸಂಸಾರಿವಚ್ಚರತಿ ಭುಕ್ತಿಷು ಮುಕ್ತದೇಹಃ .
ಸಿದ್ಧಃ ಸ್ವಯಂ ವಸತಿ ಸಾಕ್ಷಿವದತ್ರ ತೂಷ್ಣೀಂ
    ಚಕ್ರಸ್ಯ ಮೂಲಮಿವ ಕಲ್ಪವಿಕಲ್ಪಶೂನ್ಯಃ .. 551..

ಬ್ರಹ್ಮಜ್ಞಾನಿಯು ಪ್ರಾರಬ್ಧ  ಕರ್ಮಗಳಿಂದ ಕಲ್ಪಿತವಾಗಿರುವ ಸಂಸ್ಕಾರಗಳಿಂದ ಸಂಸಾರಿಯಂತೆ ಭೋಗಗಳಲ್ಲಿ ಅನುಭವಿಸುತ್ತಾನೆ. ಆ ಸಿದ್ಧನು ಚಕ್ರದ ಮೂಲ ಅಚಲವಾಗಿರುವಂತೆ,  ಸಂಕಲ್ಪ ವಿಕಲ್ಪಗಳಿಲ್ಲದೆ, ಸಾಕ್ಷಿಯ ಹಾಗೆ ಮೌನವಾಗಿರುತ್ತಾನೆ. 
 
ನೈವೇಂದ್ರಿಯಾಣಿ ವಿಷಯೇಷು ನಿಯುಂಕ್ತ ಏಷ
    ನೈವಾಪಯುಂಕ್ತ ಉಪದರ್ಶನಲಕ್ಷಣಸ್ಥಃ .
ನೈವ ಕ್ರಿಯಾಫಲಮಪೀಷದವೇಕ್ಷತೇ ಸ 
    ಸ್ವಾನಂದಸಾಂದ್ರರಸಪಾನಸುಮತ್ತಚಿತ್ತಃ .. 552..

 
ಬ್ರಹ್ಮಜ್ಞಾನಿಯು, ಇಂದ್ರಿಯಗಳನ್ನು ವಿಷಯಗಳಲ್ಲಿ ತೊಡಗುವುದೂ ಇಲ್ಲ. , ಅವುಗಳಿಂದ ಹಿಂದೆ ಸರಿಯುವದೂ  ಇಲ್ಲ; ಸಾಕ್ಷಿರೂಪದಿಂದ ಅವಿಕಾರಿಯಾಗಿ,  ಕರ್ಮಫಲವನ್ನು ಸ್ವಲ್ಪವೂ  ಗಮನಿಸುವುದೇ ಸ್ವಾತ್ಮಾನಂದದ ಸಾಂದ್ರರಸಪಾನದಿಂದ ಮತ್ತನಾಗಿರುತ್ತಾನೆ.

ಲಕ್ಷ್ಯಾಲಕ್ಷ್ಯಗತಿಂ ತ್ಯಕ್ತ್ವಾ ಯಸ್ತಿಷ್ಠೇತ್ಕೇವಲಾತ್ಮನಾ .
ಶಿವ ಏವ ಸ್ವಯಂ ಸಾಕ್ಷಾದಯಂ ಬ್ರಹ್ಮವಿದುತ್ತಮಃ .. 553.

ಲಕ್ಬ್ಯ, ಅಲಕ್ಷ್ಯ ಎಂಬ ಭಾವನೆಗಳನ್ನು ಬಿಟ್ಟು ಕೇವಲ ಆತ್ಮರೂಪದಿಂದಲೇ ಇರುತ್ತಿರುವ ಇವನು, ಸಾಕ್ಷಾತ್ ಶಿವನೂ, ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠನೂ ಆಗಿರುವನು.

ಜೀವನ್ನೇವ ಸದಾ ಮುಕ್ತಃ ಕೃತಾರ್ಥೋ ಬ್ರಹ್ಮವಿತ್ತಮಃ .
ಉಪಾಧಿನಾಶಾದ್ಬ್ರಹ್ಮೈವ ಸನ್ ಬ್ರಹ್ಮಾಪ್ಯೇತಿ ನಿರ್ದ್ವಯಂ .. 554..

ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠನಾದವನು ಬದುಕಿರುವಾಗಲೇ ನಿತ್ಯಮುಕ್ತನೂ, ಕೃತಾರ್ಥನೂ ಆಗಿರುತ್ತಾನೆ; ಮೊದಲೂ ಬ್ರಹ್ಮವೇ ಆಗಿದ್ದ ಇವನು, ಉಪಾಧಿಯು ನಾಶವಾದ ನಂತರ  ಅದ್ವಯವಾದ ಬ್ರಹ್ಮವನ್ನು ಹೊಂದುತ್ತಾನೆ.

ಶೈಲೂಷೋ ವೇಷಸದ್ಭಾವಾಭಾವಯೋಶ್ಚ ಯಥಾ ಪುಮಾನ್ .
ತಥೈವ ಬ್ರಹ್ಮವಿಚ್ಛ್ರೇಷ್ಠಃ ಸದಾ ಬ್ರಹ್ಮೈವ ನಾಪರಃ .. 555..


ನಟನು ವೇಷವನ್ನು ಧರಿಸಿರುವಾಗಲೂ ವೇಷವಿಲ್ಲದಿರುವಾಗಲೂ ಹೇಗೆ ಪುರುಷನೇ ಆಗಿರುತ್ತಾನೋ,  ಹಾಗೆಯೇ ಬ್ರಹ್ಮಜ್ಞಾನಿಗಳೆಲ್ಲಿ ಶ್ರೇಷ್ಠನಾಗಿರುವವನು ಯಾವಾಗಲೂ ಬ್ರಹ್ಮವೇ ಆಗಿರುತ್ತಾನೆ, ಹೊರತು ಬೇರೆಯಾಗಿರುವುದಿಲ್ಲ.

Comments

Popular posts from this blog

ವಿವೇಕ ಚೂಡಾಮಣಿ - 21 - 40

ವಿವೇಕ ಚೂಡಾಮಣಿ 1-20

ವಿವೇಕ ಚೂಡಾಮಣಿ - 41-60