ಯೋ ವಾ ಪುರೇ ಸೋಽಹಮಿತಿ ಪ್ರತೀತೋ
ಬುದ್ಧ್ಯಾ ಪ್ರಕ್ಲೃ ಪ್ತಸ್ತಮಸಾಽತಿಮೂಢಯಾ .
ತಸ್ಯೈವ ನಿಃಶೇಷತಯಾ ವಿನಾಶೇ
ಬ್ರಹ್ಮಾತ್ಮಭಾವಃ ಪ್ರತಿಬಂಧಶೂನ್ಯಃ .. 301..
ಈ ಶರೀರದಲ್ಲಿ ಯಾವುದು "ನಾನೇ ಅವನು" ಎಂದು ಹೇಳುವದೋ, ಮತ್ತು ಯಾವುದು ಅಜ್ಞಾನದಿಂದ ಹಾಗೂ ಅತಿ ಮೂಢವಾದ ಬುದ್ಧಿಯಿಂದ ಕಲ್ಪಿತವಾಗಿದೆಯೊ, ಆ ಅಹಂಕಾರವನ್ನೇ ಸಂಪೂರ್ಣವಾಗಿ ನಾಶಮಾಡಿದಾಗ, ಪ್ರತಿಬಂಧರಹಿತವಾದ ಬ್ರಹ್ಮಾತ್ಮಭಾವವು ಉಂಟಾಗುತ್ತದೆ.ಬ್ರಹ್ಮಾನಂದನಿಧಿರ್ಮಹಾಬಲವತಾಽಹಂಕಾರಘೋರಾಹಿನಾ
ಸಂವೇಷ್ಟ್ಯಾತ್ಮನಿ ರಕ್ಷ್ಯತೇ ಗುಣಮಯೈಶ್ಚಂಡೇಸ್ತ್ರಿಭಿರ್ಮಸ್ತಕೈಃ
ವಿಜ್ಞಾನಾಖ್ಯಮಹಾಸಿನಾ ಶ್ರುತಿಮತಾ ವಿಚ್ಛಿದ್ಯ ಶೀರ್ಷತ್ರಯಂ
ನಿರ್ಮೂಲ್ಯಾಹಿಮಿಮಂ ನಿಧಿಂ ಸುಖಕರಂ ಧೀರೋಽನುಭೋಕ್ತುಂಕ್ಷಮಃ .. 302..
ಬ್ರಹ್ಮಾನಂದವೆಂಬ ನಿಧಿಯನ್ನು,ಮಹಾ ಬಲವುಳ್ಳ ಅಹಂಕಾರವೆಂಬ ಘೋರಸರ್ಪವು ಸತ್ತ್ವ-ರಜ ತಮೋಗುಣಗಳೆಂಬ, ರೋಷಗೊಂಡಿರುವ ಮೂರು ಹೆಡೆಗಳಿಂದ ಸುತ್ತಿಕೊಂಡು, ತನ್ನೊಳಗೆ ರಕ್ಷಿಸಿಕೊಂಡಿರುತ್ತದೆ. ಬ್ರಹ್ಮಜ್ಞಾನವೆಂಬ ಥಳ-ಥಳನೇ ಹೊಳೆಯುತ್ತಿರುವ ದೊಡ್ಡ ಕತ್ತಿಯಿಂದ, ಆ ಮೂರು ಹೆಡೆಗಳನ್ನೂ ಕತ್ತರಿಸಿ, ಈ ಸರ್ಪವನ್ನು ನಾಶಮಾಡುವ ಧೀಮಂತನೇ ಆನಂದಕರವಾದ ಈ ಬ್ರಹ್ಮಾನಂದ ನಿಧಿಯನ್ನು ಅನುಭವಿಸಲು ಶಕ್ತನಾಗುತ್ತಾನೆ.
ಯಾವದ್ವಾ ಯತ್ಕಿಂಚಿದ್ವಿಷದೋಷಸ್ಫೂರ್ತಿರಸ್ತಿ ಚೇದ್ದೇಹೇ .
ಕಥಮಾರೋಗ್ಯಾಯ ಭವೇತ್ತದ್ವದಹಂತಾಪಿ ಯೋಗಿನೋ ಮುಕ್ತ್ಯೈ .. 303..
ಎಲ್ಲಿಯ ವರೆಗೆ ಶರೀರದಲ್ಲಿ ಸ್ವಲ್ಪವಾದರೂ ವಿಷದೋಷವಿರುವದೋ, ಅಲ್ಲಿಯವರೆಗೆ ಆರೋಗ್ಯವು ಹೇಗೆ ತಾನೇ ಲಭಿಸೀತು?ಹಾಗೆಯೇ ಅಹಂಕಾರವಿರುವ ವರೆಗೂ ಯೋಗಿಗೆ ಮುಕ್ತಿಯು (ಹೇಗೆ ತಾನೇ ದೊರಕೀತು?)ಅಹಮೋಽತ್ಯಂತನಿವೃತ್ತ್ಯಾ ತತ್ಕೃತನಾನಾವಿಕಲ್ಪಸಂಹೃತ್ಯಾ .
ಪ್ರತ್ಯಕ್ತತ್ತ್ವವಿವೇಕಾದಿದಮಹಮಸ್ಮೀತಿ ವಿಂದತೇ ತತ್ತ್ವಂ .. 304..
ಅಹಂಕಾರದ ಪೂರ್ತಿ ನಾಶದಿಂದ, ಅದರಿಂದಾಗುವ ನಾನಾ ವಿಕಲ್ಪಗಳ ಸಂಹಾರದಿಂದ, ಪ್ರತ್ಯಕ್ ತತ್ವದ ವಿವೇಚನೆಯಿಂದ 'ನಾನೇ ಅವನು' ಎಂಬ ತತ್ವ ಗೋಚರವಾಗುತ್ತದೆ.
ಅಹಂಕಾರೇ ಕರ್ತರ್ಯಹಮಿತಿ ಮತಿಂ ಮುಂಚ ಸಹಸಾ
ವಿಕಾರಾತ್ಮನ್ಯಾತ್ಮಪ್ರತಿಫಲಜುಷಿ ಸ್ವಸ್ಥಿತಿಮುಷಿ .
ಯದಧ್ಯಾಸಾತ್ಪ್ರಾಪ್ತಾ ಜನಿಮೃತಿಜರಾದುಃಖಬಹುಲಾ
ಪ್ರತೀಚಶ್ಚಿನ್ಮೂರ್ತೇಸ್ತವ ಸುಖತನೋಃ ಸಂಸೃತಿರಿಯಂ .. 305..
ಆತ್ಮಸ್ವರೂಪವನ್ನು ಮರೆಮಾಡುವ, ಆತ್ಮಪತಿಬಿಂಬವನ್ನು ಹೊಂದಿರುವ, ವಿಕಾರರೂಪಿಯೂ, ಕರ್ತೃವೂ ಆದ ಅಹಂಕಾರವೇ "ನಾನು" ಎಂಬ ಬುದ್ದಿಯನ್ನು ಕೂಡಲೇ ಬಿಡು. ಈ ಅಹಂಕಾರದ ಅಧ್ಯಾಸದಿಂದಲೇ ಚಿನ್ಮೂರ್ತಿಯೂ, ಆನಂದಘನನೂ, ಪ್ರತ್ಯಗಾತ್ಮನೂ ಆದ ನಿನಗೆ ಹುಟ್ಟು ಸಾವು ಮುಪ್ಪು ದುಃಖ ತುಂಬಿರುವ ಈ ಸಂಸಾರವು ಉಂಟಾಗಿರುತ್ತದೆ.
ಸದೈಕರೂಪಸ್ಯ ಚಿದಾತ್ಮನೋ ವಿಭೋ-
ರಾನಂದಮೂರ್ತೇರನವದ್ಯಕೀರ್ತೇಃ .
ನೈವಾನ್ಯಥಾ ಕ್ವಾಪ್ಯವಿಕಾರಿಣಸ್ತೇ
ವಿನಾಹಮಧ್ಯಾಸಮಮುಷ್ಯ ಸಂಸೃತಿಃ .. 306..
ನಿತ್ಯವೂ, ಏಕಸ್ತರೂಪನೂ, ಜ್ಞಾನಸ್ವರೂಪನೂ ಸರ್ವವ್ಯಾಪಕನೂ, ಆನಂದನಿಗ್ರಹನೂ, ನಿಷ್ಕಲಂಕ ಕೀರ್ತಿಯುಳ್ಳವನೂ, ನಿರ್ವಿಕಾರನೂ ಆದ ನಿನಗೆ ಆ ಈ ಅಹಂಕಾರದ ಅಧ್ಯಾಸವೊಂದನ್ನು ಬಿಟ್ಟರೆ ಬೇರೆಲ್ಲೂ ಸಂಸಾರಬಂಧನವೇ ಇಲ್ಲ.
ತಸ್ಮಾದಹಂಕಾರಮಿಮಂ ಸ್ವಶತ್ರುಂ
ಭೋಕ್ತುರ್ಗಲೇ ಕಂಟಕವತ್ಪ್ರತೀತಂ .
ವಿಚ್ಛಿದ್ಯ ವಿಜ್ಞಾನಮಹಾಸಿನಾ ಸ್ಫುಟಂ
ಭುಂಕ್ಷ್ವಾತ್ಮಸಾಮ್ರಾಜ್ಯಸುಖಂ ಯಥೇಷ್ಟಂ .. 307..
ಆದುದರಿಂದ ಊಟಮಾಡುವವನ ಗಂಟಲಿನಲ್ಲಿ ಮುಳ್ಳಿನಂತಿರುವ ಈ ಅಹಂಕಾರವೆಂಬ ನಿನ್ನ ಶತ್ರುವನ್ನು ಜ್ಞಾನವೆಂಬ ದೊಡ್ಡ ಖಡ್ಗದಿಂದ ಕತ್ತರಿಸಿ, ಆತ್ಮಸಾಮ್ರಾಜ್ಯದ ಸುಖವನ್ನು ಯಥೇಚ್ಛವಾಗಿ ಅನುಭವಿಸು.
ತತೋಽಹಮಾದೇರ್ವಿನಿವರ್ತ್ಯ ವೃತ್ತಿಂ
ಸಂತ್ಯಕ್ತರಾಗಃ ಪರಮಾರ್ಥಲಾಭಾತ್ .
ತೂಷ್ಣೀಂ ಸಮಾಸ್ಸ್ವಾತ್ಮಸುಖಾನುಭೂತ್ಯಾ
ಪೂರ್ಣಾತ್ಮನಾ ಬ್ರಹ್ಮಣಿ ನಿರ್ವಿಕಲ್ಪಃ .. 308..
ಅನಂತರ ಅಹಂಕಾರವೇ ಮೊದಲಾದುವುಗಳ ವೃತ್ತಿಯನ್ನು ತೊಲಗಿಸಿಕೊಂಡು, ಪರಮಾರ್ಥಪ್ರಾಪ್ತಿಯಿಂದ ಅಭಿಲಾಷೆಯಿಲ್ಲದವನಾಗಿ, ಆತ್ಮಸುಖಾನುಭವದಿಂದ ವಿಕಲ್ಪರಹಿತನಾಗಿ, ಪರಿಪೂರ್ಣಸ್ವ ರೂಪದಿಂದ ಬ್ರಹ್ಮನಲ್ಲಿಯೇ ಶಾಂತಿಯಿಂದ ಇರು.
ಸಮೂಲಕೃತ್ತೋಽಪಿ ಮಹಾನಹಂ ಪುನಃ
ವ್ಯುಲ್ಲೇಖಿತಃ ಸ್ಯಾದ್ಯದಿ ಚೇತಸಾ ಕ್ಷಣಂ .
ಸಂಜೀವ್ಯ ವಿಕ್ಷೇಪಶತಂ ಕರೋತಿ
ನಭಸ್ವತಾ ಪ್ರಾವೃಷಿ ವಾರಿದೋ ಯಥಾ .. 309..
ಈ ಬಲವತ್ತಾದ ಅಹಂಕಾರವು ಬೇರು ಸಹಿತ ಕಿತ್ತುಹಾಕಿದರೂ, ಒಂದು ಕ್ಷಣ ಕೂಡ ಮನಸ್ಸಿನಲ್ಲಿ ನೆನಪಿಸಿಕೊಂಡರೆ ಪುನಃ ಚೇತರಿಸಿಕೊಂಡು, ಮಳೆಗಾಲದಲ್ಲಿ ಚದುರಿದ ಮೋಡದಂತೆ ನೂರಾರು ವಿಕ್ಷೇಪಗಳನ್ನು ಮಾಡುತ್ತದೆ.
ನಿಗೃಹ್ಯ ಶತ್ರೋರಹಮೋಽವಕಾಶಃ
ಕ್ವಚಿನ್ನ ದೇಯೋ ವಿಷಯಾನುಚಿಂತಯಾ .
ಸ ಏವ ಸಂಜೀವನಹೇತುರಸ್ಯ
ಪ್ರಕ್ಷೀಣಜಂಬೀರತರೋರಿವಾಂಬು .. 310..
ಅಹಂಕಾರವನ್ನು ನಿಗ್ರಹಿಸಿದ ಮೇಲೂ ಸಹ, ಈ ಶತ್ರುವಿಗೆ ವಿಷಯ ವಾಸನೆಗಳ ನೆನಪಿನ ಸ್ವಲ್ಪ ಅವಕಾಶವನ್ನು ಸಹ ಕೊಡಬಾರದು. (ಹಾಗೇನಾದರೂ ಕೊಟ್ಟರೆ) ಒಣಗಿ ಹೋಗುತ್ತಿರುವ ನಿಂಬೆ ಗಿಡಕ್ಕೆ ನೀರೆರದಂತೆ, ಅದನ್ನು (ಅಹಂಕಾರವನ್ನು) ಚಿಗುರಿಸಲು ಕಾರಣವಾಗುತ್ತದೆ.
ದೇಹಾತ್ಮನಾ ಸಂಸ್ಥಿತ ಏವ ಕಾಮೀ
ವಿಲಕ್ಷಣಃ ಕಾಮಯಿತಾ ಕಥಂ ಸ್ಯಾತ್ .
ಅತೋಽರ್ಥಸಂಧಾನಪರತ್ವಮೇವ
ಭೇದಪ್ರಸಕ್ತ್ಯಾ ಭವಬಂಧಹೇತುಃ .. 311..
ದೇಹವೇ ತಾನೆಂದು ನಂಬಿರುವವನು ಕಾಮಿ. ತಾನು ದೇಹವಲ್ಲ ಎನ್ನುವವನು ಕಾಮಿ ಹೇಗೆ ಆದಾನು? ಅದಕ್ಕಾಗಿ ವಿಷಯಗಳ ಚಿಂತನೆಯಲ್ಲಿ ಮಾಡುವದರಿಂದಲೇ ಭೇದ(ಆತ್ಮ ಪರಮಾತ್ಮಗಳ)ವುಂಟಾಗಿ ಭವಬಂಧನಕ್ಕೆ ಕಾರಣವಾಗುತ್ತದೆ.
ಕಾರ್ಯಪ್ರವರ್ಧನಾದ್ಬೀಜಪ್ರವೃದ್ಧಿಃ ಪರಿದೃಶ್ಯತೇ .
ಕಾರ್ಯನಾಶಾದ್ಬೀಜನಾಶಸ್ತಸ್ಮಾತ್ಕಾರ್ಯಂ ನಿರೋಧಯೇತ್ .. 312..
ಕರ್ಮಗಳನ್ನು ಹೆಚ್ಚಿಸಿದಾಗ ವಿಷಯ ವಾಸನೆಯ ಬೀಜವೂ ಬೆಳೆಯುತ್ತದೆ. ಕರ್ಮಗಳನ್ನು ನಾಶ ಮಾಡಿದಾಗ, ಆ ಬೀಜ ಕೂಡ ನಾಶವಾಗುತ್ತದೆ. (ಅದಕ್ಕಾಗಿ) ಕಾರ್ಯವನ್ನು ತಡೆಯಬೇಕು.
ವಾಸನಾವೃದ್ಧಿತಃ ಕಾರ್ಯಂ ಕಾರ್ಯವೃದ್ಧ್ಯಾ ಚ ವಾಸನಾ .
ವರ್ಧತೇ ಸರ್ವಥಾ ಪುಂಸಃ ಸಂಸಾರೋ ನ ನಿವರ್ತತೇ .. 313..
ವಿಷಯ ವಾಸನೆಯ ವೃದ್ಧಿಯಾದರೆ ಕರ್ಮವು ವೃದ್ಧಿಯಾಗುವದು. ಕರ್ಮ ವೃದ್ಧಿಯಾದರೆ ವಿಷಯ ವಾಸನೆಯು ವೃದ್ಧಿಯಾಗುವದು. ಹೀಗೆ ಪರಸ್ಪರ ವೃದ್ಧಿಯಾಗುತ್ತ ಮನುಷ್ಯನಿಗೆ ಸಂಸಾರದ ಭವ ಬಂಧನ ಹೋಗುವದೇ ಇಲ್ಲ.
ಸಂಸಾರಬಂಧವಿಚ್ಛಿತ್ತ್ಯೈ ತದ್ ದ್ವಯಂ ಪ್ರದಹೇದ್ಯತಿಃ .
ವಾಸನಾವೃದ್ಧಿರೇತಾಭ್ಯಾಂ ಚಿಂತಯಾ ಕ್ರಿಯಯಾ ಬಹಿಃ .. 314..
ಸಂಸಾರ ಬಂಧನ ನಾಶಕ್ಕಾಗಿ ಪ್ರಯತ್ನಿಸುವವನು ಇವೆರಡನ್ನು(ವಿಷಯ ಚಿಂತನೆಯನ್ನು ಮತ್ತು ಕರ್ಮವನ್ನು) ನಾಶಗೊಳಿಸಬೇಕು. ಯಾಕೆಂದರೆ ವಿಷಯಚಿಂತನೆಯಿಂದ ಹಾಗೂ ಬಾಹ್ಯ ಕರ್ಮದಿಂದ ವಾಸನೆಯು ವೃದ್ಧಿಯಾಗುತ್ತದೆ.
ತಾಭ್ಯಾಂ ಪ್ರವರ್ಧಮಾನಾ ಸಾ ಸೂತೇ ಸಂಸೃತಿಮಾತ್ಮನಃ .
ತ್ರಯಾಣಾಂ ಚ ಕ್ಷಯೋಪಾಯಃ ಸರ್ವಾವಸ್ಥಾಸು ಸರ್ವದಾ .. 315..
ಸರ್ವತ್ರ ಸರ್ವತಃ ಸರ್ವಬ್ರಹ್ಮಮಾತ್ರಾವಲೋಕನೈಃ . ಮಾತ್ರಾವಲೋಕನಂ
ಸದ್ಭಾವವಾಸನಾದಾರ್ಢ್ಯಾತ್ತತ್ತ್ರಯಂ ಲಯಮಶ್ನುತೇ .. 316..
ಅವೆರಡರಿಂದ ವಾಸನೆಯು (ಅಹಂಕಾರ ವಾಸನೆ, ಮಮಕಾರ ವಾಸನೆ) ಪ್ರವರ್ಧಿಸಿ, ಆತ್ಮನಿಗೆ ಸಂಸಾರಬಂಧನವುಂಟಾಗುತ್ತದೆ. ಈ ಮೂರನ್ನು(ವಿಷಯ ಚಿಂತನೆ, ಕರ್ಮ, ವಾಸನೆ ) ನಾಶಮಾಡಬೇಕಾದರೆ, ಸರ್ವಾವಸ್ಥೆಗಳಲ್ಲಿಯೂ, ಸರ್ವಕಾಲಗಳಲ್ಲಿಯೂ, ಸರ್ವತ್ರ ,ಸರ್ವಪ್ರಕಾರಗಳಿಂದಲೂ, ಸರ್ವವೂ ಬ್ರಹ್ಮವಸ್ತುವೊಂದೇ ಎಂಬ ನಂಬಿಕೆಯೇ ತಕ್ಕ ಉಪಾಯ. ಬ್ರಹ್ಮ ಭಾವನೆಯ ಸಂಸ್ಕಾರವು ದೃಢವಾದಾಗ ಈ ಮೂರೂ ನಾಶವಾಗುತ್ತವೆ.
ಕ್ರಿಯಾನಾಶೇ ಭವೇಚ್ಚಿಂತಾನಾಶೋಽಸ್ಮಾದ್ವಾಸನಾಕ್ಷಯಃ .
ವಾಸನಾಪ್ರಕ್ಷಯೋ ಮೋಕ್ಷಃ ಸಾ ಜೀವನ್ಮುಕ್ತಿರಿಷ್ಯತೇ .. 317..
ಕರ್ಮವು ನಾಶವಾದಾಗ ವಿಷಯಚಿಂತನೆಯು ನಾಶವಾಗುತ್ತದೆ. ಇದರಿಂದ ವಾಸನೆಯು ನಾಶವಾಗುತ್ತದೆ. ವಾಸನೆಯು ನಾಶವಾಗುವುದೇ ಮೋಕ್ಷವು. ಅದೇ ಜೀವನ್ಮುಕ್ತಿಯು ಎಂದು ಹೇಳಲ್ಪಟ್ಟಿದೆ.
ಸದ್ವಾಸನಾಸ್ಫೂರ್ತಿವಿಜೃಂಭಣೇ ಸತಿ
ಹ್ಯಸೌ ವಿಲೀನಾಪ್ಯಹಮಾದಿವಾಸನಾ .
ಅತಿಪ್ರಕೃಷ್ಟಾಪ್ಯರುಣಪ್ರಭಾಯಾಂ
ವಿಲೀಯತೇ ಸಾಧು ಯಥಾ ತಮಿಸ್ರಾ .. 318..
ಅಂಧಕಾರವು ಎಷ್ಟೇ ಗಾಢವಾಗಿದ್ದರೂ ಸೂರ್ಯೋದಯವಾದಾಗ, ಸೂರ್ಯನ ಬೆಳಕಿನಲ್ಲಿ ಅದು ನಾಶವಾಗುವಂತೆ, ಸದ್ಬಹ್ಮವಾಸನೆಯ ಪ್ರಕಾಶದಿಂದ, ಅಹಂಕಾರ ಇತ್ಯಾದಿ ವಾಸನೆಯು ನಾಶವಾಗುತ್ತದೆ.
ತಮಸ್ತಮಃಕಾರ್ಯಮನರ್ಥಜಾಲಂ
ನ ದೃಶ್ಯತೇ ಸತ್ಯುದಿತೇ ದಿನೇಶೇ .
ತಥಾಽದ್ವಯಾನಂದರಸಾನುಭೂತೌ
ನೈವಾಸ್ತಿ ಬಂಧೋ ನ ಚ ದುಃಖಗಂಧಃ .. 319..
ಸೂರ್ಯನು ಉದಯಿಸಿದರೆ ಕತ್ತಲೆಯಾಗಲಿ ಅದರಿಂದಾಗುವ ಅನರ್ಥಗಳ ಸಮೂಹವಾಗಲಿ ಹೇಗೆ ಕಂಡುಬರುವುದಿಲ್ಲವೊ ಹಾಗೆಯೇ ಅದ್ವಯ ಬ್ರಹ್ಮಾನಂದ ರಸದ ಅನುಭವವಾಗುತ್ತಿರುವಾಗ ಬಂಧವೂ ಇರುವುದಿಲ್ಲ, ದುಃಖದ ಗಂಧವೂ ಇರುವುದಿಲ್ಲ.
ದೃಶ್ಯಂ ಪ್ರತೀತಂ ಪ್ರವಿಲಾಪಯನ್ಸನ್
ಸನ್ಮಾತ್ರಮಾನಂದಘನಂ ವಿಭಾವಯನ್ .
ಸಮಾಹಿತಃ ಸನ್ಬಹಿರಂತರಂ ವಾ
ಕಾಲಂ ನಯೇಥಾಃ ಸತಿ ಕರ್ಮಬಂಧೇ .. 320..
ಕರ್ಮಬಂಧವು ಇನ್ನೂ ಇದ್ದರೆ, ಕಾಣುತ್ತಿರುವ ದೃಶ್ಯಜಗತ್ತನ್ನು ಲಯಮಾಡಿಕೊಂಡು, ಸನ್ಮಾತ್ರವೂ,ಆನಂದಘನವೂ ಆದ ಬ್ರಹ್ಮವನ್ನೇ ಧ್ಯಾನಿಸುತ್ತ, ಒಳಗಿನ ಮತ್ತು ಹೊರಗಿನ ಪ್ರಪಂಚಗಳಲ್ಲಿ ಸಮಾಹಿತನಾಗಿ, ಕಾಲವನ್ನು ಕಳೆ.
ಪ್ರಮಾದೋ ಬ್ರಹ್ಮನಿಷ್ಠಾಯಾಂ ನ ಕರ್ತವ್ಯಃ ಕದಾಚನ .
ಪ್ರಮಾದೋ ಮೃತ್ಯುರಿತ್ಯಾಹ ಭಗವಾನ್ಬ್ರಹ್ಮಣಃ ಸುತಃ .. 321..
ಬ್ರಹ್ಮನಿಷ್ಠೆಯಲ್ಲಿ ಎಂದಿಗೂ ಎಚ್ಚರತಪ್ಪಕೂಡದು. "ಪ್ರಮಾದವೇ ಮೃತ್ಯು " ಎಂದು ಬ್ರಹ್ಮಸುತನಾದ ಸನತ್ಕುಮಾರನು ಹೇಳುತ್ತಾನೆ.
ನ ಪ್ರಮಾದಾದನರ್ಥೋಽನ್ಯೋ ಜ್ಞಾನಿನಃ ಸ್ವಸ್ವರೂಪತಃ .
ತತೋ ಮೋಹಸ್ತತೋಽಹಂಧೀಸ್ತತೋ ಬಂಧಸ್ತತೋ ವ್ಯಥಾ .. 322..
ಜ್ಞಾನಿಯಾದವನಿಗೆ ತನ್ನ ಸ್ವರೂಪದಲ್ಲಿ ಎಚ್ಚರಿಕೆ ತಪ್ಪುವುದಕ್ಕಿಂತ ಬೇರೆ ಕೇಡಿಲ್ಲ. ಅದರಿಂದಲೇ ಮೋಹವೂ, ಅದರಿಂದಲೇ ಅಹಂಕಾರವೂ, ಅದರಿಂದಲೇ ಬಂಧವೂ ಅದರಿಂದಲೇ ವ್ಯಥೆಯೂ ಉಂಬಾಗುವುವು.
ವಿಷಯಾಭಿಮುಖಂ ದೃಷ್ಟ್ವಾ ವಿದ್ವಾಂಸಮಪಿ ವಿಸ್ಮೃತಿಃ .
ವಿಕ್ಷೇಪಯತಿ ಧೀದೋಷೈರ್ಯೋಷಾ ಜಾರಮಿವ ಪ್ರಿಯಂ .. 323..
ವಿಷಯಾಭಿಲಾಷಿಯು ವಿದ್ವಾಂಸನಾಗಿದ್ದರೂ, ಆತ್ಮನಿಸ್ಮೃತಿಯೆಂಬ ಪ್ರಮಾದವು, ಬುದ್ದಿಯ ದೋಷಗಳಿಂದ ಜಾರನಾದ ಪ್ರಿಯನನ್ನು ಕ್ಲೇಶಪಡಿಸುವ ಹೆಂಗಸಿನಂತೆ ಅವನನ್ನು ಕ್ಲೇಶಗೊಳಿಸುತ್ತದೆ.
ಯಥಾಪಕೃಷ್ಟಂ ಶೈವಾಲಂ ಕ್ಷಣಮಾತ್ರಂ ನ ತಿಷ್ಠತಿ .
ಆವೃಣೋತಿ ತಥಾ ಮಾಯಾ ಪ್ರಾಜ್ಞಂ ವಾಪಿ ಪರಾಙ್ಮುಖಂ .. 324..
ಸರಿಸಲ್ಪಟ್ಟ ಪಾಚಿಯು, ಕ್ಷಣ ಮಾತ್ರವೂ ನಿಲ್ಲದೇ ಹೇಗೆ ನೀರನ್ನು ಮುಚ್ಚಿ ಕೊಳ್ಳುತ್ತ ದೆಯೊ ಹಾಗೆಯೇ ಆತ್ಮ ನಿಷ್ಟೆಯಿಂದ ವಿಮುಖನಾದವನು, ಪ್ರಾಜ್ಞನಾಗಿದ್ದರೂ ಅವನನ್ನು ಮಾಯೆಯು ಮುಚ್ಚಿಕೊಳ್ಳುತ್ತದೆ.
ಲಕ್ಷ್ಯಚ್ಯುತಂ ಚೇದ್ಯದಿ ಚಿತ್ತಮೀಷದ್
ಬಹಿರ್ಮುಖಂ ಸನ್ನಿಪತೇತ್ತತಸ್ತತಃ .
ಪ್ರಮಾದತಃ ಪ್ರಚ್ಯುತಕೇಲಿಕಂದುಕಃ
ಸೋಪಾನಪಂಕ್ತೌ ಪತಿತೋ ಯಥಾ ತಥಾ .. 325..
ಪ್ರಮಾದವಶದಿಂದ, ಮೆಟ್ಟಿಲುಗಳ ಸಾಲಿನ ಮೇಲೆ ಜಾರಿದ ಆಟದ ಚೆಂಡು ಹೇಗೆ ಮತ್ತೂ ಮತ್ತೂ ಕೆಳಕ್ಕೆ ಹೋಗುವುದೋ, ಹಾಗೆಯೇ ಆತ್ಮನೆಂಬ ಗುರಿಯಿಂದ ಜಾರಿದ ಚಿತ್ತವು ಬಹಿರ್ಮುಖವಾಗಿ ಕೆಳಕ್ಕೆ ಬಿದ್ದು ಓಡುತ್ತದೆ.
Comments