ವಿವೇಕ ಚೂಡಾಮಣಿ - 226 - 250
ಸದಿದಂ ಪರಮಾದ್ವೈತಂ ಸ್ವಸ್ಮಾದನ್ಯಸ್ಯ ವಸ್ತುನೋಽಭಾವಾತ್ .
ನ ಹ್ಯನ್ಯದಸ್ತಿ ಕಿಂಚಿತ್ ಸಮ್ಯಕ್ ಪರಮಾರ್ಥತತ್ತ್ವಬೋಧದಶಾಯಾಂ .. 226..
ಈ ಪರಮ ಆತ್ಮ ಮಾತ್ರ ಸತ್ಯ, ಯಾಕೆಂದರೆ ಇದರ ಹೊರತಾಗಿ ಬೇರೇನೂ ಇಲ್ಲ. ಈ ಪರಮಾರ್ಥ ತತ್ವವನ್ನು ತಿಳಿದಾಗ, ಇನ್ನೇನೂ ಇರುವದಿಲ್ಲ.
ಯದಿದಂ ಸಕಲಂ ವಿಶ್ವಂ ನಾನಾರೂಪಂ ಪ್ರತೀತಮಜ್ಞಾನಾತ್ .
ತತ್ಸರ್ವಂ ಬ್ರಹ್ಮೈವ ಪ್ರತ್ಯಸ್ತಾಶೇಷಭಾವನಾದೋಷಂ .. 227..
ನಮ್ಮ ಅಜ್ಞಾನದಿಂದ ನಾನಾರೂಪದಲ್ಲಿ ಕಂಡುಬರುವ ಈ ವಿಶ್ವವೆಲ್ಲವೂ , ನಮ್ಮ ಸೀಮಿತ ಯೋಚನಾಶಕ್ತಿಯನ್ನು ಮೀರಿದ ಬ್ರಹ್ಮನೇ ಹೊರತು ಬೇರೇನೂ ಅಲ್ಲ.
ಮೃತ್ಕಾರ್ಯಭೂತೋಽಪಿ ಮೃದೋ ನ ಭಿನ್ನಃ
ಕುಂಭೋಽಸ್ತಿ ಸರ್ವತ್ರ ತು ಮೃತ್ಸ್ವರೂಪಾತ್ .
ನ ಕುಂಭರೂಪಂ ಪೃಥಗಸ್ತಿ ಕುಂಭಃ
ಕುತೋ ಮೃಷಾ ಕಲ್ಪಿತನಾಮಮಾತ್ರಃ .. 228..
ಮಡಿಕೆಯು ಮಣ್ಣಿನ ಇನ್ನೊಂದು ರೂಪವಾದರೂ ಮಣ್ಣಿಗಿಂತ ಭಿನ್ನವಾಗಿರುವದಿಲ್ಲ. ಎಲ್ಲ ಕಡೆ ಮಡಿಕೆ ಮೂಲತಃ ಮಣ್ಣಿನ ರೂಪವೇ ಆಗಿರುತ್ತದೆ. ಹೀಗಿರುವಾಗ ಮಡಿಕೆ ಎಲ್ಲಿಂದ ಬಂತು? ಕೇವಲ ಕಲ್ಪಿತವಾದ ಹೆಸರು ಮಾತ್ರವೇ?
ಕೇನಾಪಿ ಮೃದ್ಭಿನ್ನತಯಾ ಸ್ವರೂಪಂ
ಘಟಸ್ಯ ಸಂದರ್ಶಯಿತುಂ ನ ಶಕ್ಯತೇ .
ಅತೋ ಘಟಃ ಕಲ್ಪಿತ ಏವ ಮೋಹಾ-
ನ್ಮೃದೇವ ಸತ್ಯಂ ಪರಮಾರ್ಥಭೂತಂ .. 229..
ಮಡಿಕೆಯ ಸಾರ ಮಣ್ಣ ಅಲ್ಲ ಎಂದು ಯಾರಿಂದಲೂ ನಿರೂಪಿಸಲು ಸಾಧ್ಯವೇ? ಹಾಗಾಗಿ ಮಡಿಕೆಯೆಂಬುದು ಕಲ್ಪಿತ ಭ್ರಮೆ, ಮಣ್ಣೆಂಬುದೇ ನಿಜವಾದ ಸತ್ಯ.
ಸದ್ಬ್ರಹ್ಮಕಾರ್ಯಂ ಸಕಲಂ ಸದೇವಂ
ತನ್ಮಾತ್ರಮೇತನ್ನ ತತೋಽನ್ಯದಸ್ತಿ .
ಅಸ್ತೀತಿ ಯೋ ವಕ್ತಿ ನ ತಸ್ಯ ಮೋಹೋ
ವಿನಿರ್ಗತೋ ನಿದ್ರಿತವತ್ಪ್ರಜಲ್ಪಃ .. 230..
ಹಾಗೆಯೇ ಸಮಸ್ತ ವಿಶ್ವವು ಬ್ರಹ್ಮನ ಪರಿಣಾಮವಾಗಿದೆ. ನಿಜವಾಗಿ ಈ ವಿಶ್ವವು ಬ್ರಹ್ಮನೇ ಆಗಿದೆ. ಅದಕ್ಕಿಂತ ಬೇರೆ ವಸ್ತು ಇಲ್ಲ. ಬೇರೆ ವಸ್ತು ಇದೆ ಎನ್ನುವವನು, ಭ್ರಮೆಯಲ್ಲಿರುತ್ತಾನೆ ಹಾಗೂ ನಿದ್ದೆಯಲ್ಲಿದ್ದಂತೆ ಕನವರಿಸುತ್ತಾನೆ.
ಬ್ರಹ್ಮೈವೇದಂ ವಿಶ್ವಮಿತ್ಯೇವ ವಾಣೀ
ಶ್ರೌತೀ ಬ್ರೂತೇಽಥರ್ವನಿಷ್ಠಾ ವರಿಷ್ಠಾ .
ತಸ್ಮಾದೇತದ್ಬ್ರಹ್ಮಮಾತ್ರಂ ಹಿ ವಿಶ್ವಂ
ನಾಧಿಷ್ಠಾನಾದ್ಭಿನ್ನತಾಽಽರೋಪಿತಸ್ಯ .. 231..
ಈ ವಿಶ್ವವೂ ಬ್ರಹ್ಮನೇ ಎಂದು ಅಥರ್ವ ವೇದದಲ್ಲೂ ಹೇಳಲಾಗಿದೆ. ಅದಕ್ಕಾಗಿ ಈ ವಿಶ್ವ ಬ್ರಹ್ಮನಲ್ಲದೇ ಬೇರಲ್ಲ, ಯಾಕೆಂದರೆ ಅಧ್ಯಾರೋಪಿತ ವಸ್ತುವಿಗೆ ಅದರ ಮೂಲವನ್ನು ಬಿಟ್ಟು ಬೇರೆ ಅಸ್ತಿತ್ವ ಇರುವದಿಲ್ಲ.
ಸತ್ಯಂ ಯದಿ ಸ್ಯಾಜ್ಜಗದೇತದಾತ್ಮನೋಽ
ನಂತತ್ತ್ವಹಾನಿರ್ನಿಗಮಾಪ್ರಮಾಣತಾ .
ಅಸತ್ಯವಾದಿತ್ವಮಪೀಶಿತುಃ ಸ್ಯಾ-
ನ್ನೈತತ್ತ್ರಯಂ ಸಾಧು ಹಿತಂ ಮಹಾತ್ಮನಾಂ .. 232..
ಈ ಜಗತ್ತು ಸತ್ಯವಾದರೆ ಆತ್ಮನ ಅನಂತತ್ವಕ್ಕೆ ಹಾನಿಯುಂಟಾಗುತ್ತದೆ. ವೇದ-ಶಾಸ್ತ್ರವು ಸಿಂಧುತ್ವವನ್ನು ಕಳೆದುಕೊಳ್ಳುತ್ತದೆ. ಈಶ್ವರನು ಅಸತ್ಯವನ್ನು ಹೇಳಿದಂತಾಗುತ್ತದೆ. ಈ ಮೂರೂ (ನಂಬಿಕೆಯೂ) ಮಹಾತ್ಮರಿಗೆ ಸರಿಯೂ ಅಲ್ಲ, ಹಿತವೂ ಅಲ್ಲ.
232. If the universe, as it is, be real, there would be no cessation of the dualistic
element, the scriptures would be falsified, and the Lord Himself would be guilty of an
untruth. None of these three is considered either desirable or wholesome by the noble-
minded.
ವಸ್ತುತತ್ವವನ್ನು ಅರಿತಿರುವ ಈಶ್ವರನು 'ನಾನು ಇವುಗಳಲ್ಲಿ ಇಲ್ಲ. ನನ್ನಲ್ಲಿ ಜೀವಿಗಳು ಇರುವದಿಲ್ಲ' ಎಂದು ಹೇಳಿದ್ದಾನೆ.
"But I am not in them" ... "nor are the beings in Me".
ಯದಿ ಸತ್ಯಂ ಭವೇದ್ವಿಶ್ವಂ ಸುಷುಪ್ತಾವುಪಲಭ್ಯತಾಂ .
ಯನ್ನೋಪಲಭ್ಯತೇ ಕಿಂಚಿದತೋಽಸತ್ಸ್ವಪ್ನವನ್ಮೃಷಾ .. 234..
ಈ ವಿಶ್ವವು ಸತ್ಯವಾಗಿದ್ದಲ್ಲಿ, ಅದು ಸುಷುಪ್ತಿ(ಗಾಢ ನಿದ್ದೆಯಲ್ಲೂ)ಯಲ್ಲೂ ಗೋಚರಿಸಬೇಕು. ಗೋಚರಿಸದಿದ್ದಲ್ಲಿ ಅದು ಸ್ವಪ್ನದಲ್ಲಿ ಕಂಡ ಸಂಗತಿಯಂತೆ, ಅಸತ್ಯ ಮತ್ತು ಅವಾಸ್ತವ.
234. If the universe be true, let it then be perceived in the state of deep sleep also. As it is not at all perceived, it must be unreal and false, like dreams.
ಅತಃ ಪೃಥಙ್ನಾಸ್ತಿ ಜಗತ್ಪರಾತ್ಮನಃ
ಪೃಥಕ್ಪ್ರತೀತಿಸ್ತು ಮೃಷಾ ಗುಣಾದಿವತ್ .
ಆರೋಪಿತಸ್ಯಾಸ್ತಿ ಕಿಮರ್ಥವತ್ತಾಽ-
ಧಿಷ್ಠಾನಮಾಭಾತಿ ತಥಾ ಭ್ರಮೇಣ .. 235..
ಹಾಗಾಗಿ, ಪರಮಾತ್ಮನ ಹೊರತು ಈ ಜಗತ್ತು ಬೇರೆ ಇಲ್ಲ. ಅದರ ಬೇರೆತನ ಮಿಥ್ಯಾ ಗುಣಗಳಂತೆ (ಆಕಾಶದ ನೀಲಿ ಬಣ್ಣದಂತೆ) ಸುಳ್ಳು. ಆರೋಪತ ವಸ್ತುವಿಗೆ ಬೇರೆ ಅರ್ಥವೆಲ್ಲಿದೆ. ಅದು ಭ್ರಮೆಯಿಂದ ಅಧಿಷ್ಟಾನದಂತೆ ಗೋಚರಿಸುತ್ತದೆ.
ಭ್ರಾಂತಸ್ಯ ಯದ್ಯದ್ಭ್ರಮತಃ ಪ್ರತೀತಂ
ಬ್ರಹ್ಮೈವ ತತ್ತದ್ರಜತಂ ಹಿ ಶುಕ್ತಿಃ .
ಇದಂತಯಾ ಬ್ರಹ್ಮ ಸದೈವ ರೂಪ್ಯತೇ
ತ್ವಾರೋಪಿತಂ ಬ್ರಹ್ಮಣಿ ನಾಮಮಾತ್ರಂ .. 236..
ಭ್ರಮೆಯಿಂದ ಚಿಪ್ಪು ಬೆಳ್ಳಿಯಂತೆ ಕಾಣುವಂತೆ ಭ್ರಾಂತಿಗೊಂಡವನಿಗೆ ಭ್ರಮೆಯಿಂದ ಕಾಣುವದೆಲ್ಲವೂ ನಿಜವಾಗಿ ನೋಡಿದರೆ, ಬ್ರಹ್ಮನೇ ಆಗಿರುತ್ತದೆ. . ಈ ವಿಶ್ವವು ಯಾವಾಗಲೂ ಬ್ರಹ್ಮನೇ, ಅದರಿಂದ ಆರೋಪತವಾಗಿದ್ದೆಲ್ಲ ಸುಮ್ಮನೆ ಹೆಸರು ಮಾತ್ರ.
ಅತಃ ಪರಂ ಬ್ರಹ್ಮ ಸದದ್ವಿತೀಯಂ
ವಿಶುದ್ಧವಿಜ್ಞಾನಘನಂ ನಿರಂಜನಂ .
ಪ್ರಶಾಂತಮಾದ್ಯಂತವಿಹೀನಮಕ್ರಿಯಂ
ನಿರಂತರಾನಂದರಸಸ್ವರೂಪಂ .. 237..
ನಿರಸ್ತಮಾಯಾಕೃತಸರ್ವಭೇದಂ
ನಿತ್ಯಂ ಸುಖಂ ನಿಷ್ಕಲಮಪ್ರಮೇಯಂ . ನಿತ್ಯಂ ಧ್ರುವಂ
ಅರೂಪಮವ್ಯಕ್ತಮನಾಖ್ಯಮವ್ಯಯಂ
ಜ್ಯೋತಿಃ ಸ್ವಯಂ ಕಿಂಚಿದಿದಂ ಚಕಾಸ್ತಿ .. 238..
ಆದುದರಿಂದ ಪರಬ್ರಹ್ಮವು ಸದ್ವಸ್ತುವಾದದ್ದು, ಅದ್ವಿತೀಯವಾದದ್ದು, ವಿಶುದ್ಧವಾದ ವಿಜ್ಞಾನ ಘನವಾದದ್ದು, ನಿರಂಜನವಾದದ್ದು, ಪ್ರಶಾಂತವೂ ಆದದ್ದು, ಆದ್ಯ೦ತರಹಿತವೂ ಕ್ರಿಯಾಶೂನ್ಯವೂ ಆದದ್ದು, ಆನಂದರಸದ ಸ್ವ ರೂಪವಾದದ್ದು, ಮಾಯಾಕೃ ತವಾದ
ಭೇದಗಳೂ ಇಲ್ಲದ್ದು, ನಿತ್ಯವೂ ಸುಖಸಂತೋಷವೂ ಆದದ್ದು , ಅವಯವಗಳಿಲ್ಲದ್ದು, ಪ್ರಮಾಣಾತೀತವಾದದ್ದು, ರೂಪವಿಲ್ಲದ್ದು, ಅವ್ಯಕ್ತವಾದದ್ದು, ನಾಶರಹಿತವಾದದ್ದು, ಸ್ವಯಂಜ್ಯೋತಿಯಂತೆ ಪ್ರಕಾಶಿಸುತ್ತಿರುವುದು.
ಜ್ಞಾತೃಜ್ಞೇಯಜ್ಞಾನಶೂನ್ಯಮನಂತಂ ನಿರ್ವಿಕಲ್ಪಕಂ .
ಕೇವಲಾಖಂಡಚಿನ್ಮಾತ್ರಂ ಪರಂ ತತ್ತ್ವಂ ವಿದುರ್ಬುಧಾಃ .. 239..
ಬುದ್ಧಿವಂತರು ಜ್ಞಾತ, ಜ್ಞೇಯ, ಜ್ಞಾನಗಳ ಭೇದವಿರದ, ಅನಂತ, ನಿರ್ವಿಕಲ್ಪ, ಅಖಂಡ, ಚಿತ್ ಮಾತ್ರವಾದ ಪರಮ ತತ್ವವನ್ನು (ಆತ್ಮನನ್ನು) ತಿಳಿದಿರುತ್ತಾರೆ.
ಬಿಡಲೂ ಆಗದ, ಹಿಡಿಯಲೂ ಆಗದ, ಮಾತು-ಮನಸ್ಸುಗಳಿಗೆ ಗೋಚರಿಸದ, ಅಳೆಯಲಾಗದ, ಆದಿ-ಅಂತ್ಯವಿರದ, ಆತ್ಮನೇ ಬ್ರಹ್ಮಪೂರ್ಣವಾದ ಮಹಾ ಆತ್ಮನು.
ತತ್ತ್ವಂಪದಾಭ್ಯಾಮಭಿಧೀಯಮಾನಯೋಃ
ಬ್ರಹ್ಮಾತ್ಮನೋಃ ಶೋಧಿತಯೋರ್ಯದೀತ್ಥಂ .
ಶ್ರುತ್ಯಾ ತಯೋಸ್ತತ್ತ್ವಮಸೀತಿ ಸಮ್ಯಗ್
ಏಕತ್ವಮೇವ ಪ್ರತಿಪಾದ್ಯತೇ ಮುಹುಃ .. 241-
ಏಕ್ಯಂ ತಯೋರ್ಲಕ್ಷಿತಯೋರ್ನ ವಾಚ್ಯಯೋಃ
ನಿಗದ್ಯತೇಽನ್ಯೋನ್ಯವಿರುದ್ಧಧರ್ಮಿಣೋಃ .
ಖದ್ಯೋತಭಾನ್ವೋರಿವ ರಾಜಭೃತ್ಯಯೋಃ
ಕೂಪಾಂಬುರಾಶ್ಯೋಃ ಪರಮಾಣುಮೇರ್ವೋಃ .. 242..
ಶ್ರುತುಗಳಲ್ಲಿ 'ತತ್ವಮಸಿ' ಎಂಬ ಮಾತಿಂದ ಬ್ರಹ್ಮ ಮತ್ತು ಜೀವ - ತತ್ ಮತ್ತು ತ್ವಂ, ಇವೆರಡೂ ಬೇರೆಯಲ್ಲ ಎಂದು ಪುನಃ ಪುನಃ ಹೇಳಲಾಗಿದೆ. ಅವೆರಡೂ ಒಂದು ಎಂಬುದನ್ನು ಶಬ್ದಶಃ ಅರ್ಥೈಸಿಕೊಳ್ಳಬಾರದು - ಸೂರ್ಯ ಮತ್ತು ಮಿಂಚುಹುಳ, ರಾಜ ಮತ್ತು ಸೇವಕ, ಸಾಗರ ಮತ್ತು ಬಾವಿ, ಮೇರು ಪರ್ವತ ಮತ್ತು ಪರಮಾಣುಗಳಂತೆ, ಪರಸ್ಪರ ವಿರುದ್ಧವಾಗಿ ಕಂಡು ಬಂದರೂ ಮೂಲ ತತ್ವ ಒಂದೇ ಇರುತ್ತದೆ.
ತಯೋರ್ವಿರೋಧೋಽಯಮುಪಾಧಿಕಲ್ಪಿತೋ
ನ ವಾಸ್ತವಃ ಕಶ್ಚಿದುಪಾಧಿರೇಷಃ .
ಈಶಸ್ಯ ಮಾಯಾ ಮಹದಾದಿಕಾರಣಂ
ಜೀವಸ್ಯ ಕಾರ್ಯಂ ಶೃಣು ಪಂಚಕೋಶಂ .. 243..
ಜೀವ ಮತ್ತು ಪರಮಾತ್ಮರ ಈ ವೈರುದ್ಧ್ಯವು ಉಪಾಧಿಯಿಂದ ಕಲ್ಪಿತವಾಗಿದೆ. ಈಶ್ವರನ ಉಪಾಧಿ ಮಾಯೆ. ಇದು ಮಹತ್ತು ಇತ್ಯಾದಿಗಳ ಕಾರಣವಾಗಿದೆ. ಜೀವದ ಉಪಾಧಿ ಪಂಚಕೋಶಗಳಾಗಿವೆ - ಇವೂ ಸಹ ಮಾಯೆಯಿಂದ ಕಲ್ಪತವಾಗಿವೆ.
ಏತಾವುಪಾಧೀ ಪರಜೀವಯೋಸ್ತಯೋಃ
ಸಮ್ಯಙ್ನಿರಾಸೇ ನ ಪರೋ ನ ಜೀವಃ .
ರಾಜ್ಯಂ ನರೇಂದ್ರಸ್ಯ ಭಟಸ್ಯ ಖೇಟಕ್-
ಸ್ತಯೋರಪೋಹೇ ನ ಭಟೋ ನ ರಾಜಾ .. 244..
ಇವೆರಡೂ ಈಶ್ವರ ಮತ್ತು ಜೀವಗಳ ಉಪಾಧಿಗಳಾಗಿವೆ. ಇವನ್ನು ಸಂಪೂರ್ಣ ನಾಶ ಮಾಡಿದಾಗ ಜೀವ, ಈಶ್ವರ ಎರಡೂ ಇರುವದಿಲ್ಲ. ರಾಜನ ಚಿಹ್ನೆ ರಾಜ್ಯ, ಸೈನಿಕನ ಚಿಹ್ನೆ ಗುರಾಣಿ. ಇವೆರಡನ್ನೂ ತ್ಯಾಗ ಮಾಡಿದಾಗ ರಾಜನೂ ಇರುವದಿಲ್ಲ, ಭಟನೂ ಇರುವದಿಲ್ಲ.
ಅಥಾತ ಆದೇಶ ಇತಿ ಶ್ರುತಿಃ ಸ್ವಯಂ
ನಿಷೇಧತಿ ಬ್ರಹ್ಮಣಿ ಕಲ್ಪಿತಂ ದ್ವಯಂ .
ಶ್ರುತಿಪ್ರಮಾಣಾನುಗೃಹೀತಬೋಧಾ-
ತ್ತಯೋರ್ನಿರಾಸಃ ಕರಣೀಯ ಏವ .. 245..
ವೇದಗಳೇ ಸ್ವಯಂ ಹೇಳಿವೆ "ಈಗ ಇದು ಆದೇಶ" ಮತ್ತು ಈ ಹೇಳಿಕೆಯಿಂದ ಬ್ರಹ್ಮನ ದ್ವೈತವನ್ನು ನಿಷೇಧಿಸಿವೆ. ಹಾಗಾಗಿ ವೇದಗಳಿಂದ ಪಡೆದ ಜ್ಞಾನದ ಸಹಾಯದಿಂದ ಈ ಉಪಾಧಿಗಳನ್ನು ತಿರಸ್ಕರಿಸತಕ್ಕದ್ದು.
ನೇದಂ ನೇದಂ ಕಲ್ಪಿತತ್ವಾನ್ನ ಸತ್ಯಂ
ರಜ್ಜುದೃಷ್ಟವ್ಯಾಲವತ್ಸ್ವಪ್ನವಚ್ಚ .
ಇತ್ಥಂ ದೃಶ್ಯಂ ಸಾಧುಯುಕ್ತ್ಯಾ ವ್ಯಪೋಹ್ಯ
ಜ್ಞೇಯಃ ಪಶ್ಚಾದೇಕಭಾವಸ್ತಯೋರ್ಯಃ .. 246..
(ಆತ್ಮನು) ಈ (ಮಾಯೆಯೂ) ಅಲ್ಲ, ಈ (ಪಂಚಕೋಶವೂ) ಅಲ್ಲ. (ಇವೆರಡೂ) ಹಗ್ಗ ದಲ್ಲಿ ಕಂಡುಬರುವ ಹಾವಿನಂತೆ, ಕನಸಿನಂತೆ, ಕಲ್ಪಿತವಾಗಿರುವುದರಿಂದ, ಸತ್ಯವಲ್ಲ. ದೃಶ್ಯವಾದ ಜಗತ್ತನ್ನು ಯುಕ್ತಿಯಿಂದ ನಿರಾಕರಿಸಿ, ಆ ಜೀವ ಪರಮಾತ್ಮರ ಐಕ್ಯವನ್ನು ತಿಳಿದುಕೊಳ್ಳಬೇಕು.
ತತಸ್ತು ತೌ ಲಕ್ಷಣಯಾ ಸುಲಕ್ಷ್ಯೌ
ತಯೋರಖಂಡೈಕರಸತ್ವಸಿದ್ಧಯೇ .
ನಾಲಂ ಜಹತ್ಯಾ ನ ತಥಾಽಜಹತ್ಯಾ
ಕಿಂತೂಭಯಾರ್ಥಾತ್ಮಿಕಯೈವ ಭಾವ್ಯಂ .. 247..
ಆದ್ದರಿಂದ ಈಶ್ವರ ಮತ್ತು ಜೀವ ಈ ಎರಡು ಶಬ್ದಗಳ ಐಕ್ಯತೆಯನ್ನು ನಿರೂಪಿಸುವದಕ್ಕಾಗಿ, ಅವುಗಳ ಗೂಢಾರ್ಥವನ್ನು ಚೆನ್ನಾಗಿ ಪರಿಗಣಿಸಬೇಕು. ಪೂರ್ತಿ ತಿರಸ್ಕಾರವೂ ಅಲ್ಲ, ಪೂರ್ತಿ ಸ್ವೀಕಾರವೂ ಅಲ್ಲ. ಇವೆರಡನ್ನೂ ಸೇರಿಸಬೇಕು.
ಸ ದೇವದತ್ತೋಽಯಮಿತೀಹ ಚೈಕತಾ
ವಿರುದ್ಧಧರ್ಮಾಂಶಮಪಾಸ್ಯ ಕಥ್ಯತೇ .
ಯಥಾ ತಥಾ ತತ್ತ್ವಮಸೀತಿವಾಕ್ಯೇ
ವಿರುದ್ಧಧರ್ಮಾನುಭಯತ್ರ ಹಿತ್ವಾ .. 248..
ಸಂಲಕ್ಷ್ಯ ಚಿನ್ಮಾತ್ರತಯಾ ಸದಾತ್ಮನೋಃ
ಅಖಂಡಭಾವಃ ಪರಿಚೀಯತೇ ಬುಧೈಃ .
ಏವಂ ಮಹಾವಾಕ್ಯಶತೇನ ಕಥ್ಯತೇ
ಬ್ರಹ್ಮಾತ್ಮನೋರೈಕ್ಯಮಖಂಡಭಾವಃ .. 249..
"ಆ ದೇವದತ್ತನು ಇವನೇ" ಎಂಬ ವಾಕ್ಯದಲ್ಲಿ ವಿರುದ್ದ ಧರ್ಮಗಳ ಭಾಗವವನ್ನು ಬಿಟ್ಟು ಐಕ್ಯವನ್ನು ಹೇಗೆ ಸಾಧಿಸುತ್ತಾರೆಯೊ
ಹಾಗೆಯೇ "ಅದೇ ನೀನಾಗಿರುವೆ" ಎಂಬ ವಾಕ್ಯದಲ್ಲಿ ಜ್ಞಾನಿಗಳು ಎರಡು ಕಡೆಯಲ್ಲಿಯೂ ವಿರುದ್ಧ ಭಾಗಗಳನ್ನು ಬಿಟ್ಟು ("ಜೀವ -ಈಶ್ವರ" ಇವರ ಸ್ವರೂಪವಾದ) , ಕೇವಲ ಚಿದ್ರೂಪವನ್ನು ಗುರುತಿಸಿ, ಅವರ ಅಖಂಡಭಾವವನ್ನು ಗ್ರಹಿಸುತ್ತಾರೆ. ಹೀಗೆ ನೂರಾರು ಉಪನಿಷದ್ ವಾಕ್ಯಗಳು ಜೀವ ಪರಮಾತ್ಮ ರ ಐಕ್ಕವನ್ನೂ ಅಖಂಡಭಾವವನ್ನೂ ಹೇಳುತ್ತವೆ.
ಅಸ್ಥೂಲಮಿತ್ಯೇತದಸನ್ನಿರಸ್ಯ
ಸಿದ್ಧಂ ಸ್ವತೋ ವ್ಯೋಮವದಪ್ರತರ್ಕ್ಯಂ .
ಅತೋ ಮೃಷಾಮಾತ್ರಮಿದಂ ಪ್ರತೀತಂ
ಜಹೀಹಿ ಯತ್ಸ್ವಾತ್ಮತಯಾ ಗೃಹೀತಂ .
ಬ್ರಹ್ಮಾಹಮಿತ್ಯೇವ ವಿಶುದ್ಧಬುದ್ಧ್ಯಾ
ವಿದ್ಧಿ ಸ್ವಮಾತ್ಮಾನಮಖಂಡಬೋಧಂ .. 250..
"ಸ್ಥೂ ಲವಾದುದಲ್ಲ'" ಎಂದು ಈ ಅನಾತ್ಮನನ್ನು ತಿರಸ್ಕರಿಸಿ, ಸ್ವತಃಸಿದ್ಧವಾಗಿರುವ, ಆಕಾಶದಂತೆ ಅಸಂಗನಾದ, ಊಹೆಗೆ ಮೀರಿದ (ಆತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಬೇಕು). ಆದುದರಿಂದ ತೋರಿಕೆಯ, ಮಿಥ್ಯಾಸ್ವರೂಪವಾದ, ಆತ್ಮಭಾವದಿಂದ ಗ್ರಹಿಸಲ್ಪಟ್ಟರುವ, ಈ ಶರೀರವನ್ನು ತೊರೆ. "ನಾನು ಬ್ರಹ್ಮ” ಎಂದೇ ಶುದ್ಧ ಬುದ್ದಿಯಿಂದ,ಅಖಂಡಜ್ಞಾನ ಸ್ವರೂಪನಾದ ನಿನ್ನ ಆತ್ಮನನ್ನು ತಿಳಿದುಕೊ.
Comments