ವಿವೇಕ ಚೂಡಾಮಣಿ - 202-225

ವಿನಿವೃತ್ತಿರ್ಭವೇತ್ತಸ್ಯ ಸಮ್ಯಗ್ಜ್ಞಾನೇನ ನಾನ್ಯಥಾ .
ಬ್ರಹ್ಮಾತ್ಮೈಕತ್ವವಿಜ್ಞಾನಂ ಸಮ್ಯಗ್ಜ್ಞಾನಂ ಶ್ರುತೇರ್ಮತಂ .. 202..

ಸಂಪೂರ್ಣ (ಸಮ್ಯಕ್) ಜ್ಞಾನದಿಂದ (ಪಡೆಯುವದರಿಂದ) ಅದರ (ಉಪಾಧಿಯ) ಕೊನೆಗೊಳ್ಳುವಿಕೆ ಉಂಟಾಗುತ್ತದೆಯೇ ವಿನಃ ಇನ್ಯಾವ ರೀತಿಯಲ್ಲೂ ಅಲ್ಲ. ಆತ್ಮ ಮತ್ತು ಪರಮಾತ್ಮರ ಐಕ್ಯತೆಯ ಜ್ಞಾನವೇ ಸಮ್ಯಕ್ ಜ್ಞಾನ ಎಂದು ವೇದಗಳು (ಶೃತಿಗಳು) ಹೇಳುತ್ತವೆ.

202. The cessation of that superimposition takes place through perfect knowledge, and by no other means. Perfect knowledge, according to the Śrutis, consists in the realisation of the identity of the individual soul and Brahman.

ತದಾತ್ಮಾನಾತ್ಮನೋಃ ಸಮ್ಯಗ್ವಿವೇಕೇನೈವ ಸಿಧ್ಯತಿ .
ತತೋ ವಿವೇಕಃ ಕರ್ತವ್ಯಃ ಪ್ರತ್ಯಗಾತ್ಮಸದಾತ್ಮನೋಃ .. 203..

ಈ ಸಮ್ಯಕ್ ಜ್ಞಾನ ಆತ್ಮ, ಅನಾತ್ಮಗಳ ವಿವೇಚನೆಯಿಂದ ದೊರಕುತ್ತದೆ. ಅದಕ್ಕಾಗಿ ಆತ್ಮ ಮತ್ತು ಸದಾತ್ಮ ಇವುಗಳ ವಿವೇಚನೆಯನ್ನು ಮಾಡಬೇಕು. 

203. This realisation is attained by a perfect discrimination between the Self and the non-Self. Therefore one must strive for the discrimination between the individual soul and the eternal Self.

ಜಲಂ ಪಂಕವದತ್ಯಂತಂ ಪಂಕಾಪಾಯೇ ಜಲಂ ಸ್ಫುಟಂ . 
ಯಥಾ ಭಾತಿ ತಥಾತ್ಮಾಪಿ ದೋಷಾಭಾವೇ ಸ್ಫುಟಪ್ರಭಃ .. 204..

ಕಲ್ಮಶವಾದ ನೀರಿನಿಂದ ಕೆಸರನ್ನು ತೆಗೆದಾಗ ನೀರು ಮತ್ತೆ ಸ್ಫುಟವಾಗುವಂತೆ, ಆತ್ಮವೂ ಸಹ ದೋಷವನ್ನು ನಿರ್ಮೂಲ ಮಾಡಿದಾಗ ಸ್ಫುಟವಾಗಿ  ಪ್ರಕಾಶಿಸುತ್ತದೆ. 

204. Just as the water which is very muddy again appears as transparent water when the mud is removed, so the Ātman also manifests Its undimmed luster when the taint has been removed.

ಅಸನ್ನಿವೃತ್ತೌ ತು ಸದಾತ್ಮನಾ ಸ್ಫುಟಂ
    ಪ್ರತೀತಿರೇತಸ್ಯ ಭವೇತ್ಪ್ರತೀಚಃ .
ತತೋ ನಿರಾಸಃ ಕರಣೀಯ ಏವ
    ಸದಾತ್ಮನಃ ಸಾಧ್ವಹಮಾದಿವಸ್ತುನಃ .. 205..

ಅವಾಸ್ತವ (ಅಸತ್ ) ದೂರವಾದಾಗ ಆತ್ಮವು ಸ್ಫುಟವಾಗಿ ವ್ಯಕ್ತವಾಗುತ್ತದೆ. ಆದ್ದರಿಂದ ವ್ಯಕ್ತಿಯು ಆತ್ಮದಿಂದ ಅಹಂಕಾರ ಇತ್ಯಾದಿಗಳನ್ನು ಸಂಪೂರ್ಣವಾಗಿ ದೂರ ಮಾಡುವ  ಪ್ರಯತ್ನ ಮಾಡಬೇಕು.

205. When the unreal ceases to exist, this very individual soul is definitely realised as the eternal Self. Therefore one must make it a point completely to remove things like egoism from the eternal Self. 

ಅತೋ ನಾಯಂ ಪರಾತ್ಮಾ ಸ್ಯಾದ್ವಿಜ್ಞಾನಮಯಶಬ್ದಭಾಕ್ .
   ವಿಕಾರಿತ್ವಾಜ್ಜಡತ್ವಾಚ್ಚ ಪರಿಚ್ಛಿನ್ನತ್ವಹೇತುತಃ .
ದೃಶ್ಯತ್ವಾದ್ವ್ಯಭಿಚಾರಿತ್ವಾನ್ನಾನಿತ್ಯೋ ನಿತ್ಯ ಇಷ್ಯತೇ .. 206..

 ಈ ವಿಜ್ಞಾನಮಯ ಕೋಶ ಪರಾತ್ಮ ಆಗಲು ಸಾಧ್ಯವಿಲ್ಲ. ಕಾರಣಗಳೇನೆಂದರೆ - ಇದು ಬದಲಾಗುತ್ತದೆ, ಜಡವಾಗಿದೆ, ಪರಿಚ್ಚಿನ್ನವಾಗಿದೆ, ಇಂದ್ರಿಯಗಳನ್ನು ಒಳಗೊಂಡಿದೆ, ನಿತ್ಯವಲ್ಲ. ಅನಿತ್ಯವಾದ ಈ ವಸ್ತು ನಿಜವಾದ ಆತ್ಮ ಆಗಲಾರದು.  

206. This knowledge sheath (Vijñānamāyā Kośa) that we have been speaking of, cannot be the Supreme Self for the following reasons – because it is subject to change, is insentient, is a limited thing, an object of the senses, and is not constantly present: An unreal thing cannot indeed be taken for the real Ātman.

ಆನಂದಮಯ ಕೋಶ

ಆನಂದಪ್ರತಿಬಿಂಬಚುಂಬಿತತನುರ್ವೃತ್ತಿಸ್ತಮೋಜೃಂಭಿತಾ
    ಸ್ಯಾದಾನಂದಮಯಃ ಪ್ರಿಯಾದಿಗುಣಕಃ ಸ್ವೇಷ್ಟಾರ್ಥಲಾಭೋದಯಃ .
ಪುಣ್ಯಸ್ಯಾನುಭವೇ ವಿಭಾತಿ ಕೃತಿನಾಮಾನಂದರೂಪಃ ಸ್ವಯಂ
    ಸರ್ವೋ ನಂದತಿ ಯತ್ರ ಸಾಧು ತನುಭೃನ್ಮಾತ್ರಃ ಪ್ರಯತ್ನಂ ವಿನಾ .. 207..

207. The blissful sheath (Ānandamāyā Kośa) is that modification of Nescience which manifests itself catching a reflection of the Ātman which is Bliss Absolute; whose attributes are pleasure and the rest; and which appears in view when some object agreeable to oneself presents itself. It makes itself spontaneously felt by the fortunate during the fruition of their virtuous deeds; from which every corporeal being derives great joy without the least effort. 

ಆನಂದದ ಪ್ರತಿಬಿಂಬದಿಂದ ವ್ಯಾಪ್ತವಾದ, ಅವಿದ್ಯೆಯೆಂಬ ತಮಸ್ಸಿನಿಂದ ಹುಟ್ಟಿದ  ವೃತ್ತಿಯು ಆನಂದಮಯಕೋಶವಾಗಿರುತ್ತದೆ. ಇದರ ಗುಣಗಳು ಸುಖ ಇತ್ಯಾದಿ. ಇದು ಇಷ್ಟಾರ್ಥವು ಕೈಗೂಡಿದಾಗ ಉದಯವಾಗುತ್ತದೆ. ಪುಣ್ಯವಂತರಿಗೆ ಪುಣ್ಯಫಲದ ಅನುಭವವಾದಾಗ ಇದು ತೋರಿಕೊಳ್ಳುತ್ತದೆ; ಈ ಆನಂದಮಯಕೋಶದಲ್ಲಿ ಶರೀರವುಳ್ಳವನು, ಪ್ರಯತ್ನಮಾಡದೆಯೇ ಸ್ವಯಂ ಆನಂದರೂಪನಾಗಿ, ಚೆನ್ನಾಗಿ ಸಂತೋಷಿಸುತ್ತಾನೆ.

ಆನಂದಮಯಕೋಶಸ್ಯ ಸುಷುಪ್ತೌ ಸ್ಫೂರ್ತಿರುತ್ಕಟಾ .
ಸ್ವಪ್ನಜಾಗರಯೋರೀಷದಿಷ್ಟಸಂದರ್ಶನಾದಿನಾ .. 208..

ಆನಂದಮಯಕೋಶವು ಸುಷುಪ್ತಾವಸ್ತೆಯಲ್ಲಿ ಬಹಳ ಚೆನ್ನಾಗಿ ವ್ಯಕ್ತವಾಗುತ್ತದೆ. ಸ್ವಪ್ನಾವಸ್ಥೆಯಲ್ಲಿ ಮತ್ತು ಜಾಗ್ರತಾವಸ್ಥೆಯಲ್ಲಿ ಇಷ್ಟವಸ್ತುಗಳ ದರ್ಶನ ಇಂತಹ ಸಮಯಗಳಲ್ಲಿ ಸ್ವಲ್ಪವಾಗಿ ವ್ಯಕ್ತವಾಗುತ್ತದೆ. 

208. The blissful sheath has its fullest play during profound sleep, while in the dreaming and wakeful states it has only a partial manifestation, occasioned by the sight of agreeable objects and so forth.

ನೈವಾಯಮಾನಂದಮಯಃ ಪರಾತ್ಮಾ
    ಸೋಪಾಧಿಕತ್ವಾತ್ಪ್ರಕೃತೇರ್ವಿಕಾರಾತ್ .
ಕಾರ್ಯತ್ವಹೇತೋಃ ಸುಕೃತಕ್ರಿಯಾಯಾ
    ವಿಕಾರಸಂಘಾತಸಮಾಹಿತತ್ವಾತ್ .. 209..

ಆನಂದಮಯ ಕೋಶವೂ ಆತ್ಮನಲ್ಲ. ಯಾಕೆಂದರೆ, ಅದು ಬದಲಾವಣೆ ಹೊಂದುತ್ತದೆ, ಪ್ರಕೃತಿಯ ಮಾರ್ಪಟ್ಟ ರೂಪವಾಗಿದೆ, ಕರ್ಮಗಳ ಹೇತುವಾಗಿದೆ. ಮತ್ತು ಮಾರ್ಪಾಡಾದ ಇತರ ಕೋಶಗಳಿಂದ ಆವರ್ತವಾಗಿದೆ. 

209. Nor is the blissful sheath the Supreme Self, because it is endowed with the changeful attributes, is a modification of the Prakriti, is the effect of past good deeds, and imbedded in the other sheaths which are modifications.

ಪಂಚಾನಾಮಪಿ ಕೋಶಾನಾಂ ನಿಷೇಧೇ ಯುಕ್ತಿತಃ ಶ್ರುತೇಃ . 
ತನ್ನಿಷೇಧಾವಧಿ ಸಾಕ್ಷೀ ಬೋಧರೂಪೋಽವಶಿಷ್ಯತೇ .. 210..

ಈ ಐದೂ ಕೋಶಗಳನ್ನೂ ಶೃತಿಗಳ ಸಹಾಯದಿಂದ ನಾಶ  ಮಾಡಿದಾಗ ಕಡೆಗೆ ಉಳಿವಯವುದೇ ಸಾಕ್ಷಿ ಹಾಗೂ ಜ್ಞಾನರೂಪವಾದ ಆತ್ಮ.

210. When all the five sheaths have been eliminated by the reasoning on Shruti passages, what remains as the culminating point of the process, is the Witness, the Knowledge Absolute – the Ātman.

ಆತ್ಮ

ಯೋಽಯಮಾತ್ಮಾ ಸ್ವಯಂಜ್ಯೋತಿಃ ಪಂಚಕೋಶವಿಲಕ್ಷಣಃ .
    ಅವಸ್ಥಾತ್ರಯಸಾಕ್ಷೀ ಸನ್ನಿರ್ವಿಕಾರೋ ನಿರಂಜನಃ .
ಸದಾನಂದಃ ಸ ವಿಜ್ಞೇಯಃ ಸ್ವಾತ್ಮತ್ವೇನ ವಿಪಶ್ಚಿತಾ .. 211..

ಈ ಸ್ವಪ್ರಕಾಶನೂ, ಮೊದಲು ಹೇಳಿದ ಪಂಚಕೋಶಗಳಿಗಿಂತ ವಿಭಿನ್ನನೂ, ಮೂರು ಅವಸ್ಥೆಗಳಿಗೆ(ಸ್ವಪ್ನ, ಜಾಗೃತ, ಸುಷುಪ್ತಿ) ಸಾಕ್ಷಿಯೂ, ನಿರ್ವಿಕಾರಿಯೂ, ಶುದ್ಧ-ನಿಷ್ಕಲ್ಮಷನೂ, ಸದಾನಂದನೂ ಆದ ಆತ್ಮವು  ತನ್ನ ಆತ್ಮನೆಂದು ಬುದ್ಧಿವಂತನು ಅರಿತುಕೊಳ್ಳಬೇಕು. 

211. This self-effulgent Ātman which is distinct from the five sheaths, the Witness of the three states, the Real, the Changeless, the Untainted, the everlasting Bliss – is to be realised by the wise man as his own Self.

          ಶಿಷ್ಯ ಉವಾಚ ..
ಮಿಥ್ಯಾತ್ವೇನ ನಿಷಿದ್ಧೇಷು ಕೋಶೇಷ್ವೇತೇಷು ಪಂಚಸು .
    ಸರ್ವಾಭಾವಂ ವಿನಾ ಕಿಂಚಿನ್ನ ಪಶ್ಯಾಮ್ಯತ್ರ ಹೇ ಗುರೋ .
ವಿಜ್ಞೇಯಂ ಕಿಮು ವಸ್ತ್ವಸ್ತಿ ಸ್ವಾತ್ಮನಾಽಽತ್ಮವಿಪಶ್ಚಿತಾ .. 212.. 

ಶಿಷ್ಯನು ಕೇಳಿದನು - ಈ ಪಂಚಕೋಶಗಳನ್ನು ಮಿಥ್ಯೆಯೆಂದು ನಿರ್ಮೂಲನ ಮಾಡಿದ ಮೇಲೆ, ಬರೀ ಶೂನ್ಯದ ಹೊರತು ನನಗೆ ಇನ್ನೇನೂ ಕಾಣುತ್ತಿಲ್ಲ. ವಿವೇಕಿಯಾದವನು ತನ್ನ ಆತ್ಮವೆಂದು ಅರಿಯತಕ್ಕ ವಸ್ತು ಯಾವುದಿದೆ?

212. The disciple questioned: After these five sheaths have been eliminated as unreal, I find nothing, O Master, in this universe but a Void, the absence of everything. What entity is there left forsooth with which the wise knower of the Self should realise his identity.

          ಶ್ರೀಗುರುರುವಾಚ .
ಸತ್ಯಮುಕ್ತಂ ತ್ವಯಾ ವಿದ್ವನ್ನಿಪುಣೋಽಸಿ ವಿಚಾರಣೇ .
    ಅಹಮಾದಿವಿಕಾರಾಸ್ತೇ ತದಭಾವೋಽಯಮಪ್ಯನು .. 213..
ಸರ್ವೇ ಯೇನಾನುಭೂಯಂತೇ ಯಃ ಸ್ವಯಂ ನಾನುಭೂಯತೇ .
    ತಮಾತ್ಮಾನಂ ವೇದಿತಾರಂ ವಿದ್ಧಿ ಬುದ್ಧ್ಯಾ ಸುಸೂಕ್ಷ್ಮಯಾ .. 214..

ಗುರುವು ಉತ್ತರಿಸದನು - ನೀನು ಸತ್ಯವನ್ನೇ ನುಡಿದೆ, ವಿದ್ವಾನನೇ. ವಿವೇಚನೆಯಲ್ಲಿ ನೀನು ನಿಪುಣನಾಗಿರುವೆ. ಅಹಂ ಇತ್ಯಾದಿ ವಿಕಾರಗಳು ಮತ್ತು ಅವುಗಳ ಅಭಾವವನ್ನು ಯಾರು ಅನುಭವಿಸುತ್ತಾನೋ, ಆದರೆ ಯಾವನನ್ನು ಅನುಭವಿಸಲು ಯಾರಿಂದಲೂ ಶಕ್ಯವಾಗುವದಿಲ್ಲವೋ, ಆ ಸರ್ವಸಾಕ್ಷಿ ಆತ್ಮನನ್ನು ಅತಿ ತೀಕ್ಷ್ಣ ಬುದ್ಧಿಯಿಂದ ಅರಿತುಕೋ. 

213-214. The Guru answered: Thou has rightly said, O learned man ! Thou art clever indeed in discrimination. That by which all those modifications such as egoism as well as their subsequent absence (during deep sleep) are perceived, but which Itself is not perceived, know thou that Ātman – the Knower – through the sharpest intellect.

ತತ್ಸಾಕ್ಷಿಕಂ ಭವೇತ್ತತ್ತದ್ಯದ್ಯದ್ಯೇನಾನುಭೂಯತೇ .
ಕಸ್ಯಾಪ್ಯನನುಭೂತಾರ್ಥೇ ಸಾಕ್ಷಿತ್ವಂ ನೋಪಯುಜ್ಯತೇ .. 215..

ಯಾವುದು ಒಂದು ವಸ್ತುವನ್ನು ಅನುಭವಿಸತ್ತದೆಯೋ, ಅದು ಅದರ ಸಾಕ್ಷಿಯಾಗುತ್ತದೆ. ಯಾವುದನ್ನು ಯಾರೂ ಅನುಭವಿಸುವದೇ ಇಲ್ಲವೋ ಅದರ ಸಾಕ್ಷಿಯೇ ಇರುವದಿಲ್ಲ

  215. That which is perceived by something else has for its witness the latter. When there is no agent to perceive a thing, we cannot speak of it as having been perceived at all.

ಅಸೌ ಸ್ವಸಾಕ್ಷಿಕೋ ಭಾವೋ ಯತಃ ಸ್ವೇನಾನುಭೂಯತೇ .
ಅತಃ ಪರಂ ಸ್ವಯಂ ಸಾಕ್ಷಾತ್ಪ್ರತ್ಯಗಾತ್ಮಾ ನ ಚೇತರಃ .. 216..

ಈ ಆತ್ಮನು ತನಗೆ ತಾನೇ ಸಾಕ್ಷಿಯಾಗಿದ್ದಾನೆ. ಯಾಕೆಂದರೆ ಇವನು ತನ್ನನ್ನು ತಾನೆ ಅನುಭವಿಸುತ್ತಾನೆ. ಆದ್ದರಿಂದ ಆತ್ಮನೇ ಸ್ವಯಂ ಪರಮಾತ್ಮನೂ ಆಗಿದ್ದಾನೆ, ಇನ್ಯಾರೂ ಅಲ್ಲ.

216. This Ātman is a self-cognised entity because It is cognised by Itself. Hence the individual soul is itself and directly the Supreme Brahman, and nothing else.

ಜಾಗ್ರತ್ಸ್ವಪ್ನಸುಷುಪ್ತಿಷು ಸ್ಫುಟತರಂ ಯೋಽಸೌ ಸಮುಜ್ಜೃಂಭತೇ
    ಪ್ರತ್ಯಗ್ರೂಪತಯಾ ಸದಾಹಮಹಮಿತ್ಯಂತಃ ಸ್ಫುರನ್ನೈಕಧಾ .
ನಾನಾಕಾರವಿಕಾರಭಾಗಿನ ಇಮಾನ್ ಪಶ್ಯನ್ನಹಂಧೀಮುಖಾನ್  
    ನಿತ್ಯಾನಂದಚಿದಾತ್ಮನಾ ಸ್ಫುರತಿ ತಂ ವಿದ್ಧಿ ಸ್ವಮೇತಂ ಹೃದಿ .. 217..

 ಸ್ವಪ್ನ, ಜಾಗ್ರತೆ ಮತ್ತು ಸುಷುಪ್ತಿ ಈ ಮೂರೂ ಅವಸ್ಥೆಗಳಲ್ಲೂ ಯಾವುದು ವ್ಯಕ್ತನಾಗುವದೋ, ಯಾವುದು ಆಂತರಿಕವಾಗಿ ಭಿನ್ನ ಭಿನ್ನ ರೂಪದಲ್ಲಿ ವ್ಯಕ್ತವಾಗುವದೋ, ಯಾವುದು ಅಹಂಕಾರ, ಬುದ್ಧಿ ಇತ್ಯಾದಿಗಳನ್ನು ನೋಡುವದೋ, ಯಾವುದು ನಿತ್ಯಾನಂದ, ಚಿದಾನಂದ ಸ್ವರೂಪವಾಗಿದೆಯೋ, ಅದೇ ನಿನ್ನ ಹೃದಯದಲ್ಲಿರುವ ಆತ್ಮವೆಂಬುದನ್ನು  ಅರಿತುಕೋ.

217. That which clearly manifests Itself in the states of wakefulness, dream and profound sleep; which is inwardly perceived in the mind in various forms as an unbroken series of egoistic impressions; which witnesses the egoism, the Buddhi, etc., which are of diverse forms and modifications; and which makes Itself felt as the Existence-Knowledge-Bliss Absolute; know thou this Ātman, thy own Self, within thy heart.

ಘಟೋದಕೇ ಬಿಂಬಿತಮರ್ಕಬಿಂಬ-
    ಮಾಲೋಕ್ಯ ಮೂಢೋ ರವಿಮೇವ ಮನ್ಯತೇ .
ತಥಾ ಚಿದಾಭಾಸಮುಪಾಧಿಸಂಸ್ಥಂ
    ಭ್ರಾಂತ್ಯಾಹಮಿತ್ಯೇವ ಜಡೋಽಭಿಮನ್ಯತೇ .. 218..

ಮಡಿಕೆಯಲ್ಲಿರುವ ನೀರಿನಲ್ಲಿ ಸೂರ್ಯನ ಪ್ರತಿಬಿಂಬವನ್ನು ನೋಡಿ ಮೂರ್ಖನು ಅದೇ ಸೂರ್ಯನೆಂದು ತಿಳಿದುಕೊಳ್ಳುತ್ತಾನೆ. ಹಾಗೆಯೇ, ಮೂರ್ಖನು ಭ್ರಮೆಯಿಂದ ಬುದ್ಧಿ ಇತ್ಯಾದಿಗಳಲ್ಲಿ ಪ್ರತಿಬಿಂಬಿಸಿರುವ ಚಿತ್ ಅನ್ನು, ತಾನೇ ಎಂದು ತಿಳಿದುಕೊಳ್ಳುತ್ತಾನೆ.

218. Seeing the reflection of the sun mirrored in the water of a jar, the fool thinks it is the sun itself. Similarly the stupid man, through delusion, identifies himself with the reflection of the Chit caught in the Buddhi, which is Its superimposition.

ಘಟಂ ಜಲಂ ತದ್ಗತಮರ್ಕಬಿಂಬಂ
    ವಿಹಾಯ ಸರ್ವಂ ವಿನಿರೀಕ್ಷ್ಯತೇಽರ್ಕಃ . 
ತಟಸ್ಥ ಏತತ್ತ್ರಿತಯಾವಭಾಸಕಃ 
    ಸ್ವಯಂಪ್ರಕಾಶೋ ವಿದುಷಾ ಯಥಾ ತಥಾ .. 219..

ಬುದ್ಧಿವಂತನು ಮಡಿಕೆ, ನೀರು, ಪ್ರತಿಬಿಂಬ ಈ ಮೂರನ್ನೂ ಬಿಟ್ಟು ಸ್ವಯಂಪ್ರಕಾಶನಾದ ಸೂರ್ಯನನ್ನು ಹೇಗೆ ನೋಡುತ್ತಾನೋ..

219. Just as the wise man leaves aside the jar, the water and the reflection of the sun in it, and sees the self-luminous sun which illumines these three and is independent of them;

ದೇಹಂ ಧಿಯಂ ಚಿತ್ಪ್ರತಿಬಿಂಬಮೇವಂ  
    ವಿಸೃಜ್ಯ ಬುದ್ಧೌ ನಿಹಿತಂ ಗುಹಾಯಾಂ .
ದ್ರಷ್ಟಾರಮಾತ್ಮಾನಮಖಂಡಬೋಧಂ
    ಸರ್ವಪ್ರಕಾಶಂ ಸದಸದ್ವಿಲಕ್ಷಣಂ .. 220..

ನಿತ್ಯಂ ವಿಭುಂ ಸರ್ವಗತಂ ಸುಸೂಕ್ಷ್ಮಂ
    ಅಂತರ್ಬಹಿಃಶೂನ್ಯಮನನ್ಯಮಾತ್ಮನಃ .
ವಿಜ್ಞಾಯ ಸಮ್ಯಙ್ನಿಜರೂಪಮೇತತ್
    ಪುಮಾನ್ ವಿಪಾಪ್ಮಾ ವಿರಜೋ ವಿಮೃತ್ಯುಃ .. 221..

ವಿಶೋಕ ಆನಂದಘನೋ ವಿಪಶ್ಚಿತ್
    ಸ್ವಯಂ ಕುತಶ್ಚಿನ್ನ ಬಿಭೇತಿ ಕಶ್ಚಿತ್ .
ನಾನ್ಯೋಽಸ್ತಿ ಪಂಥಾ ಭವಬಂಧಮುಕ್ತೇಃ
    ವಿನಾ ಸ್ವತತ್ತ್ವಾವಗಮಂ ಮುಮುಕ್ಷೋಃ .. 222..

ಹಾಗೆಯೇ ಶರೀರವನ್ನೂ, ಬುದ್ದಿಯನ್ನೂ, ಚಿತ್ ಪ್ರತಿಬಿಂಬವನ್ನೂ ಬಿಟ್ಟು, ಬುದ್ಧಿಯೆಂಬ ಗುಹೆಯಲ್ಲಿ ನೆಲೆಗೊಂಡಿರುವ ಸರ್ವ ಅಖಂಡ ಜ್ಞಾನಸ್ವರೂಪನೂ, ಸರ್ವಪ್ರಕಾಶನೂ, ಸ್ಥೂಲ-ಸೂಕ್ಷ್ಮಗಳಿಗಿಂತ ಭಿನ್ನನೂ, ನಿತ್ಯನೂ, ಸರ್ವಶಕ್ತನೂ, ಸರ್ವವ್ಯಾಪಿಯೂ,  ಅತ್ಯಂತ ಸೂಕ್ಷನೂ,  ಅಂತಃ ಬಹಿರ್ ಎಂಬುದಿಲ್ಲದವನೂ, ಅನನ್ಯನೂ ಆದ ಈ ನಿಜರೂಪನಾದ ಆತನನ್ನು ಚೆನ್ನಾಗಿ ಅರಿತುಕೊಂಡು, ಮನುಷ್ಯನು ಪಾಪರಹಿತನೂ, ರಜಸ್ಸಿಲ್ಲದವನೂ, ಮೃತ್ಯುರಹಿತನೂ, ಶೋಕ ರಹಿತನೂ, ಆನಂದಘನನೂ ಆದ ಜ್ಞಾನಿಯಾಗಿ, ಯಾವುದಕ್ಕೂ ಹೆದರದೇ ಇರುತ್ತಾನೆ. ಮುಮುಕ್ಷುವಿಗೆ ಆತ್ಮದ ನಿಜಸ್ವರೂಪದ ಅರಿಯುವದನ್ನು  ಬಿಟ್ಟು, ಸಂಸಾರ ಬಂಧನದ ಬಿಡುಗಡೆಗೆ ಬೇರೆ ದಾರಿಯೂ ಇರುವುದಿಲ್ಲ.

220-222. Similarly, discarding the body, the Buddhi and the reflection of the Chit in it, and realising the Witness, the Self, the Knowledge Absolute, the cause of the manifestation of everything, which is hidden in the recesses of the Buddhi, is distinct from the gross and subtle, eternal, omnipresent, all-pervading and extremely subtle, and which has neither interior nor exterior and is identical with one self – fully realising this true nature of oneself, one becomes free from sin, taint, death and grief, and becomes the embodiment of Bliss. Illumined himself, he is afraid of none. For a seeker after Liberation there is no other way to the breaking of the bonds of transmigration than the realisation of the truth of one’s own Self.

ಬ್ರಹ್ಮಾಭಿನ್ನತ್ವವಿಜ್ಞಾನಂ ಭವಮೋಕ್ಷಸ್ಯ ಕಾರಣಂ .
ಯೇನಾದ್ವಿತೀಯಮಾನಂದಂ ಬ್ರಹ್ಮ ಸಂಪದ್ಯತೇ ಬುಧೈಃ .. 223.. 

ಬ್ರಹ್ಮ ಮತ್ತು ಆತ್ಮ ಇವರಿಬ್ಬರ ಐಕ್ಯತೆಯನ್ನು ಅರಿಯುವುದೇ ಮೋಕ್ಷ ಪ್ರಾಪ್ತಿಗೆ ಕಾರಣವಾಗುತ್ತದೆ. ಅದಕ್ಕಾಗಿಯೇ ಬುದ್ಧಿವಂತರು ಇದನ್ನು ಅರಿತು ಅದ್ವಿತೀಯ ಆನಂದವನ್ನು ಕೊಡುವ ಬ್ರಹ್ಮತ್ವವನ್ನು ಹೊಂದುತ್ತಾರೆ. 

223. The realisation of one’s identity with Brahman is the cause of Liberation from the bonds of Samsara, by means of which the wise man attains Brahman, the One without a second, the Bliss Absolute.

ಬ್ರಹ್ಮಭೂತಸ್ತು ಸಂಸೃತ್ಯೈ ವಿದ್ವಾನ್ನಾವರ್ತತೇ ಪುನಃ .
ವಿಜ್ಞಾತವ್ಯಮತಃ ಸಮ್ಯಗ್ಬ್ರಹ್ಮಾಭಿನ್ನತ್ವಮಾತ್ಮನಃ .. 224..

ಬ್ರಹ್ಮತ್ವವನ್ನು ಪಡೆದ ನಂತರ ಜ್ಞಾನಿಗೆ ಪುನಃ ಸಂಸಾರವಿಲ್ಲ. ಅದಕ್ಕಾಗಿ ಬ್ರಹ್ಮ ಮತ್ತು ಆತ್ಮಗಳ ಐಕ್ಯತೆಯನ್ನು ಚೆನ್ನಾಗಿ  ಅರಿಯಬೇಕು.

224. Once having realised Brahman, one no longer returns to the realm of transmigration. Therefore one must fully realise one’s identity with Brahman.

ಸತ್ಯಂ ಜ್ಞಾನಮನಂತಂ ಬ್ರಹ್ಮ ವಿಶುದ್ಧಂ ಪರಂ ಸ್ವತಃಸಿದ್ಧಂ .
ನಿತ್ಯಾನಂದೈಕರಸಂ ಪ್ರತ್ಯಗಭಿನ್ನಂ ನಿರಂತರಂ ಜಯತಿ .. 225..

 ಸತ್ಯ, ಜ್ಞಾನ, ಅನಂತ, ಶುದ್ಧ,  ಅತ್ಯುನ್ನತ, ಸ್ವತಃಸಿದ್ಧ, ನಿತ್ಯಾನಂದನು ಆದ ಬ್ರಹ್ಮನು ಆತ್ಮನಿಂದ ಬೇರೆಯಲ್ಲ. ಅವನು ನಿರಂತರವಾಗಿ ಜಯಿಸುತ್ತಾನೆ.

225. Brahman is Existence, Knowledge, Infinity, pure, supreme, self-existent, eternal and indivisible Bliss, not different (in reality) from the individual soul, and devoid of interior or exterior. It is (ever) triumphant.

Comments

Popular posts from this blog

ವಿವೇಕ ಚೂಡಾಮಣಿ - 21 - 40

ವಿವೇಕ ಚೂಡಾಮಣಿ 1-20

ವಿವೇಕ ಚೂಡಾಮಣಿ - 41-60