ವಿವೇಕ ಚೂಡಾಮಣಿ - 491-515
ನಿತ್ಯನಿರಂತರನಿಷ್ಕ್ರಿಯನಿಃಸೀಮಾಸಂಗಪೂರ್ಣಬೋಧಾತ್ಮಾ .. 491..
ನಾಹಮಿದಂ ನಾಹಮದೋಽಪ್ಯುಭಯೋರವಭಾಸಕಂ ಪರಂ ಶುದ್ಧಂ .
ಬಾಹ್ಯಾಭ್ಯಂತರಶೂನ್ಯಂ ಪೂರ್ಣಂ ಬ್ರಹ್ಮಾದ್ವಿತೀಯಮೇವಾಹಂ .. 492..
ನಾನು ಇದೂ ಅಲ್ಲ, ಅದೂ ಅಲ್ಲ; ಆದರೆ ಇವೆರಡನ್ನೂ ಪ್ರಕಾಶಿಸುವ, ಶ್ರೇಷ್ಠವೂ ಶುದ್ಧವೂ ಆದ, ಒಳಗು ಹೊರಗು ಎಂಬ ಭೇದವಿಲ್ಲದೆ, ಪೂರ್ಣವಾದ ಅದ್ವಿತೀಯವಾದ ಬ್ರಹ್ಮವೇ ನಾನು.
ನಿರುಪಮಮನಾದಿತತ್ತ್ವಂ ತ್ವಮಹಮಿದಮದ ಇತಿ ಕಲ್ಪನಾದೂರಂ .
ನಿತ್ಯಾನಂದೈಕರಸಂ ಸತ್ಯಂ ಬ್ರಹ್ಮಾದ್ವಿತೀಯಮೇವಾಹಂ .. 493..
ಅಸದೃಶವಾದ, 'ನಾನು, ನೀನು, ಅದು, ಇದು' ಎಂಬ ಕಲ್ಪನೆಗಳಿಂದ ದೂರವಾದ, ನಿತ್ಯಾನಂದ ಏಕರಸವಾದ, ಸತ್ಯವಾದ, ಅದ್ವಿತೀಯ ಬ್ರಹ್ಮನೇ ನಾನು.
ನಾರಾಯಣೋಽಹಂ ನರಕಾಂತಕೋಽಹಂ
ಪುರಾಂತಕೋಽಹಂ ಪುರುಷೋಽಹಮೀಶಃ .
ಅಖಂಡಬೋಧೋಽಹಮಶೇಷಸಾಕ್ಷೀ
ನಿರೀಶ್ವರೋಽಹಂ ನಿರಹಂ ಚ ನಿರ್ಮಮಃ .. 494..
ನಾನೇ ನಾರಯಣನು. ನಾನೇ ನರಕಾಂತಕನು. ತ್ರಿಪುರಾಸುರ ಸಂಹಾರಿಯಾದ ಶಿವನು ನಾನೇ. ಹೃದಯಾಂತರಾಳದಲ್ಲಿರುವ ಅಂತರ್ಯಾಮಿಯು ನಾನೇ. ಈಶ್ವರನು ನಾನೇ. ನಾನೇ ಅಖಂಡಜ್ಞಾನಸ್ವರೂಪನು, ಸರ್ವಸಾಕ್ಷಿಯು. ನಾನು ನಿರೀಶ್ವರನು, ನಿರಹಂಕಾರನು, ನಿರ್ಮಮನು.
ಸರ್ವೇಷು ಭೂತೇಷ್ವಹಮೇವ ಸಂಸ್ಥಿತೋ
ಜ್ಞಾನಾತ್ಮನಾಽನ್ತರ್ಬಹಿರಾಶ್ರಯಃ ಸನ್ .
ಭೋಕ್ತಾ ಚ ಭೋಗ್ಯಂ ಸ್ವಯಮೇವ ಸರ್ವಂ
ಯದ್ಯತ್ಪೃಥಗ್ದೃಷ್ಟಮಿದಂತಯಾ ಪುರಾ .. 495..
ಜ್ಞಾನಸ್ವರೂಪದಿಂದ ಎಲ್ಲರ ಆಶ್ರಯನಾಗಿ ಒಳಗೂ ಹೊರಗೂ ಸರ್ವಭೂತಗಳಲ್ಲಿಯೂ ನಾನೇ ಇದ್ದೇನೆ. ಮೊದಲು ಯಾವ ಯಾವುದು "ಇದು" ಎಂಬ ಭಾವನೆಯಿಂದ ಬೇರೆಬೇರೆಯಾಗಿ ಕಾಣುತ್ತಿತ್ತೋ, ಅವೆಲ್ಲವೂ ನಾನೇ ಆಗಿದ್ದೇನೆ.
ಮಯ್ಯಖಂಡಸುಖಾಂಭೋಧೌ ಬಹುಧಾ ವಿಶ್ವವೀಚಯಃ .
ಉತ್ಪದ್ಯಂತೇ ವಿಲೀಯಂತೇ ಮಾಯಾಮಾರುತವಿಭ್ರಮಾತ್ .. 496..
ನಾನೆಂಬ ಅಖಂಡ ಆನಂದ ಸಮುದ್ರದಲ್ಲಿ ವಿಶ್ವರೂಪಿ ನಾನಾ ತರಂಗಗಳು ಮಾಯಾರೂಪಿ ವಾಯುವಿನ ವೇಗದಿಂದ ಮೇಲೆಳುತ್ತ ಮತ್ತು ಲೀನವಾಗುತ್ತ ಇರುತ್ತವೆ.
ಸ್ಥುಲಾದಿಭಾವಾ ಮಯಿ ಕಲ್ಪಿತಾ ಭ್ರಮಾ-
ದಾರೋಪಿತಾನುಸ್ಫುರಣೇನ ಲೋಕೈಃ .
ಕಾಲೇ ಯಥಾ ಕಲ್ಪಕವತ್ಸರಾಯ-
ಣರ್ತ್ವಾದಯೋ ನಿಷ್ಕಲನಿರ್ವಿಕಲ್ಪೇ .. 497..
ಹೇಗೆ ನಿಷ್ಕಲ, ನಿರ್ವಿಕಲ್ಪ ಕಾಲದಲ್ಲಿ , ರೂಪದಿಂದ ಯಾವುದೇ ಕಲ್ಪ, ವರ್ಷ, ಅಯನ, ಋತುಗಳ ವಿಭಾಗವಿರುವದಿಲ್ಲವೋ, ಅದೇ ರೀತಿ ಜನರು ಭ್ರಮವಶಾತ್, ಕೇವಲ ಸ್ಫುರಣಮಾತ್ರದಿಂದ ನನ್ನಲ್ಲಿ ಆರೋಪಿತವಾಗೆ ತೋರುತ್ತಿರುವ ವಸ್ತು ಗಳ ಮೂಲಕ ಸ್ಥೂಲ, ಸೂಕ್ಷ್ಮ ಇತ್ಯಾದಿ ಭಾವಗಳ ಕಲ್ಪನೆ ಮಾಡುತ್ತಾರೆ.
ಆರೋಪಿತಂ ನಾಶ್ರಯದೂಷಕಂ ಭವೇತ್
ಕದಾಪಿ ಮೂಢೈರತಿದೋಷದೂಷಿತೈಃ .
ನಾರ್ದ್ರೀಕರೋತ್ಯೂಷರಭೂಮಿಭಾಗಂ
ಮರೀಚಿಕಾವಾರಿ ಮಹಾಪ್ರವಾಹಃ .. 498..
ಬುದ್ದಿ ದೋಷದಿಂದ, ದೂಷಿತ ಅಜ್ಞಾನದಿಂದ ಆರೋಪಿತ ವಸ್ತುವು ತನಗೆ ಆಶ್ರಯವಾದ ವಸ್ತುವಿಗೆ ಎಂದೂ ದೋಷವನ್ನುಂಟುಮಾಡುವದಿಲ್ಲ. ಮೃಗತೃಷ್ಣೆಯ ಜಲ ಪ್ರವಾಹವು ಮರುಭೂಮಿಯನ್ನು ಎಂದೂ ತೋಯಿಸುವದಿಲ್ಲ.
ಆಕಾಶವಲ್ಲೇಪವಿದೂರಗೋಽಹಂ
ಆದಿತ್ಯವದ್ಭಾಸ್ಯವಿಲಕ್ಷಣೋಽಹಂ .
ಅಹಾರ್ಯವನ್ನಿತ್ಯವಿನಿಶ್ಚಲೋಽಹಂ
ಅಂಭೋಧಿವತ್ಪಾರವಿವರ್ಜಿತೋಽಹಂ .. 499..
ನಾನು ಆಕಾಶದಂತೆ ನಿರ್ಲಿಪ್ತನು. ನಾನು ಸೂರ್ಯನಂತೆ ಪ್ರಕಾಶಿಸಲ್ಪಟ್ಟ ವಸ್ತುವಿಗಿಂತ ಭಿನ್ನನು. ನಾನು ಪರ್ವತದಂತೆ ಯಾವಾಗಲೂ ಅಚಲನು. ನಾನು ಸಮುದ್ರದಂತೆ ಅಪಾರನು.
ನ ಮೇ ದೇಹೇನ ಸಂಬಂಧೋ ಮೇಘೇನೇವ ವಿಹಾಯಸಃ .
ಅತಃ ಕುತೋ ಮೇ ತದ್ಧರ್ಮಾ ಜಾಗ್ರತ್ಸ್ವಪ್ನಸುಷುಪ್ತಯಃ .. 500..
ಮೋಡಗಳಿಗೆ ಆಕಾಶದ ಯಾವುದೇ ಸಂಬಂಧವಿಲ್ಲದಂತೆ, ನನಗೆ ಶರೀರದ ಯಾವುದೇ ಸಂಬಂಧವಿಲ್ಲ. ಹಾಗಾಗಿ ಶರೀರದ ಧರ್ಮಗಳಾದ ಜಾಗೃತ, ಸ್ವಪ್ನ, ಸುಷುಪ್ತಿಗಳು ನನಗೆ ಎಲ್ಲಿಂದ ಬರುವವು?
ಉಪಾಧಿರಾಯಾತಿ ಸ ಏವ ಗಚ್ಛತಿ
ಸ ಏವ ಕರ್ಮಾಣಿ ಕರೋತಿ ಭುಂಕ್ತೇ .
ಸ ಏವ ಜೀರ್ಯನ್ ಮ್ರಿಯತೇ ಸದಾಹಂ
ಕುಲಾದ್ರಿವನ್ನಿಶ್ಚಲ ಏವ ಸಂಸ್ಥಿತಃ .. 501..
ಉಪಾಧಿಯು ಬರುತ್ತದೆ, ಅದೇ ಹೋಗುತ್ತದೆ; ಅದೇ ಕರ್ಮಗಳನ್ನು ಮಾಡುತ್ತದೆ, ಫಲವನ್ನು ಭೋಗಿಸುತ್ತದೆ; ಅದೇ ಮುಪ್ಪನ್ನು ಹೊಂದಿ ನಾಶವಾಗುತ್ತದೆ. (ಆದರೆ) ನಾನು ಯಾವಾಗಲೂದಂತೆ ಕುಲಪರ್ವತದಂತೆ ನಿಶ್ಚಲನಾಗಿಯೇ ಇರುತ್ತೇನೆ.
ನ ಮೇ ಪ್ರವೃತ್ತಿರ್ನ ಚ ಮೇ ನಿವೃತ್ತಿಃ
ಸದೈಕರೂಪಸ್ಯ ನಿರಂಶಕಸ್ಯ .
ಏಕಾತ್ಮಕೋ ಯೋ ನಿಬಿಡೋ ನಿರಂತರೋ
ವ್ಯೋಮೇವ ಪೂರ್ಣಃ ಸ ಕಥಂ ನು ಚೇಷ್ಟತೇ .. 502..
ಯಾವಾಗಲೂ ಏಕರೂಪನಾದ ನಿರವಯವನಾದ ನನಗೆ ಪ್ರವೃತ್ತಿಯೂ ಇಲ್ಲ, ನಿವೃತ್ತಿಯೂ ಇಲ್ಲ. ಯಾರು ಏಕರೂಪನೂ, ಸಾಂದ್ರನೂ, ನಿರವಕಾಶನೂ, ಆಕಾಶದಂತೆ ಪೂರ್ಣನೂ ಆದವನು ಹೇಗೆ ತಾನೇ ಪ್ರಯಾಸ ಪಟ್ಟಾನು?
ಪುಣ್ಯಾನಿ ಪಾಪಾನಿ ನಿರಿಂದ್ರಿಯಸ್ಯ
ನಿಶ್ಚೇತಸೋ ನಿರ್ವಿಕೃತೇರ್ನಿರಾಕೃತೇಃ .
ಕುತೋ ಮಮಾಖಂಡಸುಖಾನುಭೂತೇಃ
ಬ್ರೂತೇ ಹ್ಯನನ್ವಾಗತಮಿತ್ಯಪಿ ಶ್ರುತಿಃ .. 503..
ಇಂದ್ರಿಯರಹಿತನೂ, ಚಿತ್ತವಿಲ್ಲದವನೂ, ನಿರ್ವಿಕಾರನೂ, ನಿರಾಕಾರನೂ ಅಖಂಡಾನಂದಾನುಭವ ಸ್ವರೂಪನೂ ಆದ ನನಗೆ ಪುಣ್ಯಗಳಾಗಲಿ, ಪಾಪಗಳಾಗಲಿ ಎಲ್ಲಿಂದ ಬಂದಾವು? "ಸ್ಪೃಷ್ಟವಾಗಿಲ್ಲ" ಎಂಬ ವಾಕ್ಯದಲ್ಲಿ ಶ್ರುತಿಯೂ ಸಹ ಇದನ್ನೇ ಹೇಳುತ್ತದೆ.
ಛಾಯಯಾ ಸ್ಪೃಷ್ಟಮುಷ್ಣಂ ವಾ ಶೀತಂ ವಾ ಸುಷ್ಠು ದುಃಷ್ಠು ವಾ .
ನ ಸ್ಪೃಶತ್ಯೇವ ಯತ್ಕಿಂಚಿತ್ಪುರುಷಂ ತದ್ವಿಲಕ್ಷಣಂ .. 504..
ನ ಸಾಕ್ಷಿಣಂ ಸಾಕ್ಷ್ಯಧರ್ಮಾಃ ಸಂಸ್ಪೃಶಂತಿ ವಿಲಕ್ಷಣಂ .
ಅವಿಕಾರಮುದಾಸೀನಂ ಗೃಹಧರ್ಮಾಃ ಪ್ರದೀಪವತ್ . .. 505..
ಮನೆಯನ್ನು ಬೆಳಗುವ ದೀಪಕ್ಕೆ ಮನೆಯ ಧರ್ಮಗಳು ತಾಗದಂತೆ, ನಿರ್ವಿಕಾರನೂ ಉದಾಸೀನನೂ ವಿಲಕ್ಸಣನೂ ಆದ ಸಾಕ್ಷಿಗೆ (ಆತ್ಮಕ್ಕೆ), ದೃಶ್ಯವಸ್ತುಗಳ ಧರ್ಮಗಳು ಮುಟ್ಟುವುದಿಲ್ಲ.
ರವೇರ್ಯಥಾ ಕರ್ಮಣಿ ಸಾಕ್ಷಿಭಾವೋ
ವಹ್ನೇರ್ಯಥಾ ದಾಹನಿಯಾಮಕತ್ವಂ .
ರಜ್ಜೋರ್ಯಥಾಽಽರೋಪಿತವಸ್ತುಸಂಗಃ
ತಥೈವ ಕೂಟಸ್ಥಚಿದಾತ್ಮನೋ ಮೇ .. 506..
ಮನುಷ್ಯನು ಮಾಡುವ ಕರ್ಮಗಳಿಗೆ ಹೇಗೆ ಸೂರ್ಯನು ಕೇವಲ ಸಾಕ್ಷಿಯೋ, ಹೇಗೆ ಅಗ್ನಿಯು ಯಾವ ಭೇದವಿಲ್ಲದೇ ಎಲ್ಲವನ್ನು ಸುಡುವದೋ, ಹೇಗೆ ಹಗ್ಗವು ಆರೋಪಿತ ವಸ್ತುವಿನೊಂದಿಗೆ ಸಂಬಂಧವನ್ನು ಹೊಂದಿದೆಯೋ, ಹಾಗೇ ಕೂಟಸ್ಥ ಚಿದಾತ್ಮ ಭಾವನಾದ ನನಗೆ ಸಾಕ್ಷೀಭಾವದ ಜೊತೆ ಸಂಬಂಧವಿದೆ.
ಕರ್ತಾಪಿ ವಾ ಕಾರಯಿತಾಪಿ ನಾಹಂ
ಭೋಕ್ತಾಪಿ ವಾ ಭೋಜಯಿತಾಪಿ ನಾಹಂ .
ದ್ರಷ್ಟಾಪಿ ವಾ ದರ್ಶಯಿತಾಪಿ ನಾಹಂ
ಸೋಽಹಂ ಸ್ವಯಂಜ್ಯೋತಿರನೀದೃಗಾತ್ಮಾ .. 507..
ನಾನು ಕಾರ್ಯ ಮಾಡುವವನಾಗಲಿ, ಮಾಡಿಸುವವನಾಗಲಿ ಅಲ್ಲ, ಅನುಭವಿಸುವವನಾಗಲಿ, ಬೇರೆಯವರಿಗೆ ಅನುಭವಿಸುವಂತೆ ಮಾಡುವವನಾಗಲೀ ಅಲ್ಲ. ನೋಡುವವನಾಗಲೀ, ತೋರಿಸುವನಾಗಲೀ ಅಲ್ಲ. ನಾನು ಸ್ವಯಂ ಜ್ಯೋತಿಯು, ದೃಶ್ಯಜಗತ್ತಿಗಿಂತ ಅತೀತವಾದವನು.
ಚಲತ್ಯುಪಾಧೌ ಪ್ರತಿಬಿಂಬಲೌಲ್ಯ-
ಮೌಪಾಧಿಕಂ ಮೂಢಧಿಯೋ ನಯಂತಿ .
ಸ್ವಬಿಂಬಭೂತಂ ರವಿವದ್ವಿನಿಷ್ಕ್ರಿಯಂ
ಕರ್ತಾಸ್ಮಿ ಭೋಕ್ತಾಸ್ಮಿ ಹತೋಽಸ್ಮಿ ಹೇತಿ .. 508..
ಉಪಾಧಿಯು ಚಲಿಸಿದಾಗ ಅದರ ಪ್ರತಿಬಿಂಬವನ್ನು ನೋಡಿ ಮೂಢರು ವಸ್ತುವೇ ಚಲಿಸುತ್ತದೆ ಎಂದುಕೊಳ್ಳುತ್ತಾರೆ. ಸೂರ್ಯನಂತೆ ನಿಷ್ಕ್ರಿಯವಾದ ಆತ್ಮವೇ ಚಲಿಸುತ್ತಿದೆ ಎಂದುಕೊಳ್ಳುತ್ತಾರೆ 'ನಾನು ಕರ್ತೃ, ನಾನು ಭೋಕ್ತೃ, ಅಯ್ಯೋ ನಾನು ಸತ್ತೆ' ಎಂದುಕೊಳ್ಳುತ್ತಾರೆ.
ಜಲೇ ವಾಪಿ ಸ್ಥಲೇ ವಾಪಿ ಲುಠತ್ವೇಷ ಜಡಾತ್ಮಕಃ .
ನಾಹಂ ವಿಲಿಪ್ಯೇ ತದ್ಧರ್ಮೈರ್ಘಟಧರ್ಮೈರ್ನಭೋ ಯಥಾ .. 509..
ಕರ್ತೃತ್ವಭೋಕ್ತೃತ್ವಖಲತ್ವಮತ್ತತಾ-
ಜಡತ್ವಬದ್ಧತ್ವವಿಮುಕ್ತತಾದಯಃ .
ಬುದ್ಧೇರ್ವಿಕಲ್ಪಾ ನ ತು ಸಂತಿ ವಸ್ತುತಃ
ಸ್ವಸ್ಮಿನ್ಪರೇ ಬ್ರಹ್ಮಣಿ ಕೇವಲೇಽದ್ವಯೇ .. 510..
ಕರ್ತತ್,ವ ಭೋಕ್ತತ್ವ, ನೀಚತ್ವ, ಮತ್ತತೆ, ಜಡತ್ವ, ಬದ್ಭತ್ವ, ಮುಕ್ತತ್ವ-- ಇವೇ ಮೊದಲಾದುವು ಬುದ್ಧಿಯ ಧರ್ಮಗಳೇ ಹೊರತು, ಕೇವಲನೂ, ಅದ್ವಯನೂ ಆದ, ಆತ್ಮವೂ ಆದ ಪರಬ್ರಹ್ಮನ ಧರ್ಮಗಳಲ್ಲ.
ಸಂತು ವಿಕಾರಾಃ ಪ್ರಕೃತೇರ್ದಶಧಾ ಶತಧಾ ಸಹಸ್ರಧಾ ವಾಪಿ .
ಕಿಂ ಮೇಽಸಂಗಚಿತಸ್ತೈರ್ನ ಘನಃ ಕ್ವಚಿದಂಬರಂ ಸ್ಪೃಶತಿ .. 511..
ಪ್ರಕೃತಿಯ ವಿಕಾರಗಳು ಹತ್ತು ಬಗೆಯಾಗಿರಲಿ, ಅಥವಾ ನೂರು ಬಗೆಯಾಗಿರಲಿ, ಅಥವಾ ಸಾವಿರ ಬಗೆಯಾಗಿರಲಿ; ಅಸಂಗಚಿದ್ರೂಪನಾದ ನನಗೆ ಅವುಗಳಿಂದ ಏನಾಗಬೇಕು?(ಉದಾ) ಮೇಘವು ಎಲ್ಲಿಯೂ ಆಕಾಶವನ್ನು ಸೋಂಕುವುದಿಲ್ಲ.
ಅವ್ಯಕ್ತಾದಿಸ್ಥೂಲಪರ್ಯಂತಮೇತತ್
ವಿಶ್ವಂ ಯತ್ರಾಭಾಸಮಾತ್ರಂ ಪ್ರತೀತಂ .
ವ್ಯೋಮಪ್ರಖ್ಯಂ ಸೂಕ್ಷ್ಮಮಾದ್ಯಂತಹೀನಂ
ಬ್ರಹ್ಮಾದ್ವೈತಂ ಯತ್ತದೇವಾಹಮಸ್ಮಿ .. 512..
ಯಾವುದರಲ್ಲಿ ಅವ್ಯಕ್ತದಿಂದ ಮೊದಲಾಗಿ ಸ್ಥೂಲಶರೀರತನಕವಿರುವ ಈ ವಿಶ್ವವು ಕೇವಲ ತೋರಿಕೆಯಾಗಿ ಕಾಣುತ್ತಿರುವುದೊ, ಯಾವುದು ಆಕಾಶದಂತೆ ಸೂಕ್ಸ್ಮವಾದ ಕೊನೆ-ಮೊದಲಿಲ್ಲದ ಅದ್ವಿತೀಯ-ಬ್ರಹ್ಮವೊ ಅದೇ ನಾನಾಗಿರುನೆನು.
ಸರ್ವಾಧಾರಂ ಸರ್ವವಸ್ತುಪ್ರಕಾಶಂ
ಸರ್ವಾಕಾರಂ ಸರ್ವಗಂ ಸರ್ವಶೂನ್ಯಂ .
ನಿತ್ಯಂ ಶುದ್ಧಂ ನಿಶ್ಚಲಂ ನಿರ್ವಿಕಲ್ಪಂ
ಬ್ರಹ್ಮಾದ್ವೈತಂ ಯತ್ತದೇವಾಹಮಸ್ಮಿ .. 513..
ಯಾವುದು ಸರ್ವಾಶ್ರಯವೂ, ಎಲ್ಲ ವಸ್ತುಗಳನ್ನೆಲ್ಲ ಪ್ರಕಾಶಿಸುವುದೂ, ಸರ್ವಾಕಾರವೂ, ಸರ್ವವ್ಯಾಪಿಯೂ, ಎಲ್ಲದರ ರಹಿತವೂ, ನಿತ್ಯವೂ, ಶುದ್ಧವೂ, ನಿಶ್ಚಲವೂ, ನಿರ್ವಿಕಲ್ಪವೂ ಆದ ಅದ್ವಿತೀಯ ಬ್ರಹ್ಮವೊ, ಅದೇ ನಾನಾಗಿರುವೆನು.
ಯತ್ಪ್ರತ್ಯಸ್ತಾಶೇಷಮಾಯಾವಿಶೇಷಂ
ಪ್ರತ್ಯಗ್ರೂಪಂ ಪ್ರತ್ಯಯಾಗಮ್ಯಮಾನಂ .
ಸತ್ಯಜ್ಞಾನಾನಂತಮಾನಂದರೂಪಂ
ಬ್ರಹ್ಮಾದ್ವೈತಂ ಯತ್ತದೇವಾಹಮಸ್ಮಿ .. 514..
ಯಾವುದು ಮಾಯೆಯ ವಿಶೇಷಗಳನ್ನು ಹೋಗಲಾಡಿಸಿಕೊಂಡಿರುವುದೊ, ಸರ್ವಾಂತರವೊ, ಮನಸ್ಸಿಗೆ ಅಗೋಚರವೊ,
ಸತ್ಯಜ್ಞಾನಾನಂತವೊ, ಆನಂದಸ್ವರೂಪವೊ, ಅದ್ವಿತೀಯ-ಬ್ರಹ್ಮವೊ ಅದೇ ನಾನಾಗಿರುವೆನು.
ನಿಷ್ಕ್ರಿಯೋಽಸ್ಮ್ಯವಿಕಾರೋಽಸ್ಮಿ
ನಿಷ್ಕಲೋಽಸ್ಮಿ ನಿರಾಕೃತಿಃ .
ನಿರ್ವಿಕಲ್ಪೋಽಸ್ಮಿ ನಿತ್ಯೋಽಸ್ಮಿ
ನಿರಾಲಂಬೋಽಸ್ಮಿ ನಿರ್ದ್ವಯಃ .. 515..
Comments