ವಿವೇಕ ಚೂಡಾಮಣಿ - 471-480
ನಿರಸ್ತರಾಗಾ ವಿನಿರಸ್ತಭೋಗಾಃ
ಶಾಂತಾಃ ಸುದಾಂತಾ ಯತಯೋ ಮಹಾಂತಃ .
ವಿಜ್ಞಾಯ ತತ್ತ್ವಂ ಪರಮೇತದಂತೇ
ಪ್ರಾಪ್ತಾಃ ಪರಾಂ ನಿರ್ವೃತಿಮಾತ್ಮಯೋಗಾತ್ .. 471..
ವಿಷಯೇಚ್ಛೆಗಳನ್ನು ತೊರೆದು, ಭೋಗಗಳನ್ನು ತ್ಯಜಿಸಿ, ಶಾಂತರಾಗಿ, ಇಂದ್ರಿಯಗಳನ್ನು ಪೂರ್ಣವಾಗಿ ನಿಗ್ರಹಿಸಿದ ಮಹನೀಯರಾದ ಯತಿಗಳು ಈ ಪರತತ್ತ್ವವನ್ನು ತಿಳಿದುಕೊಂಡು, ಕಡೆಗೆ ಆತ್ಮಯೋಗದಿಂದ ಪರಮಾನಂದವನ್ನು ಹೊಂದುತ್ತಾರೆ.
ಭವಾನಪೀದಂ ಪರತತ್ತ್ವಮಾತ್ಮನಃ
ಸ್ವರೂಪಮಾನಂದಘನಂ ವಿಚಾರ್ಯ .
ವಿಧೂಯ ಮೋಹಂ ಸ್ವಮನಃಪ್ರಕಲ್ಪಿತಂ
ಮುಕ್ತಃ ಕೃತಾರ್ಥೋ ಭವತು ಪ್ರಬುದ್ಧಃ .. 472..
ನೀನು ಕೂಡ ಈ ಆತ್ಮನ ಸ್ವರೂಪವಾಗಿರುವ ಆನಂದಘನವಾದ ಪರತತ್ತ್ವವನ್ನು ವಿವೇಚಿಸಿ, ನಿನ್ನ ಮನಸ್ಸಿನಲ್ಲಿ ಕಲ್ಪಿತವಾಗಿರುವ ಮೋಹವನ್ನು ಕೊಡವಿಕೊಂಡು, ಜ್ಞಾನಿಯೂ, ಮುಕ್ತನೂ ಆಗಿ ಕೃತಾರ್ಥನಾಗು.
ಸಮಾಧಿನಾ ಸಾಧುವಿನಿಶ್ಚಲಾತ್ಮನಾ
ಪಶ್ಯಾತ್ಮತತ್ತ್ವಂ ಸ್ಫುಟಬೋಧಚಕ್ಷುಷಾ .
ನಿಃಸಂಶಯಂ ಸಮ್ಯಗವೇಕ್ಷಿತಶ್ಚೇ-
ಚ್ಛ್ರುತಃ ಪದಾರ್ಥೋ ನ ಪುನರ್ವಿಕಲ್ಪ್ಯತೇ .. 473..
ಚೆನ್ನಾಗಿ ನಿಶ್ಚಲವಾದ ಮನಸ್ಸಿನಿಂದ ಕೂಡಿದ, ಸಮಾಧಿಯಿಂದ ಸ್ಫುಟವಾದ, ಜ್ಞಾನದೃಷ್ಟಿಯ ಮೂಲಕ ಆತ್ಮತತ್ವವನ್ನು ಸಾಕ್ಷಾತ್ಕರಿಸು. (ಗುರುವಿನಿಂದ ಉಪದೇಶಿಸಲ್ಪಟ್ಟ) ಪದಗಳ ಅರ್ಥವನ್ನು ಚೆನ್ನಾಗಿ ಕೇಳಿದರೆ ಪುನಃ ಸಂಶಯವುಂಟಾಗುವುದಿಲ್ಲ.
ಸ್ವಸ್ಯಾವಿದ್ಯಾಬಂಧಸಂಬಂಧಮೋಕ್ಷಾ-
ತ್ಸತ್ಯಜ್ಞಾನಾನಂದರೂಪಾತ್ಮಲಬ್ಧೌ .
ಶಾಸ್ತ್ರಂ ಯುಕ್ತಿರ್ದೇಶಿಕೋಕ್ತಿಃ ಪ್ರಮಾಣಂ
ಚಾಂತಃಸಿದ್ಧಾ ಸ್ವಾನುಭೂತಿಃ ಪ್ರಮಾಣಂ .. 474..
ಅಜ್ಞಾನರೂಪ ಬಂಧನದ ಬಿಡುಗಡೆಯಿಂದ, ಸತ್ಯಜ್ಞಾನಾನಂದ ಸ್ವ್ತರೂಪನಾದ ಆತ್ಮನನ್ನು ಸಾಕ್ಷಾತ್ಕರವಾಗಿದಾಗ, (ಅದಕ್ಕೆ) ಶಾಸ್ತ್ರವೂ, ಯುಕ್ತಿಯೂ, ಗುರುವಿನ ಮಾತೂ ಪ್ರಮಾಣ; ಮನಸ್ಸಿನ ಒಳಗೆ ಉಂಟಾದ ಅನುಭವವೂ ಪ್ರಮಾಣ.
ಬಂಧೋ ಮೋಕ್ಷಶ್ಚ ತೃಪ್ತಿಶ್ಚ ಚಿಂತಾಽಽರೋಗ್ಯಕ್ಷುಧಾದಯಃ .
ಸ್ವೇನೈವ ವೇದ್ಯಾ ಯಜ್ಜ್ಞಾನಂ ಪರೇಷಾಮಾನುಮಾನಿಕಂ .. 475..
ಮನುಷ್ಯನ ಬಂಧನ, ಮುಕ್ತಿ, ತೃಪ್ತಿ, ಚಿಂತೆ, ರೋಗ, ಹಸಿವು ಇತ್ಯಾದಿ (ಆದಾಗ) ಅವನಿಗೆ ಮಾತ್ರ ತಿಳಿದಿರುತ್ತದೆ. ಇತರರು ಇವುಗಳ ಬಗ್ಗೆ ಊಹೆ ಮಾತ್ರ ಮಾಡಬಹುದು.
ತಟಸ್ಥಿತಾ ಬೋಧಯಂತಿ ಗುರವಃ ಶ್ರುತಯೋ ಯಥಾ .
ಪ್ರಜ್ಞಯೈವ ತರೇದ್ವಿದ್ವಾನೀಶ್ವರಾನುಗೃಹೀತಯಾ .. 476..
ಶೃತಿಗಳು ಮತ್ತು ಗುರುವು ತಟಸ್ಥನಾಗಿ ಬೋಧಿಸುತ್ತಾರೆ; ವಿದ್ವಾನನು ತನ್ನ ಈಶ್ವರಾನುಗೃಹಿತವಾದ ಬುದ್ಧಿಯಿಂದ ಅವಿದ್ಯೆಯೆಂಬ ಸಾಗರವನ್ನು ದಾಟಬೇಕು. (ಸ್ವಪ್ರಯತ್ನದಿಂದ ಆತ್ಮ-ಜ್ಞಾನವನ್ನು ಪಡೆಯಬೇಕು - ಗುರುವಿನಿಂದ ಕಲಿತ ವಿದ್ಯೆ ಹಾಗೂ ಶಾಸ್ತ್ರ ಪಠನ ಸ್ವಲ್ಪ ಮಟ್ಟಿಗೆ ಮಾತ್ರ ಕಲಿಸಬಲ್ಲದು)
ಸ್ವಾನುಭೂತ್ಯಾ ಸ್ವಯಂ ಜ್ಞಾತ್ವಾ ಸ್ವಮಾತ್ಮಾನಮಖಂಡಿತಂ .
ಸಂಸಿದ್ಧಃ ಸುಸುಖಂ ತಿಷ್ಠೇನ್ನಿರ್ವಿಕಲ್ಪಾತ್ಮನಾಽಽತ್ಮನಿ .. 477..
ತನ್ನ ಅನುಭವದಿಂದ, ಅಖಂಡ ಆತ್ಮನನ್ನು ಸ್ವಯಂ ತಿಳಿದು, ಸಿದ್ಧ ಪುರುಷನು ನಿರ್ವಿಕಲ್ಪಭಾವದಿಂದ, ಆನಂದದಿಂದ, ಸದಾ ಆತ್ಮಾಭಿಮುಖನಾಗಿ ನಿಲ್ಲಬೇಕು.
ವೇದಾಂತಸಿದ್ಧಾಂತನಿರುಕ್ತಿರೇಷಾ
ಬ್ರಹ್ಮೈವ ಜೀವಃ ಸಕಲಂ ಜಗಚ್ಚ .
ಅಖಂಡರೂಪಸ್ಥಿತಿರೇವ ಮೋಕ್ಷೋ
ಬ್ರಹ್ಮಾದ್ವಿತೀಯೇ ಶ್ರುತಯಃ ಪ್ರಮಾಣಂ .. 478..
ಜೀವನೂ ಹಾಗೂ ಸಮಸ್ತ ಜಗತ್ತೂ ಬ್ರಹ್ಮನೇ, ಬ್ರಹ್ಮಸ್ವರೂಪದಲ್ಲಿರುವುದೇ ಮೋಕ್ಷವು - ಇದು ವೇದಾಂತಸಿದ್ಧಾಂತದ ಅಂತಿಮ ನಿರ್ಣಯ. ಬ್ರಹ್ಮ ಅದ್ವಿತೀಯ ಎಂಬುದಕ್ಕೆ ಶೃತಿಯೇ ಪ್ರಮಾಣವು.
ಇತಿ ಗುರುವಚನಾಚ್ಛ್ರುತಿಪ್ರಮಾಣಾತ್
ಪರಮವಗಮ್ಯ ಸತತ್ತ್ವಮಾತ್ಮಯುಕ್ತ್ಯಾ .
ಪ್ರಶಮಿತಕರಣಃ ಸಮಾಹಿತಾತ್ಮಾ
ಕ್ವಚಿದಚಲಾಕೃತಿರಾತ್ಮನಿಷ್ಠತೋಽಭೂತ್ .. 479..
ಹೀಗೆ ಗುರು ಉಪದೇಶದಿಂದಲೂ, ಶ್ರುತಿಪ್ರಮಾಣದಿಂದಲೂ, ತನ್ನ ಯುಕ್ತಿಯಿಂದಲೂ ಪರಮಾತ್ಮ-ತತ್ವವನ್ನು ತಿಳಿದುಕೊಂಡು, ಇಂದ್ರಿಯಗಳನ್ನೆಲ್ಲ ನಿಗ್ರಹಿಸಿ, ಚಿತ್ತವನ್ನು ನಿಶ್ಚಲಗೊಳಿಸಿ, ಶಿಷ್ಯನು ಒಂದು ಏಕಾಂತಪ್ರದೇಶದಲ್ಲಿ ನಿಶ್ಚಲನಾಗಿ ಕುಳಿತು ಬ್ರಹ್ಮನಿಷ್ಠನಾಗುವನು.
ಕಿಂಚಿತ್ಕಾಲಂ ಸಮಾಧಾಯ ಪರೇ ಬ್ರಹ್ಮಣಿ ಮಾನಸಂ .
ಉತ್ಥಾಯ ಪರಮಾನಂದಾದಿದಂ ವಚನಮಬ್ರವೀತ್ .. 480..
ಬ್ರಹ್ಮನಲ್ಲಿ ಮನಸ್ಸನ್ನು ಸ್ವಲ್ಪಹೊತ್ತು ನಿಲ್ಲಿಸಿ, (ಅನಂತರ)ಬಹಿರ್ಮುಖನಾಗಿ ಪರಮಾನಂದದಿಂದ ಈ ಮಾತನ್ನು ಹೇಳಿದನು:
Comments