Posts

Showing posts from January, 2024

ವಿವೇಕ ಚೂಡಾಮಣಿ - 566-580

 ಕ್ಷೀರಂ ಕ್ಷೀರೇ ಯಥಾ ಕ್ಷಿಪ್ತಂ ತೈಲಂ ತೈಲೇ ಜಲಂ ಜಲೇ . ಸಂಯುಕ್ತಮೇಕತಾಂ ಯಾತಿ ತಥಾಽಽತ್ಮನ್ಯಾತ್ಮವಿನ್ಮುನಿಃ .. 566.. ಹಾಲಿನಲ್ಲಿ ಸುರಿದ ಹಾಲು, ಎಣ್ಣೆಯಲ್ಲಿ ಸುರಿದ ಎಣ್ಣೆ, ನೀರಿನಲ್ಲಿ ಸೇರಿಸಿದ ನೀರು ಇವು ಹೇಗೆ ಒಂದಾಗುತ್ತವೆಯೊ, ಹಾಗೆಯೇ ಆತ್ಮಜ್ಞಾನಿಯಾದ ಮುನಿಯು ಬ್ರಹ್ಮನಲ್ಲಿ ಐಕ್ಯನಾಗುತ್ತಾ ನೆ. ಏವಂ ವಿದೇಹಕೈವಲ್ಯಂ ಸನ್ಮಾತ್ರತ್ವಮಖಂಡಿತಂ . ಬ್ರಹ್ಮಭಾವಂ ಪ್ರಪದ್ಯೈಷ ಯತಿರ್ನಾವರ್ತತೇ ಪುನಃ .. 567.. ಹೀಗೆ ವಿದೇಹಮುಕ್ತಿಯನ್ನು (ಹೊಂದಿ), ಅಖಂಡ, ಸತ್ಸ್ರೂಪತ್ವವೆಂಬ ಬ್ರಹ್ಮಭಾವವನ್ನು ಪಡೆದು, ಈ ಯತಿಯು ಪುನಃ (ಸಂಸಾರಕ್ಕೆ) ಹಿಂತಿರುಗುವುದಿಲ್ಲ. ಸದಾತ್ಮೈಕತ್ವವಿಜ್ಞಾನದಗ್ಧಾವಿದ್ಯಾದಿವರ್ಷ್ಮಣಃ . ಅಮುಷ್ಯ ಬ್ರಹ್ಮಭೂತತ್ವಾದ್ ಬ್ರಹ್ಮಣಃ ಕುತ ಉದ್ಭವಃ .. 568.. ಸತ್ಸ್ವರೂಪವಾದ ಪರಮಾತ್ಮನು ಜ್ಞಾನದಿಂದ, ಅವಿದ್ಯೆಯ ಶರೀರಗಳನ್ನು ಸುಟ್ಟುಕೊಂಡು, ನಾನೂ ಒಂದೇ ಎಂಬ ಜ್ಞಾನದಿಂದ  ಇವನು ಬ್ರಹ್ಮವೇ ಆಗುತ್ತಾನೆ.  ಬ್ರಹ್ಮನಿಗೆ  ಪುನರ್ಜನ್ಮವು ಎಲ್ಲಿಯದು?  ಮಾಯಾಕ್ಲೃಪ್ತೌ ಬಂಧಮೋಕ್ಷೌ ನ ಸ್ತಃ ಸ್ವಾತ್ಮನಿ ವಸ್ತುತಃ . ಯಥಾ ರಜ್ಜೌ ನಿಷ್ಕ್ರಿಯಾಯಾಂ ಸರ್ಪಾಭಾಸವಿನಿರ್ಗಮೌ .. 569.. ನಿಷ್ಕ್ರಿಯವಾದ ಹಗ್ಗ ದಲ್ಲಿ ಹಾವು ಕಾಣುವದು ಮತ್ತು ಮರೆಯಾಗುವದು, ಇವು ಹೇಗೆ (ಅಸತ್ಯವೊ ಹಾಗೆಯೇ) ಬಂಧಮೋಕ್ಷಗಳು ಮಾಯಾಕಲ್ಪಿತವಾಗಿರುವುದರಿಂದ, ಆತ್ಮನಲ್ಲಿ ನಿಜವಾಗಿ ಇರುವುದಿಲ್ಲ. ಆವೃತೇಃ ಸದಸತ್ತ್ವಾಭ್ಯಾ...