ವಿವೇಕ ಚೂಡಾಮಣಿ -451-460

 ಜ್ಞಾನೋದಯಾತ್ಪುರಾರಬ್ಧಂ ಕರ್ಮಜ್ಞಾನಾನ್ನ ನಶ್ಯತಿ .
ಅದತ್ವಾ ಸ್ವಫಲಂ ಲಕ್ಷ್ಯಮುದ್ದಿಶ್ಯೋತ್ಸೃಷ್ಟಬಾಣವತ್ .. 451..

ಜ್ಞಾನೋದಯದ ಮೊದಲೇ ಮಾಡಿದ ಕರ್ಮವು ಆತ್ಮ ಜ್ಞಾನದಿಂದ ನಾಶವಾಗದೇ, ಗುರಿಯನ್ನು ಉದ್ದೇಶಿಸಿ ಬಿಟ್ಟ ಬಾಣವು ಗುರಿ ತಲುಪುವಂತೆ, , ಅದರ ಫಲವನ್ನು ಕೊಡದೇ ಇರುವದಿಲ್ಲ.

 
ವ್ಯಾಘ್ರಬುದ್ಧ್ಯಾ ವಿನಿರ್ಮುಕ್ತೋ ಬಾಣಃ ಪಶ್ಚಾತ್ತು ಗೋಮತೌ .
ನ ತಿಷ್ಠತಿ ಛಿನತ್ಯೇವ ಲಕ್ಷ್ಯಂ ವೇಗೇನ ನಿರ್ಭರಂ .. 452..

(ಉದಾ)ಹುಲಿಯೆಂಬ ತಿಳಿದು ಬಿಡಲ್ಪಟ್ಟ ಬಾಣವು, ಹಸುವೆಂದು ತಿಳಿದ ನಂತರವೂ ನಿಲ್ಲದೇ,  ವೇಗದಿಂದ ತನ್ನ ಗುರಿಯನ್ನು ಖಂಡಿತವಾಗಿ ತಲುಪುತ್ತದೆ.

ಪ್ರಾರಬ್ಧಂ ಬಲವತ್ತರಂ ಖಲು ವಿದಾಂ ಭೋಗೇನ ತಸ್ಯ ಕ್ಷಯಃ
ಸಮ್ಯಗ್ಜ್ಞಾನಹುತಾಶನೇನ ವಿಲಯಃ ಪ್ರಾಕ್ಸಂಚಿತಾಗಾಮಿನಾಂ .
ಬ್ರಹ್ಮಾತ್ಮೈಕ್ಯಮವೇಕ್ಷ್ಯ ತನ್ಮಯತಯಾ ಯೇ ಸರ್ವದಾ ಸಂಸ್ಥಿತಾಃ
ತೇಷಾಂ ತತ್ತ್ರಿತಯಂ ನಹಿ ಕ್ವಚಿದಪಿ ಬ್ರಹ್ಮೈವ ತೇ ನಿರ್ಗುಣಂ .. 453..

ಪ್ರಾರಬ್ಧ ಕರ್ಮವು ನಿಜವಾಗಿ ಅತ್ಯಂತ ಬಲವಾದದ್ದು. ಜ್ಞಾನಿಗಳು ಅದನ್ನು ಅನುಭವಿಸಿಯೇ ನಾಶಗೊಳಿಸಬೇಕು. ಸಮ್ಯಗ್‌ಜ್ಞಾನವೆಂಬ ಅಗ್ನಿಯಿಂದ ಹಿಂದೆ ಸಂಪಾದಿಸಿದ ಮತ್ತು ಮುಂದೆ ಬರುವ ಕರ್ಮಗಳೆಲ್ಲ ನಾಶವಾಗುತ್ತವೆ. ಆದರೆ ಯಾರು ಜೀವಾತ್ಮ.-ಪರಮಾತ್ಮರ ಐಕ್ಯವನ್ನು ತಿಳಿದುಕೊಂಡು, ತನ್ಮಯತೆಯಿಂದಲೇ ಯಾವಾಗಲೂ ಇರುವರೊ, ಅವರಿಗೆ
ಈ ಮೂರು ಬಗೆಯ ಕರ್ಮವೂ (ಪ್ರಾರಬ್ಧ, ಸಂಚಿತ, ಆಗಾಮಿ) ಸ್ವಲ್ಪವಾದರೂ ಇರುವುದಿಲ್ಲ; ಏಕೆಂದರೆ ಅವರು ನಿರ್ಗುಣವಾದ ಬ್ರಹ್ಮವೇ ಆಗಿರುತ್ತಾರೆ.

ಉಪಾಧಿತಾದಾತ್ಮ್ಯವಿಹೀನಕೇವಲ-
    ಬ್ರಹ್ಮಾತ್ಮನೈವಾತ್ಮನಿ ತಿಷ್ಠತೋ ಮುನೇಃ .
ಪ್ರಾರಬ್ಧಸದ್ಭಾವಕಥಾ ನ ಯುಕ್ತಾ
    ಸ್ವಪ್ನಾರ್ಥಸಂಬಂಧಕಥೇವ ಜಾಗ್ರತಃ .. 454..

ನಿದ್ದೆಯಿಂದ ಎದ್ದವನಿಗೆ ಸ್ವಪ್ನದಲ್ಲಿ ಕಂಡ ವಿಷಯಗಳ ಜೊತೆ ಹೇಗೆ ಸಂಬಂಧವಿರುವದಿಲ್ಲವೋ, ಹಾಗೇ ಉಪಾಧಿಗಳೊಂದಿಗೆ ಸಂಬಂಧ ತ್ಯಜಿಸಿ, ಕೇವಲ ಬ್ರಹ್ಮಭಾವದಿಂದಲೇ ಇರುತ್ತಿರುವ ಮುನಿಗೆ, ಪ್ರಾರಬ್ಧ ಕರ್ಮದೊಂದಿಗೆ ಸಂಬಂಧವಿರುವದಿಲ್ಲ.

ನ ಹಿ ಪ್ರಬುದ್ಧಃ ಪ್ರತಿಭಾಸದೇಹೇ
    ದೇಹೋಪಯೋಗಿನ್ಯಪಿ ಚ ಪ್ರಪಂಚೇ .
ಕರೋತ್ಯಹಂತಾಂ ಮಮತಾಮಿದಂತಾಂ
    ಕಿಂತು ಸ್ವಯಂ ತಿಷ್ಠತಿ ಜಾಗರೇಣ .. 455..

ಸ್ವಪ್ನದಿಂದ ಎಚ್ಚೆತ್ತಿರುವ ಮನುಷ್ಯನು ಸ್ವಪ್ನದಲ್ಲಿ ಕಂಡ ದೇಹದ ಅಥವಾ ಇತರ ವಸ್ತುಗಳ  ಬಗ್ಗೆ ಅದು ತಾನು, ತನ್ನದು ಎಂಬ ಮೋಹ, ಮಮತೆಗಳನ್ನು ಇಟ್ಟುಕೊಳ್ಳುವದಿಲ್ಲ. ಆದರೆ ತಾನು ಜಾಗೃತನಾಗಿರುತ್ತಾನೆ.

ನ ತಸ್ಯ ಮಿಥ್ಯಾರ್ಥಸಮರ್ಥನೇಚ್ಛಾ
    ನ ಸಂಗ್ರಹಸ್ತಜ್ಜಗತೋಽಪಿ ದೃಷ್ಟಃ .
ತತ್ರಾನುವೃತ್ತಿರ್ಯದಿ ಚೇನ್ಮೃಷಾರ್ಥೇ
    ನ ನಿದ್ರಯಾ ಮುಕ್ತ ಇತೀಷ್ಯತೇ ಧ್ರುವಂ .. 456..

ಅವನಿಗೆ (ಕನಸ್ಸಿನಲ್ಲಿ ಕಂಡ) ಮಿಥ್ಯೆಗಳನ್ನು ಸಮರ್ಥಿಸುವ ಇಚ್ಛೆ ಇರುವದಿಲ್ಲ. ಅಲ್ಲಿ ಕಂಡ ವಸ್ತುಗಳನ್ನು ಸಂಗ್ರಹಿಸುವದೂ ಇಲ್ಲ. ಅವನೇನಾದರೂ ಆ ವಿಷಯಗಳಲ್ಲಿ ಆಸಕ್ತಿ ತೋರಿಸದರೆ, ಅವನು ನಿದ್ರೆಯಿಂದ ಎಚ್ಚೆತ್ತಿಲ್ಲ ಎಂದೇ ಅರ್ಥ.

ತದ್ವತ್ಪರೇ ಬ್ರಹ್ಮಣಿ ವರ್ತಮಾನಃ
    ಸದಾತ್ಮನಾ ತಿಷ್ಠತಿ ನಾನ್ಯದೀಕ್ಷತೇ .
ಸ್ಮೃತಿರ್ಯಥಾ ಸ್ವಪ್ನವಿಲೋಕಿತಾರ್ಥೇ
    ತಥಾ ವಿದಃ ಪ್ರಾಶನಮೋಚನಾದೌ .. 457..

ಹಾಗೆಯೇ ಬ್ರಹ್ಮನಲ್ಲಿ ಲೀನವಾದ ಮನಸ್ಸುಳ್ಳವನು  ಬ್ರಹ್ಮಭಾವದಿಂದಲೇ ಇರುತ್ತಾನೆ. ಸ್ವಪ್ನದಲ್ಲಿ ನಡೆಯುವ ವಿಷಯದಂತೆ, ಅವನಿಗೆ ಊಟನಿದ್ದೆ ಇತ್ಯಾದಿಗಳು ತನ್ನಷ್ಟಕ್ಕೆ ಆಗುತ್ತಲಿರುತ್ತವೆ.

ಕರ್ಮಣಾ ನಿರ್ಮಿತೋ ದೇಹಃ ಪ್ರಾರಬ್ಧಂ ತಸ್ಯ ಕಲ್ಪ್ಯತಾಂ .
ನಾನಾದೇರಾತ್ಮನೋ ಯುಕ್ತಂ ನೈವಾತ್ಮಾ ಕರ್ಮನಿರ್ಮಿತಃ .. 458..

ದೇಹವು ಕರ್ಮದಿಂದ ನಿರ್ಮಿತವಾಗಿದೆ; ಅದಕ್ಕೆ ಪ್ರಾರಬ್ಧ ನಂಟನ್ನು ಕಲ್ಪಿಸಬಹುದು. ಆದರೆ ಅನಾದಿಯಾದ ಆತ್ಮನಿಗೆ ಕರ್ಮದ ನಂಟನ್ನು  ಕಲ್ಪಿಸುವುದು ಯುಕ್ತವಲ್ಲ; (ಏಕೆಂದರೆ) ಆತ್ಮನು ಪೂರ್ವ ಕರ್ಮದಿಂದ ನಿರ್ಮಿತನೇ ಆಗಿಲ್ಲ.

ಅಜೋ ನಿತ್ಯಃ ಶಾಶ್ವತ ಇತಿ ಬ್ರೂತೇ ಶ್ರುತಿರಮೋಘವಾಕ್ .
ತದಾತ್ಮನಾ ತಿಷ್ಠತೋಽಸ್ಯ ಕುತಃ ಪ್ರಾರಬ್ಧಕಲ್ಪನಾ .. 459..

ಆತ್ಮನು ನಿತ್ಯನು, ಅಜನು (ಜನ್ಮರಹಿತನು), ಶಾಶ್ವತನು ಎಂದು ಸತ್ಯವಚನವನ್ನು ಹೇಳುವ ಶೃತಿಗಳು ಹೇಳುತ್ತವೆ. ಇಂತಹ ಆತ್ಮದಲ್ಲಿ ಸ್ಥಿತನಾದ ಯೋಗಿಗೆ ಪ್ರಾರಬ್ಧ ಕರ್ಮದ ಕಲ್ಪನೆ ಎಲ್ಲಿಂದ ತಾನೇ  ಬರುತ್ತದೆ?

ಪ್ರಾರಬ್ಧಂ ಸಿಧ್ಯತಿ ತದಾ ಯದಾ ದೇಹಾತ್ಮನಾ ಸ್ಥಿತಿಃ .
ದೇಹಾತ್ಮಭಾವೋ ನೈವೇಷ್ಟಃ ಪ್ರಾರಬ್ಧಂ ತ್ಯಜ್ಯತಾಮತಃ .. 460..

ದೇಹವೇ ತಾನು ಎಂದು ತಿಳಿದಿರುವವರೆಗೆ ಪ್ರಾರಬ್ಧವು ಇರುವದು. ಆದರೆ (ಸ್ಥಿ ತಪ್ರಜ್ಞನಿಗೆ) ದೇಹಾತ್ಮಭಾವವಿರುವುದೆಂದು ಯಾರೂ ಒಪ್ಪಿಕೊಳ್ಳುವುದಿಲ್ಲ. ಆದುದರಿಂದ  ಅಂತವನಲ್ಲಿ ಪ್ರಾರಬ್ಧ ಇರುವದು ಎಂಬ ಮಾತನ್ನು ಬಿಡಬೇಕು.

Comments

Popular posts from this blog

ವಿವೇಕ ಚೂಡಾಮಣಿ - 21 - 40

ವಿವೇಕ ಚೂಡಾಮಣಿ 1-20

ವಿವೇಕ ಚೂಡಾಮಣಿ - 41-60