ವಿವೇಕ ಚೂಡಾಮಣಿ - 461-470
ಶರೀರಸ್ಯಾಪಿ ಪ್ರಾರಬ್ಧಕಲ್ಪನಾ ಭ್ರಾಂತಿರೇವ ಹಿ .
ಅಧ್ಯಸ್ತಸ್ಯ ಕುತಃ ಸತ್ತ್ವಮಸತ್ಯಸ್ಯ ಕುತೋ ಜನಿಃ .
ಅಜಾತಸ್ಯ ಕುತೋ ನಾಶಃ ಪ್ರಾರಬ್ಧಮಸತಃ ಕುತಃ .. 461..
ಶರೀರಕ್ಕೂ ಕೂಡ ಪ್ರಾರಬ್ಧವನ್ನು ಕಲ್ಪಿಸುವುದು ಭ್ರಮೆಯೇ ಸರಿ; ಏಕೆಂದರೆ ಶರೀರ ಸ್ವಯಂ ಆರೋಪಿತ(ಆತ್ಮನ ಮೇಲಿನ ಮುಖವಾಡ)ವಾಗಿದೆ. ಆರೋಪಿತವಾಗಿರುವುದಕ್ಕೆ ಅಸ್ತಿತ್ವವು ಎಲ್ಲಿಂದ ಬರುವುದು? ಅಸ್ಕಿತ್ವವಿಲ್ಲದಿರುವುದಕ್ಕೆ ಜನ್ಮವು ಎಲ್ಲಿಂದ ಬರುವುದು? ಜನ್ಮವಿಲ್ಲದಿರುವುದಕ್ಕೆ ನಾಶವು ಎಲ್ಲಿಂದ ಬರುವುದು? ಅಸತ್ಯವಾದ ಶರೀರಕ್ಕೆ ಪ್ರಾರಬ್ಧವು ಎಲ್ಲಿಂದ ಬರುವುದು?
ಜ್ಞಾನೇನಾಜ್ಞಾನಕಾರ್ಯಸ್ಯ ಸಮೂಲಸ್ಯ ಲಯೋ ಯದಿ .
ತಿಷ್ಠತ್ಯಯಂ ಕಥಂ ದೇಹ ಇತಿ ಶಂಕಾವತೋ ಜಡಾನ್ .. 462..
ಸಮಾಧಾತುಂ ಬಾಹ್ಯದೃಷ್ಟ್ಯಾ ಪ್ರಾರಬ್ಧಂ ವದತಿ ಶ್ರುತಿಃ .
ನ ತು ದೇಹಾದಿಸತ್ಯತ್ವಬೋಧನಾಯ ವಿಪಶ್ಚಿತಾಂ ... 463..
ಜ್ಞಾನದಿಂದ ಅಜ್ಞಾನ ಮೂಲಸಹಿತ ನಾಶವಾಗುವದಿದ್ದಲ್ಲಿ, ಜ್ಞಾನಿಯ ಈ ಸ್ಥೂಲ ಶರೀರ ಹೇಗೆ ಉಳಿದುಕೊಳ್ಳುತ್ತದೆ ಎಂದು ಸಂಶಯ ಪಡುವ ಮೂರ್ಖರಿಗೆ ತಿಳಿಹೇಳಲು, ಶೃತಿಗಳು ವ್ಯವಹಾರಿಕ ದೃಷ್ಟಿಯಿಂದ ಪ್ರಾರಬ್ಧವು ಅದಕ್ಕೆ ಕಾರಣ ಎಂದು ಹೇಳುತ್ತವೆಯೇ ಹೊರತು, ವಿದ್ವಾಂಸನಿಗೆ ದೇಹಾದಿಗಳ ಸತ್ಯತ್ವವನ್ನು (ದೇಹ ಇತ್ಯಾದಿಗಳು ನೈಜ ಎಂದು) ತಿಳಿಸಲು ಹೇಳುತ್ತಿಲ್ಲ.
ಪರಿಪೂರ್ಣಮನಾದ್ಯಂತಮಪ್ರಮೇಯಮವಿಕ್ರಿಯಂ .
ಏಕಮೇವಾದ್ವಯಂ ಬ್ರಹ್ಮ ನೇಹ ನಾನಾಸ್ತಿ ಕಿಂಚನ .. 464..
ಬ್ರಹ್ಮ ಪರಿಪೂರ್ಣವಾದದ್ದು, ಆದಿ, ಅಂತ್ಯಗಳಿಲ್ಲದ್ದು, ಅಪ್ರಮೇಯವಾದದ್ದು, ವಿಕಾರವಿಲ್ಲದ್ದು, ಏಕಮೇವ ಅದ್ವಿತೀಯವಾದದ್ದು. ಈ ಬ್ರಹ್ಮನಲ್ಲಿ ದ್ವೈತವು ಸ್ವಲ್ಪವೂ ಇಲ್ಲ.
ಸದ್ಘನಂ ಚಿದ್ಘನಂ ನಿತ್ಯಮಾನಂದಘನಮಕ್ರಿಯಂ .
ಏಕಮೇವಾದ್ವಯಂ ಬ್ರಹ್ಮ ನೇಹ ನಾನಾಸ್ತಿ ಕಿಂಚನ .. 465..
ಯಾವುದು ಘನೀಭೂತವಾದ ಸತ್, ಚಿತ್ ಮತ್ತು ಆನಂದವೋ, ಆ ಏಕಮೇವ, ನಿತ್ಯ, ಅದ್ವಿತೀಯ, ಬ್ರಹ್ಮನೇ ಸತ್ಯವಸ್ತು. ಅದರ ಹೊರತು ಬೇರೆ ಏನೂ ಇಲ್ಲ.
ಪ್ರತ್ಯಗೇಕರಸಂ ಪೂರ್ಣಮನಂತಂ ಸರ್ವತೋಮುಖಂ .
ಏಕಮೇವಾದ್ವಯಂ ಬ್ರಹ್ಮ ನೇಹ ನಾನಾಸ್ತಿ ಕಿಂಚನ .. 466..
ಬ್ರಹ್ಮ ಎಲ್ಲರ ಒಳಗಿರುವಂತಹದು, ಸಮರಸವಾಗಿರುವದು, ಸರ್ವವ್ಯಾಪಿಯು, ಪೂರ್ಣವು, ಅನಂತವು ಆಗಿರುವದು. ಅದರ ಹೊರತು ಬೇರೆ ಏನೂ ಇಲ್ಲ.
ಅಹೇಯಮನುಪಾದೇಯಮನಾಧೇಯಮನಾಶ್ರಯಂ .
ಏಕಮೇವಾದ್ವಯಂ ಬ್ರಹ್ಮ ನೇಹ ನಾನಾಸ್ತಿ ಕಿಂಚನ .. 467..
ಬ್ರಹ್ಮ ತ್ಯಜಿಸತಕ್ಕದ್ದೂ ಅಲ್ಲ, ಗ್ರಹಿಸತಕ್ಕದ್ದೂ ಅಲ್ಲ, ಒಪ್ಪತಕ್ಕದ್ದೂ ಅಲ್ಲ, ಯಾವ ಆಧಾರವಿಲ್ಲದಿರುವದು, ಏಕಮೇವವಾದದ್ದು ಹಾಗೂ ಅದ್ವಿತೀಯವಾದದ್ದು. ಅದರ ಹೊರತು ಬೇರೆ ಏನೂ ಇಲ್ಲ.
ನಿರ್ಗುಣಂ ನಿಷ್ಕಲಂ ಸೂಕ್ಷ್ಮಂ ನಿರ್ವಿಕಲ್ಪಂ ನಿರಂಜನಂ .
ಏಕಮೇವಾದ್ವಯಂ ಬ್ರಹ್ಮ ನೇಹ ನಾನಾಸ್ತಿ ಕಿಂಚನ .. 468..
ಬ್ರಹ್ಮ ನಿರ್ಗುಣವೂ, ನಿಷ್ಕಲವೂ ಸೂಕ್ಷ್ಮವೂ, ನಿರ್ವಿಕಲ್ಪವೂ, ನಿರಂಜನವೂ, ಏಕಮೇವಾದ್ವಿತೀಯವೂ ಆಗಿದೆ. ಅದರ ಹೊರತು ಬೇರೆ ಏನೂ ಇಲ್ಲ.
ಅನಿರೂಪ್ಯ ಸ್ವರೂಪಂ ಯನ್ಮನೋವಾಚಾಮಗೋಚರಂ .
ಏಕಮೇವಾದ್ವಯಂ ಬ್ರಹ್ಮ ನೇಹ ನಾನಾಸ್ತಿ ಕಿಂಚನ .. 469..
ಯಾರ ರೂಪವನ್ನು ವರ್ಣಿಸಲಾಗದೋ, ಯಾರು ಮನ, ವಾಕ್ ಗಳಿಗೆ ಅಗೋಚರವೋ ಅಂತಹ ಬ್ರಹ್ಮನು ಏಕಮೇವಾದ್ವಿತೀಯ. ಅದರ ಹೊರತು ಬೇರೆ ಏನೂ ಇಲ್ಲ.
ಸತ್ಸಮೃದ್ಧಂ ಸ್ವತಃಸಿದ್ಧಂ ಶುದ್ಧಂ ಬುದ್ಧಮನೀದೃಶಂ .
ಏಕಮೇವಾದ್ವಯಂ ಬ್ರಹ್ಮ ನೇಹ ನಾನಾಸ್ತಿ ಕಿಂಚನ .. 470..
ಬ್ರಹ್ಮವು ಸತ್ ಸ್ವರೂಪವೂ, ಶುದ್ಧವೂ ಜ್ಞಾನಸ್ವರೂಪವೂ, ಸಮೃದ್ಧವೂ, ಅಸದೃಶವೂ ಏಕಮೇವ ಅದ್ವಿತೀಯವೂ ಆಗಿದೆ. ಅದರ ಹೊರತು ಇನ್ನೇನೂ ಇಲ್ಲ.
Comments